More

  ಶಾರ್ಜಾದಿಂದ ಹೈದರಾಬಾದ್​ಗೆ ಬರುತ್ತಿದ್ದ ಇಂಡಿಗೋ ವಿಮಾನ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ!

  ನವದೆಹಲಿ: ಹೈದರಾಬಾದ್​ಗೆ ಬಂದಿಳಿಯಬೇಕಾಗಿದ್ದ ಇಂಡಿಗೋ ವಿಮಾನ ಪಾಕಿಸ್ತಾನದ ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿರುವುದಾಗಿ ಭಾನುವಾರ ವರದಿಯಾಗಿದೆ.

  ವಿಮಾನದಲ್ಲಿ ತಾಂತ್ರಿಕ ದೋಷ ಕಾಣಸಿಕೊಂಡಿದೆ ಎಂದು ಪೈಲಟ್​ ಎಚ್ಚರಿಕೆ ನೀಡಿದ ಬೆನ್ನಲ್ಲೇ ಯುನೈಟೆಡ್​ ಅರಬ್​ ಎಮಿರೇಟ್ಸ್​ನ​ ಶಾರ್ಜಾದಿಂದ ಬರುತ್ತಿದ್ದ 6ಇ-1406 ನಂಬರ್​ನ ಇಂಡಿಗೋ ವಿಮಾನವನ್ನು ಮುನ್ನೆಚ್ಚರಿಕಾ ಕ್ರಮವಾಗಿ ಪಾಕಿಸ್ತಾನದ ಕರಾಚಿ ಕಡೆಗೆ ತಿರುಗಿಸಲಾಯಿತು ಎಂದು ಇಂಡಿಗೋ ವಿಮಾನ ಸಂಸ್ಥೆ ತಿಳಿಸಿದೆ.

  ಅದೃಷ್ಟವಶಾತ್​ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಕರಾಚಿಯಿಂದ ಪ್ರಯಾಣಿಕರನ್ನು ಹೈದರಾಬಾದ್​ಗೆ ವಾಪಸ್​ ಕರೆತರಲು ಮತ್ತೊಂದು ವಿಮಾನವನ್ನು ಕಳುಹಿಸಿಕೊಡಲಾಗಿದೆ ಎಂದು ದೇಶದ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಇಂಡಿಗೋ ತಿಳಿಸಿದೆ.

  ವಿಮಾನದ ಎರಡನೇ ಇಂಜಿನ್​ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಸರ್ಕಾರದ ಮೂಲಗಳು ಕೂಡ ಮಾಹಿತಿ ನೀಡಿವೆ. ಕಳೆದ ಎರಡು ವಾರದಲ್ಲಿ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ಭಾರತದ ಎರಡನೇ ವಿಮಾನ ಇದಾಗಿದೆ. ಈ ತಿಂಗಳ ಆರಂಭದಲ್ಲಿ ದೆಹಲಿಯಿಂದ ದುಬೈಗೆ ತೆರಳುತ್ತಿದ್ದ ಸ್ಪೈಸ್​ಜೆಟ್ ವಿಮಾನವನ್ನು ಕರಾಚಿಗೆ ತಿರುಗಿಸಲಾಗಿತ್ತು. (ಏಜೆನ್ಸೀಸ್​)

  VIDEO| ತುಂಡುಡುಗೆ ತೊಟ್ಟು ಮುಜುಗರಕ್ಕೀಡಾದ ರಶ್ಮಿಕಾಗೆ ಏನಮ್ಮಾ ನಿನ್ನ ಫಜೀತಿ ಎಂದ ನೆಟ್ಟಿಗರು!

  ಜೂಜಾಟಕ್ಕೆ ಪೊಲೀಸ್​ ಪೇದೆ ಬಲಿ: ರಮ್ಮಿ ಆಡಲು ಮಾಡಿದ್ದ ಸಾಲದ ಮೊತ್ತ ಕೇಳಿದ್ರೆ ಶಾಕ್​ ಆಗುತ್ತೆ!

  ಸುಖಾಸುಮ್ಮನೆ ವಾಹನ ತಡೆಯದಂತೆ ಜಿಲ್ಲಾ ಎಸ್‌ಪಿಗಳಿಗೆ ಡಿಜಿಪಿ ಪ್ರವೀಣ್​ ಸೂದ್​ ಸೂಚನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts