More

    ರಾಜ್ಯದಲ್ಲಿ ಟಫ್​ ರೂಲ್ಸ್, ಐಪಿಎಲ್ ಆಟಗಾರರ ಹರಾಜು ಬೆಂಗಳೂರಿನಿಂದ ಶಿಫ್ಟ್​?

    ನವದೆಹಲಿ: ಐಪಿಎಲ್ 15ನೇ ಆವೃತ್ತಿಗೆ ಮುನ್ನ ಫೆಬ್ರವರಿ 12-13ರಂದು ಆಟಗಾರರ ಹರಾಜು ಪ್ರಕ್ರಿಯೆಯನ್ನು ಬೆಂಗಳೂರಿನಲ್ಲಿ ಆಯೋಜಿಸಲು ನಿರ್ಧರಿಸಿದ್ದ ಬಿಸಿಸಿಐ ಇದೀಗ, ಸ್ಥಳಾಂತರ ಮತ್ತು ದಿನಾಂಕ ಬದಲಾವಣೆಯ ಬಗ್ಗೆ ಚಿಂತನೆ ನಡೆಸಿದೆ. ಬೆಂಗಳೂರು ಸಹಿತ ರಾಜ್ಯದಲ್ಲಿ ಕರೊನಾ ಪ್ರಕರಣಗಳು ದಿಢೀರ್ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ, ಹೊಸ ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಇದರನ್ವಯ ನೈಟ್ ಕಫ್ರ್ಯೂ ವೀಕೆಂಡ್ ಲಾಕ್‌ಡೌನ್ ಸಹಿತ ಹಲವು ನಿರ್ಬಂಧಗಳು ಜಾರಿಯಾಗಿದ್ದು, ಹೆಚ್ಚಿನ ಜನರನ್ನು ಸೇರಿಸಿ ಹರಾಜು ಪ್ರಕ್ರಿಯೆಯನ್ನು ಆಯೋಜಿಸುವುದು ಕಷ್ಟಕರವಾಗಲಿದೆ.

    ‘ಕೆಲವು ಅಂಶಗಳು ನಮ್ಮ ವ್ಯಾಪ್ತಿಯಿಂದ ಹೊರಗಿವೆ. ಹೀಗಾಗಿ ಕಾದುನೋಡಬೇಕಿದೆ. ಬದಲಾಗುತ್ತಿರುವ ಮಾರ್ಗಸೂಚಿಗಳ ಬಗ್ಗೆ ನಾವು ಕಣ್ಣಿಡಬೇಕಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯೊಂದಿಗೆ ಚರ್ಚಿಸುತ್ತಿದ್ದೇವೆ. ಅಗತ್ಯ ಬಿದ್ದರೆ ಸ್ಥಳಾಂತರ ಮಾಡಲು ನಾವು ಸಿದ್ಧರಿದ್ದೇವೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ದಿನದಿಂದ ದಿನಕ್ಕೆ ಬದಲಾಗುತ್ತಿರುವ ಕರೊನಾ ಮಾರ್ಗಸೂಚಿಯಿಂದಾಗಿ ಬೆಂಗಳೂರಿನ ಹೋಟೆಲ್‌ಗಳೂ ಹರಾಜು ಸಮಾರಂಭದ ಬುಕಿಂಗ್‌ಗೆ ಹಿಂದೆ-ಮುಂದೆ ನೋಡುತ್ತಿವೆ. ಹರಾಜಿನಲ್ಲಿ ಫ್ರಾಂಚೈಸಿ, ಬಿಸಿಸಿಐ ಅಧಿಕಾರಿಗಳು, ಟಿವಿ ನೇರಪ್ರಸಾರ ಸಿಬ್ಬಂದಿ ಸಹಿತ ನೂರಾರು ಜನರು ಭಾಗವಹಿಸುತ್ತಾರೆ. ಹೀಗಾಗಿ ಕರೊನಾ ನಿರ್ಬಂಧದ ನಡುವೆ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸುವುದು ಕಷ್ಟವಾಗಲಿದೆ.

    ಐಪಿಎಲ್ ಹರಾಜು ಪ್ರಕ್ರಿಯೆಗೆ ಬಿಸಿಸಿಐ ಈಗಾಗಲೆ ಕೋಲ್ಕತ, ಕೊಚ್ಚಿ ಮತ್ತು ಮುಂಬೈಯನ್ನು ಮೀಸಲು ತಾಣಗಳಾಗಿ ಹೆಸರಿಸಿದೆ. ಆದರೆ ಈ ಮೂರು ನಗರಗಳಲ್ಲೂ ಸದ್ಯ ಕರೊನಾ ಹಾವಳಿ ಜೋರಾಗಿದ್ದು, ಹಲವು ನಿರ್ಬಂಧಗಳು ಜಾರಿಯಲ್ಲಿವೆ. ಹೀಗಾಗಿ ಬಿಸಿಸಿಐ 2 ದಿನಗಳ ಹರಾಜು ಪ್ರಕ್ರಿಯೆಯ ದಿನಾಂಕವನ್ನೂ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ ಎನ್ನಲಾಗಿದೆ.

    ಜ. 17ರ ಗಡುವು: ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುವ ಆಟಗಾರರ ಹೆಸರುಗಳನ್ನು ಕಳುಹಿಸಲು ರಾಜ್ಯ ಕ್ರಿಕೆಟ್ ಸಂಸ್ಥೆಗಳು ಮತ್ತು ವಿವಿಧ ದೇಶಗಳ ಕ್ರಿಕೆಟ್ ಮಂಡಳಿಗಳಿಗೆ ಬಿಸಿಸಿಐ ಜನವರಿ 17ರವರೆಗೆ ಗುಡುವು ನೀಡಿದೆ. ಒಟ್ಟಾರೆ ಸಾವಿರಕ್ಕೂ ಅಧಿಕ ಆಟಗಾರರು ಹೆಸರು ಬರುವ ನಿರೀಕ್ಷೆ ಇದ್ದರೂ, ಅಂತಿಮವಾಗಿ ಸುಮಾರು 250 ಆಟಗಾರರ ಹೆಸರು ಮಾತ್ರ ಹರಾಜಿನ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ವಿಶ್ವ ನಂ. 1 ಟೆನಿಸ್ ತಾರೆ ಜೋಕೊವಿಕ್‌ಗೆ ಲಸಿಕೆ ವಿನಾಯಿತಿ ಇಲ್ಲ, ಆಸೀಸ್ ಪ್ರವೇಶ ನಿರಾಕರಣೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts