More

    ಡಿಕೆಗೆ ಬಿಸಿ ಮುಟ್ಟಿಸಿತೇ ಎಐಸಿಸಿ?

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾದ ನಂತರ ಡಿ.ಕೆ.ಶಿವಕುಮಾರ್ ಅವರ ‘ನಾಗಾಲೋಟ’ ಗಮನಿಸಿ ಎಐಸಿಸಿ ಅವರನ್ನು ನಿಯಂತ್ರಿಸಲು ಆರಂಭಿಸಿದೆಯೇ ಎಂಬ ಬಗ್ಗೆ ಚರ್ಚೆಯೊಂದು ಕಾಂಗ್ರೆಸ್ ವಲಯದಲ್ಲಿ ಶುರುವಾಗಿದೆ. ಪಕ್ಷದ ಪರ ಪ್ರಚಾರ ಮತ್ತು ಪ್ರತಿಪಕ್ಷದ ಟೀಕೆಯನ್ನು ಹಿಮ್ಮೆಟ್ಟಿಸಲು ಎಐಸಿಸಿ ಇತ್ತೀಚಿನ ವರ್ಷಗಳಲ್ಲಿ ಜಾಲತಾಣ ಘಟಕಕ್ಕೆ ವಿಶೇಷ ಮಹತ್ವ ನೀಡುತ್ತಿದೆ.

    ಈ ಘಟಕಕ್ಕೆ ನೇಮಕ ಮಾಡಲು ಒಂದಷ್ಟು ಮಾನದಂಡಗಳನ್ನು ಹಾಕಿಕೊಂಡಿತ್ತು. ಜತೆಗೆ ರಾಜ್ಯಗಳ ಸಾಮಾಜಿಕ ಜಾಲತಾಣ ಘಟಕದೊಂದಿಗೆ ಎಐಸಿಸಿ ನೇರ ನಿಯಂತ್ರಣವನ್ನೂ ಹೊಂದಿತ್ತು. ಹೀಗಿದ್ದರೂ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಸೋಷಿಯಲ್ ಮೀಡಿಯಾ ಸೆಲ್​ನಲ್ಲಿ ಬದಲಾವಣೆ ಮಾಡಿದ್ದರು. ಸೋಷಿಯಲ್ ಮೀಡಿಯಾ ಸಂಚಾಲಕರಾಗಿ ಶ್ರೀವತ್ಸ ನೇಮಕವಾಗಿತ್ತು. ಆದರೆ, ಇದೀಗ ಇನ್ನು ಮುಂದೆ ಇಂತಹ ನೇಮಕ ಮಾಡಬಾರದು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಹೇಳುವ ಮೂಲಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಿಗೆ ಈ ವಿಭಾಗದಲ್ಲಿ ನೇಮಕ ಮಾಡುವ ಅಧಿಕಾರ ಇಲ್ಲ ಎಂದಿದ್ದಾರೆ.

    ಹಸಿವಿನಿಂದ ಕಂಗೆಟ್ಟು ಸತ್ತ ನಾಯಿಯ ಮಾಂಸವನ್ನೇ ತಿಂದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts