More

    ಖಾಸಗಿ ಆಸ್ಪತ್ರೆಗಳ ವಸೂಲಿ ದಂಧೆಗೆ ಬ್ರೇಕ್​ ಹಾಕಲು ಐಪಿಎಸ್​ ಅಧಿಕಾರಿ ಡಿ. ರೂಪಾ ಟೀಂ ಸಜ್ಜು

    ಬೆಂಗಳೂರು: ಕರೊನಾ ಸಂಕಷ್ಟ ಕಾಲದಲ್ಲೂ ಚಿಕಿತ್ಸೆ ಹೆಸರಿನಲ್ಲಿ ರೋಗಿಗಳಿಂದ ವಸೂಲಿಗೆ ದಂಧೆಗಿಳಿದಿರುವ ಕೆಲ ಖಾಸಗಿ ಆಸ್ಪತ್ರೆಗಳಿಗೆ ಬಿಸಿ ಮುಟ್ಟಿಸಲು ಸ್ವತಃ ಐಪಿಎಸ್​ ಅಧಿಕಾರಿ ಡಿ. ರೂಪಾ ಅವರೇ ಖುದ್ದು ಆಸಕ್ತಿವಹಿಸಿದ್ದಾರೆ.

    ನಿನ್ನೆ(ಬುಧವಾರ) ಕರೊನಾ ರೋಗಿಯೊಬ್ಬರಿಗೆ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆ 5 ಲಕ್ಷ ರೂ. ಬಿಲ್‌ ಮಾಡಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಅಪೋಲೋ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಗರಂ ಆದ ಸಚಿವರು, ನಿಗದಿತ ದರಕ್ಕಿಂತಲೂ ರೋಗಿಗಳಿಂದ ಹೆಚ್ಚು ಹಣ ಪಡೆಯುತ್ತಿರುವ ವಿರುದ್ಧ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದರು.

    ಇದನ್ನೂ ಓದಿರಿ ಒಂದು ಸಾವಿರ ಕರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ: ಡಾ.ಗಿರಿಧರ್ ಕಜೆ

    ಕರೊನಾ ರೋಗಿಯೊಬ್ಬರಿಗೆ ಅಪೋಲೋ ಆಸ್ಪತ್ರೆ ಕೊಟ್ಟ 5 ಲಕ್ಷ ರೂ. ಬಿಲ್​ನ ಪ್ರತಿಯನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದ ಸಚಿವ ಡಾ.ಕೆ. ಸುಧಾಕರ್​, ಆಸ್ಪತ್ರೆಯ ವಸೂಲಿ ದಂಧೆ ವಿರುದ್ಧ ಆಕ್ರೋಶ ಹೊರಹಾಕಿದ್ದರು.

    ಸಚಿವರ ಟ್ವೀಟ್​ ಅನ್ನೇ ರೀ ಟ್ವೀಟ್​ ಮಾಡಿಕೊಂಡಿರುವ ಐಪಿಎಸ್​ ಅಧಿಕಾರಿ ಡಿ. ರೂಪಾ, ”ಸಾರ್, ನನಗೆ ಹಾಗೂ ಐಎಎಸ್ ಅಧಿಕಾರಿ ಹರ್ಷಗುಪ್ತ ಅವರಿಗೆ ಎಲ್ಲ ಆಸ್ಪತ್ರೆಗಳ ಜವಾಬ್ದಾರಿ ಕೊಟ್ಟರೆ, ಈಗಾಗಲೇ ಕೆಲವು ಆಸ್ಪತ್ರೆಗಳಲ್ಲಿ ವ್ಯವಸ್ಥೆ ಸರಿಪಡಿಸಿದಂತೆ ಇದನ್ನೂ ನಿಭಾಯಿಸುತ್ತೇವೆ. Disaster management ಕಾಯ್ದೆ ಅಡಿ ಸರ್ಕಾರ ದರ ನಿಗದಿಪಡಿಸಿದ ಆದೇಶದ ಉಲ್ಲಂಘನೆ ಕೋರ್ಟ್ ಅನುಮತಿ ಪಡೆದು ಸಂಜ್ಞೆಯ ಅಪರಾಧದಂತೆ ತನಿಖೆ ಮಾಡಬಹುದು” ಎಂದು ಸಲಹೆ ನೀಡಿದ್ದಾರೆ.

    ಕರೊನಾ ಸಂದಿಗ್ಧ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡು ಅಮಾನವೀಯವಾಗಿ ವರ್ತಿಸುತ್ತಿರುವ ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ಸರಿಪಡಿಸುವ ಜವಾಬ್ದಾರಿಯನ್ನು
    ಐಪಿಎಸ್​ ಅಧಿಕಾರಿ ಡಿ.ರೂಪಾ ಮತ್ತು ಐಎಎಸ್​ ಅಧಿಕಾರಿ ಹರ್ಷಗುಪ್ತ ಅವರಿಗೆ ಸರ್ಕಾರ ವಹಿಸಲಿದೆಯೇ ಕಾದು ನೋಡಬೇಕಿದೆ.

    ಇತ್ತೀಚೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚುವರಿಯಾಗಿ ಪಡೆದಿದ್ದ 24 ಲಕ್ಷ ರೂ. ಬಿಲ್​ ಅನ್ನು ರೋಗಿಯ ಕುಟುಂಬಕ್ಕೆ ಡಿ. ರೂಪಾ, ಹರ್ಷಗುಪ್ತ ಮತ್ತು ತಂಡ ವಾಪಸ್​ ಕೊಡಿಸುವಲ್ಲಿ ಯಶಸ್ವಿಯಾಗಿತ್ತು. ಈ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದನ್ನು ಸ್ಮರಿಸಬಹುದು.

    ರಾತ್ರಿಯಿಡೀ ಪರದಾಡಿದ ನಟಿ ಸುಧಾರಾಣಿ, ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ; ಡಾ.ಕೆ. ಸುಧಾಕರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts