More

    ಐಆರ್‌ಸಿಆಸ್‌ಗೆ ಅತ್ಯುತ್ತಮ ಜಿಲ್ಲಾ ಶಾಖೆ ಪ್ರಶಸ್ತಿ

    ಕೊಪ್ಪಳ: ನಗರದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಗೆ ರಕ್ತ ಸಂಗ್ರಹಣೆಯಲ್ಲಿ 2021-22ನೇ ಸಾಲಿನ ಅತ್ಯುತ್ತಮ ಜಿಲ್ಲಾ ಶಾಖೆ ಪ್ರಶಸ್ತಿ ಲಭಿಸಿದ್ದು, ಬೆಂಗಳೂರಿನ ರಾಜಭವನದ ಗ್ಲಾಸ್‌ಹೌಸ್‌ನಲ್ಲಿ ರಾಜ್ಯಪಾಲ ಥಾವರಚಂದ್ ಹೆಲಲೋತ್ ಮಂಗಳವಾರ ಪ್ರಧಾನ ಮಾಡಿದರು.

    ಇದನ್ನೂ ಓದಿ: ಸಾಕ್ಷಿ ಮಲ್ಲಿಕ್ ಕಣ್ಣೀರು… ಮೋದಿಜಿ ನೀವು ಕೊಟ್ಟ ಈ ಪದ್ಮಶ್ರೀ ಪ್ರಶಸ್ತಿ ನನಗೆ ಬೇಡವೆಂದ ಬಜರಂಗ್​!

    ಹೆಚ್ಚಿನ ರಕ್ತದಾನ ಶಿಬಿರ ಹಾಗೂ 10 ಸಾವಿರ ಯೂನಿಟ್ ಸಂಗ್ರಹಣೆ ಮಾಡಿದ ಸಾಧನೆಗೆ ಲಭಿಸಿದ ಪ್ರಶಸ್ತಿಯನ್ನು ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಕೊಪ್ಪಳ ಶಾಖೆ ಅಧ್ಯಕ್ಷ, ಜಿಲ್ಲಾಧಿಕಾರಿಯೂ ಆದ ನಲಿನ್ ಅತುಲ್ ಹಾಗೂ ಚೇರಮನ್ ಸೋಮರಡ್ಡಿ ಅಳವಂಡಿ ಸ್ವೀಕರಿಸಿದರು.

    ಡಿಸಿ ನಲಿನ್ ಅತುಲ್ ಮಾತನಾಡಿ, ಕೊಪ್ಪಳ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸತತ ಐದು ವರ್ಷಗಳಿಂದ ರಾಜ್ಯ ಶಾಖೆ ನೀಡುವ ವಿವಿಧ ಪ್ರಶಸ್ತಿಗೆ ಭಾಜನವಾಗುತ್ತಿರುವುದು ಹೆಮ್ಮೆಯ ಸಂಗತಿ. ಜಿಲ್ಲೆಯಲ್ಲಿ ರಕ್ತ ಹೀನತೆ, ಅಪೌಷ್ಟಿಕತೆ ದೊಡ್ಡ ಪ್ರಮಾಣದಲ್ಲಿದ್ದು, ನಿಯಂತ್ರಣ ಮಾಡುವ ಅಗತ್ಯವಿದೆ.

    ಗರ್ಭಿಣಿಯರ ಎಚ್‌ಬಿ ಪ್ರಮಾಣ ಅತ್ಯಂತ ಕಡಿಮೆ ಇರುವುದು ಬೇಸರದ ಸಂಗತಿ. ಪರಿಹರಿಸಲು ಎಲ್ಲರೂ ಒಗ್ಗೂಡಿ ಪ್ರಯತ್ನಿಸೋಣ ಎಂದರು.
    ಉಪ ಸಭಾಪತಿಗಳಾದ ಡಾ.ಗವಿಸಿದ್ದನಗೌಡ ಜಿ.ಪಾಟೀಲ್, ನಿರ್ದೇಶಕರಾದ ಡಾ.ಚಂದ್ರಶೇಖರರಡ್ಡಿ ಎಸ್.ಕರಮುಡಿ, ಡಾ.ಮಂಜುನಾಥ ಸಜ್ಜನ್,

    ರಾಜೇಶ ಯಾವಗಲ್, ಡಾ.ಶಿವನಗೌಡ ಪಾಟೀಲ್, ಡಾ.ರವಿಕುಮಾರ ದಾನಿ ಇದ್ದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕೊಪ್ಪಳ ಶಾಖೆಗೆ ಅತ್ಯುತ್ತಮ ಶಾಖೆ ಪ್ರಶಸ್ತಿ ಲಭಿಸಿರುವುದು ಖುಷಿ ತಂದಿದ್ದು, ಜವಾಬ್ದಾರಿಯನ್ನೂ ಹೆಚ್ಚಿಸಿದೆ.
    ಡಾ.ಶ್ರೀನಿವಾಸ ಹ್ಯಾಟಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts