More

    ಜಮ್ಮು ಕಾಶ್ಮೀರದಲ್ಲಿ 148 ವರ್ಷಗಳ ‘ದರ್ಬಾರ್​’ಗೆ ಬೀಳುತ್ತಾ ಬ್ರೇಕ್​?

    ಜಮ್ಮು: ಅರಸೊತ್ತಿಗೆ ಅನುಭವಿಸುತ್ತಿದ್ದವರಿಗೆ ಎಲ್ಲ ಸುಖ- ವೈಭೋಗಗಳು ತಮ್ಮ ಕಾಲಡಿಯಲ್ಲಿಯೇ ಇರಬೇಕೆಂಬ ಹಂಬಲ. ತಾವಿರುವ ಸ್ಥಳದಲ್ಲಿ ವಾತಾವರಣ, ಹವಾಮಾನ ಬದಲಾವಣೆಯನ್ನು ತಾಳಿಕೊಳ್ಳುವುದು ಅವರಿಗೆ ಅಪಥ್ಯವಾಗಿತ್ತು. ಹೀಗಾಗಿ, ಎಲ್ಲ ಅನುಕೂಲವಿದ್ದ ಸ್ಥಳದಿಂದ ಅಧಿಕಾರ ಚಲಾಯಿಸುತ್ತಿದ್ದರು. ಪ್ರಜೆಗಳು ಮಾತ್ರ ಇದ್ದಲ್ಲಿಯೇ ಇದ್ದು, ಸಂಕಷ್ಟವನ್ನು ಅನುಭವಿಸಬೇಕಾಗಿತ್ತು. ಇಂಥ ಉದ್ದೇಶಗಳಿಗಾಗಿಯೇ ಹುಟ್ಟಿಕೊಂಡಿದ್ದು ಬೇಸಿಗೆ ಅರಮನೆ, ಬೇಸಿಗೆ ರಾಜಧಾನಿ ಇತ್ಯಾದಿ. ಇತಿಹಾಸದಲ್ಲಿ ಹಲವು ರಾಜರು ಇದಕ್ಕೆ ಉದಾಹರಣೆಯಾಗಿ ಸಿಗುತ್ತಾರೆ.

    ಆದರೆ, ಅದು ರಾಜರಾಳ್ವಿಕೆಯ ಕಾಲವಾಯ್ತು… ಈಗೇಕೆ ಆ ಮಾತು ಅಂತೀರಾ… ಕಳೆದ 148 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲೂ ಇಂಥದ್ದೇ ದರ್ಬಾರ್​ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಈ ಪದ್ಧತಿಗೆ ಬ್ರೇಕ್​ ಬೀಳುವ ಸಾಧ್ಯತೆಗಳಿವೆ.

    ಪ್ರತಿವರ್ಷ ಬೇಸಿಗೆ ಅವಧಿಯಲ್ಲಿ ಜಮ್ಮು ಕಾಶ್ಮೀರದ ರಾಜಧಾನಿಯನ್ನು ಶ್ರೀನಗರಕ್ಕೆ ಸ್ಥಳಾಂತರಿಸಲಾಗುತ್ತದೆ. ಇದನ್ನು ‘ದರ್ಬಾರ್​ ಸ್ಥಳಾಂತರ’ಎಂದೇ ಕರೆಯಲಾಗುತ್ತದೆ. ಮೇ ತಿಂಗಳಿನಿಂದ ಅಕ್ಟೋಬರ್​ವರೆಗೆ ಶ್ರೀನಗರದಿಂದ ಆಡಳಿತ ನಡೆಸಲಾಗುತ್ತದೆ. ಇನ್ನುಳಿದ ನವೆಂಬರ್​ನಿಂದ ಏಪ್ರಿಲ್​ವರೆಗೆ ಮತ್ತೆ ಆಡಳಿತ ಜಮ್ಮುವಿಗೆ ವಾಪಸಾಗುತ್ತದೆ. ಈ ಪದ್ಧತಿ ಕಳೆದ ಒಂದೂವರೆ ಶತಮಾನದಿಂದ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಪ್ರಸ್ತುತ ಇಂಥದ್ದೊಂದು ಪದ್ಧತಿ ಅಗತ್ಯವೇ ಎಂದು ಸ್ವತಃ ಜಮ್ಮು ಕಾಶ್ಮೀರ ಹೈಕೋರ್ಟ್​ ಪ್ರಶ್ನಿಸಿದೆ.

    ಇದನ್ನೂ ಓದಿ; ಎರಡು ಲಕ್ಷಕ್ಕೂ ಅಧಿಕ ಭಾರತೀಯರ ಮಹಾ ಮರುವಲಸೆ; ಅಮೆರಿಕದಿಂದ ಭಾರತಕ್ಕೆ ಬರಲು ನೀಡಬೇಕು ಒಂದು ಲಕ್ಷ ರೂ…!

    ಕೋವಿಡ್​ ಸಂಕಷ್ಟದ ಹಿನ್ನೆಲೆಯಲ್ಲಿ ಈ ಬಾರಿ ದರ್ಬಾರ್​ ಸ್ಥಳಾಂತರವನ್ನು ಮೇ 4ರ ಬದಲು ಏಪ್ರಿಲ್​ 15ಕ್ಕೆ ಮುಂದೂಡಿ ಸರ್ಕಾರ ಆದೇಶಿಸಿತ್ತು. ಇಂಥದ್ದೊಂದು ಮುಂದೂಡಿಕೆ ಕೂಡ ಇತಿಹಾಸದಲ್ಲೇ ಇದೇ ಮೊದಲು. ಆದರೆ, ಒಟ್ಟಾರೆ ದರ್ಬಾರ್​ ಸ್ಥಳಾಂತರ ಅಗತ್ಯವೇ ಎಂದು ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿವೆ. ಒಂದನ್ನು ಹೈಕೋರ್ಟ್​ ಸ್ವತಃ ದಾಖಲಿಸಿಕೊಂಡಿದೆ ಎಂಬುದು ವಿಶೇಷ.
    ದರ್ಬಾರ್​ ಸ್ಥಳಾಂತರಕ್ಕೆ ಅಂದಾಜು 200 ಕೋಟಿಗೂ ಅಧಿಕ ವೆಚ್ಚವಾಗುತ್ತದೆ. ಪರೋಕ್ಷ ವೆಚ್ಚಗಳು ಇದರಲ್ಲಿ ಸೇರಿಲ್ಲ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಕೇಂದ್ರಾಡಳಿತ ಪ್ರದೇಶ ಈ ವೆಚ್ಚವನ್ನು ಭರಿಸಲು ಸಾಧ್ಯವೇ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್​ ಹಾಗೂ ನ್ಯಾಯಮೂರ್ತಿ ರಜನೀಶ್​ ಓಸ್ವಾಲ್​ ಅವರಿದ್ದ ಪೀಠ ಸರ್ಕಾರವನ್ನು ಪ್ರಶ್ನಿಸಿದೆ. ಅಲ್ಲದೇ, ಜಮ್ಮುವಿನಿಂದ ಶ್ರೀನಗರಕ್ಕೆ ಆಡಳಿತವನ್ನು ಯಾಕೆ ಸ್ಥಳಾಂತರಿಸಬಾರದು ಎಂಬುದಕ್ಕೆ ಹಲವಾರು ಕಾರಣಗಳನ್ನು ಪಟ್ಟಿ ಮಾಡಿದೆ. ಆದರೆ, ಈ ನಿಟ್ಟಿನಲ್ಲಿ ಯಾವುದೇ ನಿರ್ದೇಶನವನ್ನು ಸರ್ಕಾರಕ್ಕೆ ನೀಡಿಲ್ಲ.

    ಇದನ್ನೂ ಓದಿ;  ಜೂನ್​ 1ರ ಹೊತ್ತಿಗೆ ದಿನಕ್ಕೆ 3,000 ಸಾವು, 2 ಲಕ್ಷ ಹೊಸ ಪ್ರಕರಣ….!

    ಜನರು, ಸಂವಿಧಾನದತ್ತವಾಗಿ ನೀಡಿರುವ ಮೂಲಭೂತ ಹಕ್ಕಿನ ಭಾಗವೇ ಆಗಿರುವ ಜೀವನಾವಶ್ಯಕ ಅಗತ್ಯಗಳಿಗಾಗಿ ಪರದಾಡಬೇಕಾದ ಸ್ಥಿತಿ ಇರುವಾಗ ಈ ಸ್ಥಳಾಂತರವೆಲ್ಲ ಬೇಕೇ? ರಾಜರಾಳ್ವಿಕೆಯಲ್ಲಿ ಆರಂಭವಾದ ಈ ಪದ್ಧತಿ ಈಗಲೂ ಸ್ವೀಕಾರಾರ್ಹವೇ? ಎಂದು ಕೇಳಿದೆ.
    ಕೋವಿಡ್​19 ಭೀತಿ ನಡುವೆಯೂ ಸಾವಿರಾರು ಸರ್ಕಾರಿ ಉದ್ಯೋಗಿಗಳು, ಆಡಳಿತ ಸಾಮಗ್ರಿ, ಉಪಕರಣಗಳು ಹಾಗೂ ವಾಹನಗಳನ್ನು ಸ್ಥಳಾಂತರಿಸಿದರೆ ವೈದ್ಯಕೀಯ ವ್ಯವಸ್ಥೆ ಭಾರಿ ಪರಿಣಾಮ ಬೀರಲಿದೆ ಎಂಬ ಆತಂಕವೂ ವ್ಯಕ್ತವಾಗಿದೆ.

    ಇದನ್ನೂ ಓದಿ; ಜಮ್ಮು ಮತ್ತು ಕಾಶ್ಮೀರದ ಮೂವರು ಛಾಯಾಗ್ರಾಹಕರಿಗೆ ಪುಲಿಟ್ಜರ್​ ಪ್ರಶಸ್ತಿ

    ಕೇಂದ್ರಾಡಳಿತ ಪರ ವಕೀಲರು, ಈ ವಿಚಾರವಾಗಿ ಸಮಗ್ರ ಚರ್ಚೆ ನಡೆಯಬೇಕಾಗುತ್ತದೆ. ಅಲ್ಲದೇ. ಜಮ್ಮು ಕಾಶ್ಮೀರದ ಜನರಿಗೆ ನೀಡಲಾಗಿರುವ ಸಂವಿಧಾನಾತ್ಮಕ ಹಕ್ಕುಗಳ ಮೇಲೆ ಪರಿಣಾಮ ಉಂಟಾಗಲಿದೆಯೇ ಎಂಬುದನ್ನು ಗಮನಿಸಬೇಕಾಗಿದೆ ಎಂದು ನ್ಯಾಯಪೀಠಕ್ಕೆ ಹೇಳಿದರು.

    ಜಮ್ಮು ಕಾಶ್ಮೀರದ ಡೊಗ್ರಾ ರಾಜ ಮನೆತನದ ಮಹಾರಾಜಾ ರಣಬೀರ್​ ಸಿಂಗ್​ 1872ರಲ್ಲಿ ತನ್ನ ದರ್ಬಾರ್​ ಸ್ಥಳಾಂತರ ಮಾಡಿದ್ದ. ಅಂದಿನಿಂದ ಇಂದಿನವರೆಗೂ ಇದು ನಡೆದು ಬಂದಿದೆ.

    ಖಾಸಗಿ ಶಾಲೆಗಳಿಲ್ಲಿ ಪ್ರವೇಶ ಶುಲ್ಕದ ಶೇ.50 ಕಡಿತಕ್ಕೆ ಸಮ್ಮತಿಸಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts