More

    ಸತತ 8 ಸೋಲುಗಳ ಬಳಿಕ ಗೆಲುವಿನ ಹಳಿಗೇರಿದ ಮುಂಬೈ; ರಾಜಸ್ಥಾನ ಎದುರು 5 ವಿಕೆಟ್ ಜಯ

    ಮುಂಬೈ: ಸತತ 8 ಸೋಲುಗಳಿಂದ ಪರಿತಪಿಸುತ್ತಿದ್ದ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕಡೆಗೂ ಜಯದ ನಗೆ ಬೀರಲು ಯಶಸ್ವಿಯಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಮೇಲುಗೈ ಸಾಧಿಸಿದ ಮುಂಬೈ ತಂಡ ಐಪಿಎಲ್-15ರ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲನುಭವಿಸಿತು. ಇದರೊಂದಿಗೆ ನಾಯಕ ರೋಹಿತ್ ಶರ್ಮ ತಂಡದ ಗೆಲುವಿನೊಂದಿಗೆ ಬರ್ತ್ ಡೇ ಸಂಭ್ರಮವನ್ನು ಹೆಚ್ಚಿಸಿಕೊಂಡರು.

    ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ, ಸ್ಫೋಟಕ ಬ್ಯಾಟರ್ ಜೋಸ್ ಬಟ್ಲರ್ (67ರನ್, 52 ಎಸೆತ, 5 ಬೌಂಡರಿ, 4 ಸಿಕ್ಸರ್) ಏಕಾಂಗಿ ಹೋರಾಟದ ನೆರವಿನಿಂದ ರಾಜಸ್ಥಾನ 6 ವಿಕೆಟ್‌ಗೆ 158 ರನ್ ಪೇರಿಸಿತು. ಬಳಿಕ ಆರಂಭಿಕ ವೈಲ್ಯದ ನಡುವೆಯೂ ಸೂರ್ಯಕುಮಾರ್ ಯಾದವ್ (51ರನ್, 39 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕದಾಟದ ನೆರವಿನಿಂದ ಮುಂಬೈ 19.2 ಓವರ್‌ಗಳಲ್ಲಿ 5 ವಿಕೆಟ್‌ಗೆ 161 ರನ್‌ಗಳಿಸಿ ಜಯದ ನಗೆ ಬೀರಿತು.

    ರಾಜಸ್ಥಾನ ರಾಯಲ್ಸ್: 6 ವಿಕೆಟ್‌ಗೆ 158 (ಜೋಸ್ ಬಟ್ಲರ್ 67, ಸ್ಯಾಮಸ್ 17, ಆರ್.ಅಶ್ವಿನ್ 21, ಹೃತಿಕ್ ಶೋಕೀನ್ 47ಕ್ಕೆ 2, ರಿಲೀ ಮೆರಿಡಿತ್ 24ಕ್ಕೆ 2), ಮುಂಬೈ ಇಂಡಿಯನ್ಸ್: 19.2 ಓವರ್‌ಗಳಲ್ಲಿ 5 ವಿಕೆಟ್‌ಗೆ 161 (ಸೂರ್ಯಕುಮಾರ್ ಯಾದವ್ 51, ತಿಲಕ್ ವರ್ಮ 35, ಇಶಾನ್ ಕಿಶನ್ 26, ಟಿಮ್ ಡೇವಿಡ್ 20*, ಟ್ರೆಂಟ್ ಬೌಲ್ಟ್ 26ಕ್ಕೆ 1, ಪ್ರಸಿದ್ಧ ಕೃಷ್ಣ 29ಕ್ಕೆ 1, ಆರ್.ಅಶ್ವಿನ್ 21ಕ್ಕೆ 1, ಕುಲದೀಪ್ ಸೆನ್ 29ಕ್ಕೆ 1)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts