More

    ಗುಜರಾತ್ ಟೈಟಾನ್ಸ್‌ಗೆ ಐಪಿಎಲ್ ಚಾಂಪಿಯನ್ ಪಟ್ಟ ; ಫೈನಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಎದುರು 7 ವಿಕೆಟ್ ಜಯ

    ಅಹಮದಾಬಾದ್: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ಗೆ ಪದಾರ್ಪಣೆ ಮಾಡಿದ ವರ್ಷವೇ ಗಮನಾರ್ಹ ನಿರ್ವಹಣೆ ತೋರಿದ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್-15ರ ಚಾಂಪಿಯನ್ ಪಟ್ಟ ಅಲಂಕರಿಸಿತು. ಟೂರ್ನಿಯುದ್ದಕ್ಕೂ ಅಗ್ರಸ್ಥಾನಿಯಾಗಿಯೇ ಪ್ರಭುತ್ವ ಸಾಧಿಸಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸಾರಥ್ಯದ ತಂಡ ಫೈನಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಗುಜರಾತ್ ಪದಾರ್ಪಣೆ ವರ್ಷವೇ ಚಾಂಪಿಯನ್ ಪಟ್ಟ ಅಲಂಕರಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಮತ್ತೊಂದೆಡೆ, 14 ವರ್ಷಗಳ ಬಳಿಕ ಪ್ರಶಸ್ತಿ ಕನಸಿನಲ್ಲಿದ್ದ ರಾಜಸ್ಥಾನ ನಿರಾಸೆ ಕಂಡಿತು.

    ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪ್ರಶಸ್ತಿ ಹೋರಾಟದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡುವ ಅಚ್ಚರಿಯ ನಿರ್ಧಾರ ಕೈಗೊಂಡ ರಾಜಸ್ಥಾನ ರಾಯಲ್ಸ್ ತಂಡ 9 ವಿಕೆಟ್‌ಗೆ 130 ರನ್ ಪೇರಿಲಸಷ್ಟೇ ಶಕ್ತವಾಯಿತು. ಟೂರ್ನಿಯ ಸರ್ವಾಧಿಕ ರನ್ ಸ್ಕೋರರ್ ಜೋಸ್ ಬ್ಲಟರ್‌ಗೆ (39ರನ್, 35 ಎಸೆತ, 5 ಬೌಂಡರಿ) ಕಡಿವಾಣ ಹೇರಿದ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ (17ಕ್ಕೆ 3) ರಾಯಲ್ಸ್ ಕುಸಿತದಲ್ಲಿ ಪ್ರಮುಖ ಪಾತ್ರವಹಿಸಿದರು. ಪ್ರತಿಯಾಗಿ ಗುಜರಾತ್ ಟೈಟಾನ್ಸ್ 18.1 ಓವರ್‌ಗಳಲ್ಲಿ 3 ವಿಕೆಟ್‌ಗೆ 133 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

    ರಾಜಸ್ಥಾನ ರಾಯಲ್ಸ್: 9 ವಿಕೆಟ್‌ಗೆ 130 (ಯಶಸ್ವಿ ಜೈಸ್ವಾಲ್ 22, ಜೋಸ್ ಬಟ್ಲರ್ 39, ಸಂಜು ಸ್ಯಾಮ್ಸನ್ 14, ರಿಯಾನ್ ಪರಾಗ್ 15, ಟ್ರೆಂಟ್ ಬೌಲ್ಟ್ 11, ಹಾರ್ದಿಕ್ ಪಾಂಡ್ಯ 17ಕ್ಕೆ 3, ಸಾಯಿ ಕಿಶೋರ್ 20ಕ್ಕೆ 2), ಗುಜರಾತ್ ಟೈಟಾನ್ಸ್: 18.1 ಓವರ್‌ಗಳಲ್ಲಿ 3 ವಿಕೆಟ್‌ಗೆ 133 (ಶುಭಮಾನ್ ಗಿಲ್ 45*, ಹಾರ್ದಿಕ್ ಪಾಂಡ್ಯ 34, ಡೇವಿಡ್ ಮಿಲ್ಲರ್ 32*, ಟ್ರೆಂಟ್ ಬೌಲ್ಟ್ 14ಕ್ಕೆ1, ಪ್ರಸಿದ್ಧ ಕೃಷ್ಣ 40ಕ್ಕೆ 1, ಯಜುವೇಂದ್ರ ಚಾಹಲ್ 20ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts