More

    ಪಾಕಿಸ್ತಾನದ ವಿಮಾನ ದುರಂತಕ್ಕೆ ಕಾರಣವಾಗಿದ್ದು ಕರೊನಾ…! ತನಿಖೆಯಲ್ಲಿ ಹೊರಬಿದ್ದ ಅಚ್ಚರಿ

    ಇಸ್ಲಾಮಾಬಾದ್​: ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯತ್ತಿದ್ದಾಗ ದುರಂತಕ್ಕೀಡಾಗಿ 97 ಜನರನ್ನು ಬಲಿ ಪಡೆದ ಪಾಕಿಸ್ತಾನದ ವಿಮಾನ ದುರಂತಕ್ಕೆ ಕರೊನಾ ಕಾರಣ…!

    ಹೌದು… ಇಂಥದ್ದೊಂದು ಅಚ್ಚರಿಯ ವಿಚಾರವನ್ನು ತನಿಖಾಧಿಕಾರಿಗಳು ಬಯಲು ಮಾಡಿದ್ದಾರೆ. ಆರಂಭದಲ್ಲಿ ವಿಮಾನ ದುರಂತಕ್ಕೆ ಪೈಲಟ್​ ಕಾರಣ ಎಂದು ಆರೋಪಿಸಲಾಗಿತ್ತು. ಹಲವು ನಿಗದಿತ ನಿಯಮಗಳ ಪಾಲನೆಯಾಗದಿರುವುದು ಮುಂದುವರಿದ ತನಿಖೆಯಲ್ಲಿ ಗೊತ್ತಾಗಿದೆ ಎಂದು ವಿಮಾನ ಯಾನ ಸಚಿವ ಗುಲಾಂ ಸರ್ವರ್​ ಖಾನ್​ ಹೇಳಿದ್ದಾರೆ.

    ಇದನ್ನೂ ಓದಿ; ನೂರಾರು ಜನರ ಪ್ರಾಣ ಉಳಿಸಿದ ಏರ್​ ಇಂಡಿಯಾ ಸಿಬ್ಬಂದಿ 

    ಪಾಕಿಸ್ತಾನ ಇಂಟರ್​ ನ್ಯಾಷನಲ್​ ಏರ್​ಲೈನ್ಸ್​ ವಿಮಾನ ಕರಾಚಿಯಲ್ಲಿ ಕೆಳಗಿಳಿಯುವ ಕೆಲವೇ ಕ್ಷಣಗಳ ಮುನ್ನ ಲ್ಯಾಂಡಿಂಗ್​ ಸಾಧ್ಯವಾಗದೇ ಪಕ್ಕದ ಜನವಸತಿ ಪ್ರದೇಶದ ಮೇಲೆ ಅಪ್ಪಳಿಸಿತ್ತು. ವಿಮಾನ ಹಾರಾಟದ ವೇಳೆ ಪೈಲಟ್​ಗಳು ತಮ್ಮ ಗಮನವನ್ನು ಕೇಂದ್ರೀಕರಿಸಿರಲಿಲ್ಲ. ಪ್ರಯಾಣದುದ್ದಕ್ಕೂ ಕರೊನಾ ಮಹಾಮಾರಿಯ ಬಗ್ಗೆಯೇ ಚರ್ಚೆ ನಡೆಸಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.

    ಪೈಲಟ್​ ಎಟಿಸಿ ಮೂಲಕ ನೀಡಲಾದ ನಿರ್ದೇಶನಗಳನ್ನು ಪಾಲಿಸಿಲ್ಲ, ಇನ್ನೊಂದೆಡೆ, ಎಟಿಸಿ ಕೂಡ ಇಂಜಿನ್​ಗೆ ಧಕ್ಕೆಯಾಗಿರುವುದನ್ನು ಪೈಲಟ್​ಗೆ ತಿಳಿಸಿರಲಿಲ್ಲ ಎಂದು ಸಚಿವ ಗುಲಾಂ ಸರ್ವರ್​ ಖಾನ್​ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ನಿಗದಿತ ನಿಯಮಗಳ ಪಾಲನೆಯಾಗದಿರುವುದೇ ದುರಂತಕ್ಕೆ ಕಾರಣ ಎಂದು ಹೇಳಿದ್ದಾರೆ.

    ಇದನ್ನೂ ಓದಿ; ಪಾಕ್​ ವಿಮಾನ ದುರಂತಕ್ಕೆ ಪೈಲಟ್​ ಕಾರಣಾದನೇ? 

    ಲ್ಯಾಂಡಿಗ್​ ಸಮಯದಲ್ಲೂ ಪೈಲಟ್​ಗಳು ಕರೊನಾ ಬಗ್ಗೆ ಮಾತನಾಡುತ್ತಿದ್ದರು. ಅವರ ಗಮನ ಕೇಂದ್ರೀಕೃತವಾಗಿರಲಿಲ್ಲ. ಅವರ ಕುಟುಂಬಗಳು ಸೋಂಕಿಗೆ ಒಳಗಾಗಿರುವ ಬಗ್ಗೆ ಸಂವಾದ ನಡೆದಿತ್ತು. ವಿಮಾನವನ್ನು ಎತ್ತರಕ್ಕೆ ಕೊಂಡೊಯ್ಯುವಂತೆ ಹೇಳಿದಾಗಲೂ ಪೈಲಟ್​ ನಾನು ನೋಡಿಕೊಳ್ಳುತ್ತೇನೆ ಎಂದು ಉತ್ತರಿಸಿದ್ದ. ಇದು ಅತಿಯಾದ ಆತ್ಮವಿಶ್ವಾಸವಾಗಿತ್ತು ಎಂದು ಅವರು ಹೇಳಿದ್ದಾರೆ.

    ಕಳೆದ ಮೇ 22ರಂದು ಲಾಹೋರ್​ನಿಂದ ಕರಾಚಿಗೆ ಬರುತ್ತಿದ್ದ ಏರ್​ಬಸ್​ 320 ವಿಮಾನ ವಿಮಾನ ನಿಲ್ದಾಣದ ಬಳಿಯೇ ದುರಂತಕ್ಕೀಡಾಗಿತ್ತು. ಇಬ್ಬರು ಪವಾಸದೃಶ್ಯರಾಗಿ ಬದುಕುಳಿದಿದ್ದರು.

    ದುಸ್ವಪ್ನವಾದ ಆನ್​ಲೈನ್​ ತರಗತಿ; ಆರನೇ ತರಗತಿ ವಿದ್ಯಾರ್ಥಿನಿಯರಿಗೆ ಅತ್ಯಾಚಾರ ಬೆದರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts