More

  ರಶ್ಮಿಕಾ ಮಂದಣ್ಣರನ್ನು ಕನ್ನಡ ಸಿನಿಮಾದಿಂದ ಬ್ಯಾನ್​ ಮಾಡಲಾಗಿದೆಯಂತೆ..!

  ಬೆಂಗಳೂರು: ಸದಾ ಯಾವುದಾದರೂ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ರಶ್ಮಿಕಾ ಮಂದಣ್ಣ ಇದೀಗ ಮತ್ತೊಂದು ಸ್ಫೋಟಕ ಸುದ್ದಿಗೆ ಕಾರಣರಾಗಿದ್ದಾರೆ.ದುಬೈನ ಸಿನಿಮಾ ವಿಮರ್ಶಕ ಒಬ್ಬರ ಪ್ರಕಾರ ರಶ್ಮಿಕಾ ಮಂದಣ್ಣರನ್ನು ಕನ್ನಡ ಸಿನಿಮಾದಿಂದ ಬ್ಯಾನ್​ ಮಾಡಲಾಗಿದೆಯಂತೆ!

  ರಕ್ಷಿತ್​ ಶೆಟ್ಟಿ ಜೊತೆಗೆ ಬ್ರೇಕಪ್​ ಮಾಡಿಕೊಂಡ ರಶ್ಮಿಕಾ ಮಂದಣ್ಣ ಗೀತಾ ಗೋವಿಂದಂ ಚಿತ್ರದ ಮುಖಾಂತರ ಸುದ್ದಿಯಾಗಿದ್ದರು. ಈ ವಿಚಾರವಾಗಿ ಅವರು ಕನ್ನಡ ಸಿನಿಮಾ ಅಭಿಮಾನಿಗಳ ವಿರೋಧಕ್ಕೆ ಗುರಿಯಾಗಿದ್ದರು, ನಂತರ ಅನೇಕ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದ ಅವರು ಯಶಸ್ಸಿನ ಬೆನ್ನೇರಿದ್ದರು. ನಂತರ ಅವರು ಕನ್ನಡದ ಪೊಗರು ಸಿನಿಮಾದಲ್ಲಿ ನಟಿಸಿದ್ದ ಸಂದರ್ಭದಲ್ಲಿ ಅವರ ಬಾಯಿಂದಲೇ ಬಂದಿದ್ದ ಡೈಲಾಗ್​ನಿಂದಾಗಿ ಟ್ರೋಲ್​ಗೆ ಒಳಗಾಗಿದ್ದರು. ಇತ್ತೀಚೆಗೆ ಕಾಂತಾರ ಸಿನಿಮಾ ತೆರೆಗೆ ಬಂದ ಮೇಲೆ ರಿಷಭ್ ಶೆಟ್ಟಿ ಕೂಡ ರಶ್ಮಿಕಾರನ್ನ ಕೈ ಸನ್ನೆ ಮೂಲಕ ಟ್ರೋಲ್​ ಮಾಡಿದ್ದರು.

  ಇದೀಗ ದುಬೈನ ಸಿನಿಮಾ ವಿಮರ್ಶಕ, ಸೆನ್ಸಾರ್​ ಮಂಡಳಿಯ ಸದಸ್ಯ ಉಮೈರ್​ ಸಂಧು ರಶ್ಮಿಕಾ ಮಂದಣ್ಣ ಬಗ್ಗೆ ಟ್ವೀಟ್​ ಮಾಡಿದ್ದು ಅದು ಭಾರಿ ಸಂಚಲನ ಮೂಡಿಸುತ್ತಿದೆ.

  ಸಿನಿಮಾ ವಿಮರ್ಶಕ ಉಮೈರ್​ ಸಂಧು ರಶ್ಮಿಕಾ ಮಂದಣ್ಣರನ್ನ ಕನ್ನಡ ಚಿತ್ರರಂಗದಿಂದ ಬ್ಯಾನ್​ ಮಾಡಲಾಗಿದೆ ಎಂದು ಟ್ವೀಟ್​​ ಮಾಡಿದ್ದಾರೆ. ಕನ್ನಡ ಸಿನಿಮಾಗಳಿಗೆ ಗೌರವ ಕೊಡದ ಹಿನ್ನೆಲೆಯಲ್ಲಿ ರಶ್ಮಿಕಾರನ್ನ ಬ್ಯಾನ್​ ಮಾಡಲಾಗಿದೆ ಎಂದು ಸಂಧು ತಮ್ಮ ಟ್ವೀಟ್​ನಲ್ಲಿ ಹೇಳಿದ್ದಾರೆ. ಆದರೆ ಈ ವಿಚಾರವಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಯಾವುದೇ ಅಧಿಕೃತ ಘೋಷಣೆ ಹೊರ ಬಿದ್ದಿಲ್ಲ. ಈ ವಿಚಾರ ಇನ್ನು ಯಾವ ದಿಕ್ಕನ್ನು ಪಡೆದುಕೊಳ್ಳುತ್ತದೆ ಎನ್ನುವುದು ಕುತೂಹಲಕಾರಿ ಸಂಗತಿ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts