More

    ಆಗಸ್ಟ್ 2 ರಂದು ಐಪಿಎಲ್ ಆಡಳಿತ ಮಂಡಳಿ ಸಭೆ

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡಳಿತ ಮಂಡಳಿ ಸಭೆ ಆಗಸ್ಟ್ 2ಕ್ಕೆ ನಿಗದಿಯಾಗಿರುವುದಾಗಿ ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ. ಇದೇ ವೇಳೆ ಸೆಪ್ಟೆಂಬರ್ 19ರಿಂದ ನವೆಂಬರ್ 8 ರವರೆಗೆ ಯುಎಇಯಲ್ಲಿ ನಡೆಯಲಿರುವ 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಅಂತಿಮ ಸ್ಪರ್ಶ ನೀಡಲಾಗುವುದು. ಆನಂತರದಲ್ಲಿ ಐಪಿಎಲ್‌ನ 8 ಫ್ರಾಂಚೈಸಿಗಳಿಗೂ ಟೂರ್ನಿಯ ಬಗ್ಗೆ ಸ್ಪಷ್ಟಚಿತ್ರಣ ಸಿಗಲಿದೆ ಎಂದು ಹೇಳಲಾಗಿದೆ. ಸಭೆ ಬಳಿಕ ಫ್ರಾಂಚೈಸಿಗಳಿಗೆ ಗುಣಮಟ್ಟದ ಕಾರ್ಯವಿಧಾನದ (ಎಸ್‌ಒಪಿ) ಮಾರ್ಗಸೂಚಿ ನೀಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
    ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಷಾ ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಗಂಗೂಲಿ ಹಾಗೂ ಷಾ ಅವರ ಅಧಿಕಾರಾವಧಿ ಈಗಾಗಲೇ ಮುಕ್ತಾಯಗೊಂಡಿದೆ. ಲೋಧಾ ಸಮಿತಿ ವರದಿಯನ್ವಯ ಕೂಲಿಂಗ್ ಆ್ ವಿರುದ್ಧದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಆ.17ರಂದು ನಡೆಯಲಿದೆ. ಜತೆಗೆ ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ಅನುಕೂಲಕ್ಕಾಗಿ ಐಪಿಎಲ್‌ನಲ್ಲಿ ಕಡಿಮೆ ಡಬಲ್ ಹೆಡರ್ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ.
    ಜೈವಿಕ ಸುರಕ್ಷ ವಾತಾವರಣದಲ್ಲಿ ಟೂರ್ನಿ ನಡೆಯಲಿದೆ. ್ರಾಂಚೈಸಿಗಳ ಪಾಲಿಗೆ ಆದಾಯದ ಮೂಲಗಳಲ್ಲಿ ಒಂದಾಗಿರುವ ಗೇಟ್ ಹಣ ಸಂಗ್ರಹದ ಕುರಿತು ಸಭೆಯಲ್ಲಿ ಪ್ರಮುಖ ವಿಷಯವಾಗಿ ಚರ್ಚೆಗೆ ಬರಲಿದೆ. ಜೈವಿಕ ಸುರಕ್ಷತಾ ವಾತಾವರಣದ ಪರಿಶೀಲಿಸಲು ಎಲ್ಲ ್ರಾಂಚೈಸಿಗಳು ಪ್ರತ್ಯೇಕ ತಂಡ ಕಳುಹಿಸಲು ನಿರ್ಧರಿಸಿವೆ.

    ವ್ಯಾಗ್ಸ್ ಕುರಿತು ಚರ್ಚೆ ಆಗಸ್ಟ್ 2 ರಂದು ಐಪಿಎಲ್ ಆಡಳಿತ ಮಂಡಳಿ ಸಭೆ

    ಟೂರ್ನಿಯ ವೇಳೆ ಜೈವಿಕ-ಸುರಕ್ಷಾ ವಾತಾವರಣವನ್ನು ನಿರ್ಮಿಸಿಕೊಳ್ಳಲು ಆಟಗಾರರ ಪತ್ನಿ-ಮಕ್ಕಳು ಅಥವಾ ಗೆಳತಿಗೆ (ವ್ಯಾಗ್ಸ್) ನಿರ್ಬಂಧದ ಬಗೆಗಿನ ವಿಷಯವೂ ಸಭೆಯ ಕಾರ್ಯಸೂಚಿಯಲ್ಲಿದೆ. ಒಂದು ವೇಳೆ ಕುಟುಂಬ ಸದಸ್ಯರನ್ನು ಆಟಗಾರರಿಂದ ದೂರವಿಟ್ಟರೆ ಅದು ಅಪರಾಧವಾಗುತ್ತದೆ ಎಂಬುದು ಫ್ರಾಂಚೈಸಿಯ ಹಿರಿಯ ಅಧಿಕಾರಿಯೊಬ್ಬರ ಅಳಲಾಗಿದೆ. ಆಟಗಾರರನ್ನು 2 ತಿಂಗಳ ಕಾಲ ಕುಟುಂಬದಿಂದ ಸಂಪೂರ್ಣವಾಗಿ ಹೊರಗಿಡುವುದು ಸರಿಯಲ್ಲ. ಆದರೆ, ಕುಟುಂಬ ಸದಸ್ಯರಿಗೆ ಅನುಮತಿ ನೀಡುವುದು ಕೂಡ ಅಷ್ಟು ಸೂಕ್ತವಲ್ಲ. ಹೀಗಾಗಿ ಈ ಗೊಂದಲ ಸಭೆಯಲ್ಲಿ ಪರಿಹಾರವಾಗಲಿದೆ. ಈ ಹಿಂದೆ ಐಪಿಎಲ್ ವೇಳೆ ನಿರ್ಧಿಷ್ಟ ಸಮಯದ ವೇಳೆಗೆ ಪತ್ನಿ, ಗೆಳತಿ, ಮಕ್ಕಳ ಸಹಿತ ಕುಟುಂಬದ ಜತೆಗೆ ಬೆರೆಯಲು ಆಟಗಾರರಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಕರೊನಾ ಭೀತಿಯಿಂದಾಗಿ ಈಗಿನ ಪರಿಸ್ಥಿತಿ ಭಿನ್ನವಾಗಿದೆ. ಆಟಗಾರರೊಂದಿಗೆ ಕುಟುಂಬದವರೂ ಯುಎಇಗೆ ಪ್ರಯಾಣಿಸಿದರೆ ಆಗ ಹೋಟೆಲ್ ರೂಂಗಳಲ್ಲಿ ಜಾಗದ ವ್ಯವಸ್ಥೆ ಮಾಡುವುದು ಕಷ್ಟಕರವಾಗಲಿದೆ. ಇನ್ನು ಕೆಲ ಆಟಗಾರರ ಮಕ್ಕಳು 3-5 ವರ್ಷ ವಯಸ್ಸಿನವರಾಗಿದ್ದು, ಅವರನ್ನು ಜೈವಿಕ-ಸುರಕ್ಷಾ ವಾತಾವರಣದ ಕಾರಣ ಹೋಟೆಲ್ ರೂಂಗಳಲ್ಲಿ 2 ತಿಂಗಳ ಕಾಲ ಕೂಡಿಹಾಕುವುದು ಕೂಡ ಸಾಧ್ಯವಾಗದು ಎಂದು ಫ್ರಾಂಚೈಸಿ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಬಿಸಿಸಿಐ ಮಾರ್ಗಸೂಚಿಗಳ ಎಸ್‌ಒಪಿ ಬಿಡುಗಡೆಯಾದ ಬಳಿಕ ಎಲ್ಲವೂ ಸ್ಪಷ್ಟವಾಗಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts