More

    ಸ್ಟಾರ್ ಆಟಗಾರರಿಗೆ ಕೈಕೊಟ್ಟ ಐಪಿಎಲ್ ಫ್ರಾಂಚೈಸಿಗಳು

    ಬೆಂಗಳೂರು: ಮುಂಬರುವ ಐಪಿಎಲ್‌ಗೆ ಆಟಗಾರರ ರಿಟೇನ್ ಪಟ್ಟಿ ಪ್ರಕಟಿಸಲಾಗಿದೆ. ನಿರೀಕ್ಷೆಯಂತೆ ಕೆಲ ಆಟಗಾರರು ತಮ್ಮ ತಂಡಗಳಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಕೆಲ ಆಟಗಾರರನ್ನು ಉಳಿಸಿಕೊಂಡಿರುವುದು ಅಚ್ಚರಿ ಮೂಡಿಸಿದರೆ, ಕೆಲ ಆಟಗಾರರನ್ನು ಕೈಬಿಟ್ಟಿರುವುದು ಕೂಡ ಅಚ್ಚರಿಗೆ ಕಾರಣವಾಗಿದೆ. ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದ ಪಾಂಡ್ಯ ಸಹೋದರರಾದ ಹಾರ್ದಿಕ್ ಹಾಗೂ ಕೃನಾಲ್ ಅವರನ್ನು ಕೈಬಿಡಲಾಗಿದೆ. 7 ವರ್ಷಗಳ ಹಿಂದೆ ಮುಂಬೈ ತಂಡ ನಡೆಸಿದ ಪ್ರತಿಭಾನ್ವೇಷಣೆ ಮೂಲಕ ಪಾಂಡ್ಯ ಸಹೋದರರನ್ನು ಆಯ್ಕೆ ಮಾಡಲಾಗಿತ್ತು.

    ಇದೀಗ ಪಾಂಡ್ಯ ಸಹೋದರರು ನೂತನ ಫ್ರಾಂಚೈಸಿ ಹಾಗೂ ತವರಿನ ಅಹಮದಾಬಾದ್ ತಂಡ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗಿದೆ. ಅಲ್ಲದೆ, ಮುಂಬೈ ಇಂಡಿಯನ್ಸ್ ತಂಡ ಇಶಾನ್ ಕಿಶನ್, ಕ್ವಿಂಟನ್ ಡಿ ಕಾಕ್, ಸನ್‌ರೈಸರ್ಸ್‌ ತಂಡ ಪ್ರಮುಖ ವೇಗಿಗಳಾದ ಭುವನೇಶ್ವರ್ ಕುಮಾರ್,ಟಿ.ನಟರಾಜನ್, ಆರಂಭಿಕ ಹಂತದಿಂದಲೂ ಸಿಎಸ್‌ಕೆ ತಂಡದ ಭಾಗವಾಗಿದ್ದ ಸುರೇಶ್ ರೈನಾ, ಅಂಬಟಿ ರಾಯುಡು, ಶಾರ್ದೂಲ್ ಠಾಕೂರ್, ಕನ್ನಡಿಗ ರಾಬಿನ್ ಉತ್ತಪ್ಪ, ಡೆಲ್ಲಿ ತಂಡದಿಂದ ಶಿಖರ್ ಧವನ್, ಶ್ರೇಯಸ್ ಅಯ್ಯರ್, ಕಗಿಸೊ ರಬಾಡ, ಆರ್.ಅಶ್ವಿನ್, ಮಾರ್ಕಸ್ ಸ್ಟೋಯಿನಿಸ್, ಕೆಕೆಆರ್ ತಂಡದಿಂದ ಮಾಜಿ ನಾಯಕ ದಿನೇಶ್ ಕಾರ್ತಿಕ್, ಇವೊಯಿನ್ ಮಾರ್ಗನ್, ಶುಭಮಾನ್ ಗಿಲ್, ರಾಜಸ್ಥಾನ ರಾಯಲ್ಸ್ ತಂಡದಿಂದ ಬೆನ್ ಸ್ಟೋಕ್ಸ್, ಆರ್ಚರ್ ಸೇರಿದಂತೆ ಕೆಲ ಪ್ರಮುಖ ಆಟಗಾರರನ್ನು ಕೈಬಿಡಲಾಗಿದೆ.

    ಸ್ಟಾರ್ ಕ್ರಿಕೆಟಿಗರಾದ ಕೆಎಲ್ ರಾಹುಲ್ (ಪಂಜಾಬ್ ಕಿಂಗ್ಸ್), ಶ್ರೇಯಸ್ ಅಯ್ಯರ್ (ಡೆಲ್ಲಿ), ರಶೀದ್ ಖಾನ್ (ಸನ್‌ರೈಸರ್ಸ್‌), ಡೇವಿಡ್ ವಾರ್ನರ್ (ಸನ್‌ರೈಸರ್ಸ್‌) ಸ್ವಯಂಪ್ರೇರಿತವಾಗಿಯೇ ತಮ್ಮ ತಂಡಗಳನ್ನು ತೊರೆದಿದ್ದಾರೆ ಎನ್ನಲಾಗಿದೆ. ಈ ಮೂವರಿಗೂ ಎರಡು ಹೊಸ ತಂಡಗಳು ಗಾಳ ಹಾಕಿವೆ ಎಂದು ವರದಿಯಾಗಿದೆ. ಈ ಪೈಕಿ ಕನ್ನಡಿಗ ಕೆಎಲ್ ರಾಹುಲ್ ನೂತನ ಫ್ರಾಂಚೈಸಿ ಲಖನೌ ಜತೆಗೆ ದುಬಾರಿ ಮೊತ್ತಕ್ಕೆ ಸೇರ್ಪಡೆಗೊಂಡು ನಾಯಕತ್ವದ ನಿರೀಕ್ಷೆಯಲ್ಲಿದ್ದಾರೆ.

    *ಜನವರಿಯಲ್ಲಿ ಹರಾಜು
    ತಂಡಗಳಿಂದ ರಿಲೀಸ್ ಆಗಿರುವ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿದೆ. ಅದಕ್ಕೆ ಮುನ್ನ 2 ಹೊಸ ತಂಡಗಳಾದ ಲಖನೌ ಮತ್ತು ಅಹಮದಾಬಾದ್‌ಗೆ ಹರಾಜಿಗೆ ಮುನ್ನವೇ 3 ಆಟಗಾರರ ಜತೆ ಒಪ್ಪಂದ ಮಾಡಿಕೊಳ್ಳಲು ಅವಕಾಶವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts