More

    ಬಿಬಿಎಲ್‌ನಲ್ಲಿ ಡಬಲ್ ಮೀನಿಂಗ್ ಕಾಮೆಂಟರಿಯಿಂದ ಸುದ್ದಿಯಾದ ಇಶಾ ಗುಹಾ!

    ಮೆಲ್ಬೋರ್ನ್: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಇಶಾ ಗುಹಾ ನಿವೃತ್ತಿಯ ನಂತರದಲ್ಲಿ ವೀಕ್ಷಕ ವಿವರಣೆಗಾರ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಐಪಿಎಲ್‌ನಲ್ಲೂ ಕೆಲಸ ಮಾಡಿರುವ ಭಾರತ ಮೂಲದ ಇಶಾ ಗುಹಾ, ಇದೀಗ ಆಸ್ಟ್ರೇಲಿಯಾದ ಟಿ20 ಟಿ20 ಟೂರ್ನಿ ಬಿಗ್ ಬಾಷ್ ಲೀಗ್‌ನಲ್ಲಿ (ಬಿಬಿಎಲ್) ಕಾಮೆಂಟರಿ ನೀಡುತ್ತಿದ್ದಾರೆ. ಈ ವೇಳೆ ಅವರು ಆಡಿದ ಡಬಲ್ ಮೀನಿಂಗ್ ಮಾತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಅದರ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳೂ ಪರ-ವಿರೋಧದ ಮಾತುಗಳನ್ನು ಆಡಿದ್ದಾರೆ.

    ಬಿಬಿಎಲ್ ಪಂದ್ಯವೊಂದರ ವೇಳೆ ಆಸೀಸ್ ಮಾಜಿ ಕ್ರಿಕೆಟಿಗ ಆಡಂ ಗಿಲ್ ಕ್ರಿಸ್ಟ್ ಮತ್ತು ಮತ್ತೋರ್ವ ಮಾಜಿ ಕ್ರಿಕೆಟಿಗರು ಕೆರ‌್ರಿ ಓ ಕೀಫ್​ ಕಾಮೆಂಟರಿ ನೀಡುತ್ತಿದ್ದರು. ಈ ವೇಳೆ ಕ್ಯಾರಂ ಬಾಲ್ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆ ವೇಳೆ ಮಾಜಿ ಸ್ಪಿನ್ನರ್ ಆಗಿರುವ ಕೆರ‌್ರಿ ಓ ಕೀಫ್​, ಅಕಾಡೆಮಿಗಳಲ್ಲಿ ಕ್ರಿಕೆಟ್ ಕೋಚ್‌ಗಳು ಹೇಗೆ ಸ್ಪಿನ್ ಬೌಲರ್‌ಗಳನ್ನು ಹೇಗೆ ಆರಿಸುತ್ತಾರೆ ಎಂಬ ವಿವರಣೆ ನೀಡುತ್ತಿದ್ದರು. ‘ನಮ್ಮಲ್ಲಿ ಅತ್ಯಂತ ಉದ್ದವಾದ ಮಧ್ಯದ ಕೈಬೆರಳು ಹೊಂದಿರುವ ಆಟಗಾರನನ್ನು ಕೋಚ್ ಕ್ಯಾರಂ ಬಾಲ್ ಸ್ಪಿನ್ನರ್ ಆಗಿ ಆರಿಸುತ್ತಿದ್ದರು’ ಎಂದು ವಿವರಿಸಿದ್ದರು.

    ಆ ವಿವರಣೆಗೆ ಪ್ರತಿಯಾಗಿ ಇಶಾ ಗುಹಾ, ‘ನಿಮ್ಮದು ಎಷ್ಟು ದೊಡ್ಡದಿದೆ, ತೋರಿಸಿ’ ಎಂದು ಪ್ರಶ್ನೆ ಹಾಕಿದ್ದರು. ಇದರ ಬೆನ್ನಲ್ಲೇ ತಮ್ಮ ಮಾತಿನಲ್ಲಿರುವ ಡಬಲ್ ಮೀನಿಂಗ್ ಅರಿತುಕೊಂಡ ಇಶಾ ಗುಹಾ ನಗು ತಡೆಯಲಾಗದೆ ಜೋರಾಗಿ ನಕ್ಕಿದ್ದರು. ಪಕ್ಕದಲ್ಲಿದ್ದ ಗಿಲ್‌ಕ್ರಿಸ್ಟ್ ನಗುವನ್ನು ತಡೆದುಕೊಳ್ಳುವ ಪ್ರಯತ್ನದಲ್ಲಿ ವೀಕ್ಷಕವಿವರಣೆಯ ವಿಷಯವನ್ನು ತಿರುಗಿಸಿದ್ದರು.

    ಈ ಪ್ರಸಂಗದ ವಿಡಿಯೋ ವೈರಲ್ ಆದ ಬೆನ್ನಲ್ಲೇ 36 ವರ್ಷದ ಇಶಾ ಗುಹಾ, ‘ನನ್ನ ಮಾತು ಸಮಂಜಸವಾಗಿದೆ. ಅದು ಕ್ಯಾರಂ ಬಾಲ್‌ಗೆ ಸಂಬಂಧಿಸಿದ್ದು ಮಾತ್ರವಾಗಿದೆ’ ಎಂದು ಟ್ವೀಟಿಸಿದ್ದಾರೆ. ಮಾಜಿ ವೇಗಿಯಾಗಿರುವ ಇಶಾ ಗುಹಾ ಇಂಗ್ಲೆಂಡ್ ಪರ 8 ಟೆಸ್ಟ್, 83 ಏಕದಿನ ಮತ್ತು 22 ಟಿ20 ಪಂದ್ಯ ಆಡಿದ್ದು, ಕ್ರಮವಾಗಿ 29, 101 ಮತ್ತು 18 ವಿಕೆಟ್ ಕಬಳಿಸಿದ್ದಾರೆ.

    ಟೀಮ್ ಇಂಡಿಯಾದಲ್ಲಿ ಮತ್ತೆ ಶುರುವಾಯಿತೇ ಸ್ಟಾರ್ ಕ್ರಿಕೆಟಿಗರ ವಾರ್?

    ರೋಹಿತ್ ಗೈರಲ್ಲಿ ಭಾರತ ಟೆಸ್ಟ್ ತಂಡಕ್ಕೆ ಹಂಗಾಮಿ ಉಪನಾಯಕ ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts