More

    ನೀರಾವರಿ ಯೋಜನೆ ಅನುಷ್ಠಾನ ಮಾಡದ ರಡ್ಡಿ-ಆಚಾರ್ ವಾಗ್ದಾಳಿ

    ಕುಕನೂರು: ಕ್ಷೇತ್ರದಲ್ಲಿ ಅತಿ ಹೆಚ್ಚು ಬಾರಿ ಆಡಳಿತ ನಡೆಸಿದರೂ ಮಾಜಿ ಸಚಿವ ಬಸವರಾಜ ರಾಯರಡ್ಡಿ ನೀರಾವರಿ ಯೋಜನೆ ಅನುಷ್ಠಾನ ಮಾಡಲಿಲ್ಲ. ಆದರೆ ಶಾಸಕನಾಗಿ ನೀರಾವರಿ ಕನಸನ್ನು ಸಹಕಾರಗೊಳಿಸಿದ್ದೇನೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.

    ಇದನ್ನೂ ಓದಿ: ಸಮ್ಮಿಶ್ರ ಸರ್ಕಾರದಲ್ಲಿ ಕೆರೆ ತುಂಬಿಸುವ ಯೋಜನೆ ಅನುಮೋದನೆ; ಮಾಜಿ ಸಚಿವ ಬಸವರಾಜ ರಾಯರಡ್ಡಿ

    ಕೃಷ್ಣ ಬಿ ಸ್ಕೀಂ ಯೋಜನೆ 2ನೇ ಹಂತದ ಅನುಮೋದನೆ

    ತಾಲೂಕಿನ ನಿಟ್ಟಾಲಿ ಗ್ರಾಮದಲ್ಲಿ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಈ ಹಿಂದೆ ಕಾಂಗ್ರೆಸ್ ನಡೆ ಕೃಷ್ಣೆಯ ಕಡೆ ಎಂದು ಕ್ಷೇತ್ರದ ಜನರಿಗೆ ಮೋಸ ಮಾಡಿ ಕೃಷ್ಣ ಬಿ ಸ್ಕೀಂ ಯೋಜನೆಯ ಎರಡನೇ ಹಂತ ಯೋಜನೆಗೆ ಅನುಮೋದನೆ ಮಾಡಲಿಲ್ಲ. ಕ್ಷೇತ್ರದಲ್ಲಿ ನೀರಾವರಿ ಮಾಡುವ ಕನಸು ಕಟ್ಟಿಕೊಂಡು ಬಂದಿದ್ದು, ಜನರ ಆಶೀರ್ವಾದದಿಂದ ಆಯ್ಕೆಯಾದ ತಕ್ಷಣ ಕೃಷ್ಣ ಬಿ ಸ್ಕೀಂ ಯೋಜನೆಯ ಎರಡನೇ ಹಂತದ ಕಾಮಗಾರಿಗೆ ಅನುಮೋದನೆ ಪಡೆಯಲಾಯಿತು.

    ಜನರಿಗೆ ಸುಳ್ಳು ಹೇಳಿ ರಾಯರೆಡ್ಡಿ ರಾಜಕಾರಣ

    1,750 ಕೋಟಿ ರೂ. ತರುವ ಮೂಲಕ ಎರಡು ವರ್ಷದಲ್ಲಿಯೇ ಯಲಬುರ್ಗಾದಲ್ಲಿ ಕೆರೆ ತುಂಬಿಸುವ ಕೆಲಸ ಮಾಡಲಾಗಿದೆ. ಜನರಿಗೆ ಸುಳ್ಳು ಹೇಳಿ ರಾಯರೆಡ್ಡಿ ಅವರು ರಾಜಕಾರಣ ಮಾಡುತ್ತಿದ್ದಾರೆ. ಅವರು ದೇವರ ದೇವಸ್ಥಾನಕ್ಕೆ ಬರಲಿ, ನಾನು ಬರುವೆ. ಅಲ್ಲಿಯೇ ನೀರಾವರಿ ಯೋಜನೆ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಸವಾಲ್ ಹಾಕಿದರು.

    ಕ್ಷೇತ್ರದ ಜನರು ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಲಾಗಿದೆ. ರಾಯರಡ್ಡಿ ಅವರು ಬಿಸಿಲು, ಬೇಸಿಗೆ ಹಾಗೂ ಬೆವರು ಬೇಡವಾಗಿದೆ. ಚುನಾವಣೆ ಬಂದ ತಕ್ಷಣ ಕ್ಷೇತ್ರಕ್ಕೆ ಬರುತ್ತಿದ್ದಾರೆ. ರಾಯರಡ್ಡಿ ಅವರು ಜನರ ಮುಂದೆ ರೀಲ್ ಬಿಡುತ್ತಿದ್ದಾರೆ. ಅದಕ್ಕೆ ಗ್ಯಾರಂಟಿ ಕಾರ್ಡ್ ಸಾಕ್ಷಿ. ಕಾಂಗ್ರೆಸ್ ಪಕ್ಷದಿಂದ ಗೃಹಿಣಿಗೆ ಸೌಲಭ್ಯಗಳು ದೊರೆತ್ತಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರ ಕಷ್ಟವನ್ನು ಅರಿತುಕೊಂಡಿದ್ದು ಹಾಗಾಗಿ ಗ್ಯಾಸ್ ಸೌಲಭ್ಯ, ಜಲ ಜೀವನ ಮಿಷನ್ ಮೂಲಕ ಕುಡಿವ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ.

    ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರ ಪ್ರಮಾಣ ಅಧಿಕವಾಗಿತ್ತು. ಅಲ್ಲದೇ ನಿತ್ಯ ಭಯೋತ್ಪಾದಕರಿಂದ ದಾಳಿ ಆಗುತ್ತಿದ್ದವು. ಈಗ ಮೋದಿ ಅವರಿಂದ ದೇಶದ ಚಿತ್ರಣ ಬದಲಾಗಿದೆ. ಭ್ರಷ್ಟಾಚಾರ ಹಾಗೂ ಭಯೋತ್ಪಾದಕರ ದಾಳಿಗಳಿಲ್ಲ ಎಂದರು.

    ಈಗಾಗಲೇ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಬಿಪಿಎಲ್ ಹೊಂದಿದವರಿಗೆ ವರ್ಷಕ್ಕೆ 3 ಗ್ಯಾಸ್ ಸಿಲಿಂಡರ್, 5 ಕೆಜಿ ಅಕ್ಕಿ, 5 ಕೆಜಿ ಸಿರಿಧಾನ್ಯ, ಪ್ರತಿ ದಿನ ಅರ್ಧ ಲೀಟರ್ ನಂದಿ ಹಾಲು ಉಚಿತ ಸೇರಿದಂತೆ ಹಲವು ಯೋಜನೆಗಳನ್ನು ಬಿಡುಗಡೆ ಮಾಡಿದೆ ಎಂದರು. ನಿವೃತ್ತ ಉಪನ್ಯಾಸಕ ಸೋಮನಗೌಡ ಪಾಟೀಲ್, ಹನುಮಂತಪ್ಪ ಮಾತನಾಡಿದರು. ಪ್ರಮುಖರಾದ ಸಿ.ಎಚ್.ಪಾಟೀಲ್, ರತನ್ ದೇಸಾಯಿ, ಶಿವಣ್ಣ ಆಡೂರು, ಹಂಚಾಳಪ್ಪ ತಳವಾರ, ಶಂಭು ಜೋಳದ, ವೀರಣ್ಣ ಹುಬ್ಬಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts