More

    ನಾಯಿಗೆ ನ್ಯಾಯ ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋದ ನಟಿ ಆಯೇಷಾ!

    ಮುಂಬೈ: ಹಿರಿಯ ಬಾಲಿವುಡ್ ನಟಿ ಆಯೇಷಾ ಜುಲ್ಕಾ ತನ್ನ ಸಾಕು ನಾಯಿ ರಾಕಿಯ ನಿಗೂಢ ಸಾವಿನ 4 ವರ್ಷದ ಬಳಿಕ ನ್ಯಾಯ ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.

    ಇದನ್ನೂ ಓದಿ: ರಾಮಾಯಣದಲ್ಲಿ ಸಾಯಿ ಪಲ್ಲವಿಗೆ ದಾಖಲೆ ಸಂಭಾವನೆ.. ಎಷ್ಟು ಕೋಟಿ ಗೊತ್ತಾ?

    ಪಬ್ಲಿಕ್ ಪ್ರಾಸಿಕ್ಯೂಟರ್ ವಿಚಾರಣೆ ನಡೆಸಲು ಸೂಕ್ತ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ಆಯೇಷಾ ದೂರು ದಾಖಲಿಸಿದ್ದಾರೆ.

    ಸೆಪ್ಟೆಂಬರ್ 2020 ರಲ್ಲಿ ರಾಕಿಯನ್ನು ಅದರ ಹಾರೈಕೆದಾರ ರಾಮ್ ಆಂಡ್ರೆ ಕೊಂದಿದ್ದಾನೆ. ಹೀಗಾಗಿ ತನ್ನ ಮುದ್ದಿನ ನಾಯಿ ರಾಕಿಗೆ ನ್ಯಾಯ ದೊರಕಿಸಿಕೊಡಬೇಕಿದೆ ಎಂದು ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದಾರೆ. ಆರು ವರ್ಷದ ನಾಯಿ ಇದ್ದಕ್ಕಿದ್ದಂತೆ ನಟಿಯ ಬಂಗಲೆಯಲ್ಲಿ ಮೃತಪಟ್ಟಿತ್ತು.

    ಮಾಧ್ಯಮ ವರದಿಗಳ ಪ್ರಕಾರ, ನಾಯಿ ನೀರಿನ ತೊಟ್ಟಿಯಲ್ಲಿ ಮುಳುಗಿ ಸಾವನ್ನಪ್ಪಿದೆ ಎಂದು ಕೇರ್ ಟೇಕರ್ ನಟಿಗೆ ತಿಳಿಸಿದ್ದ. ಆದರೆ, ಆತ ದುರ್ವರ್ತನೆ ತೋರಿದ್ದು, ನಾಯಿ ಸಾವಿಗೆ ಆತನೇ ಕಾರಣ ಎಂದು ನಟಿ ಆಯೇಷಾ ನಾಯಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಪಿಎಂ ವರದಿಯಲ್ಲಿ ನಾಯಿಯನ್ನು ಉಸಿರುಗಟ್ಟಿಸಿ ಕತ್ತು ಹಿಸುಕಿ ಸಾಯಿಸಲಾಗಿದೆ, ಅದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿಲ್ಲ ಎಂದು ತಿಳಿದುಬಂದಿದೆ.

    ನಟಿ ಆಯೇಷಾ 2020ರ ಸೆಪ್ಟೆಂಬರ್ 17 ರಂದು ಎಫ್‌ಐಆರ್ ದಾಖಲಿಸಿದ್ದರು. ಕುಡಿದ ಅಮಲಿನಲ್ಲಿ ನಾಯಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಪೊಲೀಸರ ಎದುರು ಕೇರ್​ ಟೇಕರ್​ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

    ಆರೈಕೆದಾರ ಆಂಡ್ರೆ ನನ್ನು 2020ರ ಸೆಪ್ಟೆಂಬರ್ 25 ರಂದು ಬಂಧಿಸಲಾಯಿತು. ನಂತರ ಜೈಲಿಗೆ ಕಳುಹಿಸಲಾಯಿತು. ಆದರೆ, ಎರಡು ದಿನಗಳಲ್ಲೇ ಆತನಿಗೆ ಜಾಮೀನು ಮಂಜೂರಾಗಿತ್ತು.

    ಜನವರಿ 2021 ರಲ್ಲಿ ಆಂಡ್ರೆ ವಿರುದ್ಧ ಆರೋಪಗಳನ್ನು ಒಳಗೊಂಡ ಆರೋಪಪಟ್ಟಿ ಸಲ್ಲಿಸಲಾಯಿತು. ಆದರೆ ನಾಲ್ಕು ವರ್ಷಗಳಿಂದ ಪುಣೆಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣವನ್ನು ಎಳೆದಾಡಲಾಗಿದೆ.

    ‘ಆಯೇಷಾ ಜುಲ್ಕಾ ಅವರ ಮನವಿಯಲ್ಲಿ ನಾಲ್ಕು ವರ್ಷಗಳ ನಂತರವೂ ಪ್ರಕರಣದ ವಿಚಾರಣೆ ಪ್ರಾರಂಭವಾಗಿಲ್ಲ, ಏಕೆಂದರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರೋಪಪಟ್ಟಿಯನ್ನು ಇನ್ನೂ ತೆಗೆದುಕೊಂಡಿಲ್ಲ. ಪಬ್ಲಿಕ್ ಪ್ರಾಸಿಕ್ಯೂಟರ್ ವಿಚಾರಣೆ ನಡೆಸಲು ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿ ಮುಂಬೈನಲ್ಲಿರುವ ಪ್ರಾಸಿಕ್ಯೂಷನ್ ನಿರ್ದೇಶನಾಲಯಕ್ಕೆ ಆಕೆ ದೂರು ಸಲ್ಲಿಸಿದ್ದಾಳೆ.

    ಆಯೇಷಾ ಜುಲ್ಕಾ ಅವರು ಜೋ ಜೀತಾ ವೋಹಿ ಸಿಕಂದರ್, ಖಿಲಾಡಿ, ಚಾಚಿ 420, ಕುರ್ಬಾನ್, ವಕ್ತ್ ಹುಮಾರಾ ಹೈ ಮತ್ತು ಇನ್ನೂ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು 2022 ರಲ್ಲಿ ನಿರ್ದೇಶಕಿ ತನುಜಾ ಚಂದ್ರ ಅವರ ಹುಶ್ ಹುಶ್ ಮೂಲಕ ಪುನರಾಗಮನ ಮತ್ತು ಓಟಿಟಿಗೆ ಪಾದಾರ್ಪಣೆ ಮಾಡಿದರು.

    ಹೀನಾಯ ಸೋಲುಕಂಡ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts