More

    ಮುಂಬೈ ಇಂಡಿಯನ್ಸ್‌ಗೆ ಸತತ 7ನೇ ಸೋಲು; ಸಿಎಸ್‌ಕೆ ಪ್ಲೇಆಫ್ ಆಸೆ ಜೀವಂತ

    ಮುಂಬೈ: ಭಾರತೀಯ ಕ್ರಿಕೆಟ್‌ನ ಗ್ರೇಟ್ ಫಿನಿಷರ್ ಎಂದೇ ಹೆಸರಾಗಿರುವ ಎಂಎಸ್ ಧೋನಿ (28* ರನ್, 13 ಎಸೆತ, 3 ಬೌಂಡರಿ, 1 ಸಿಕ್ಸರ್) ಕಡೇ ಹಂತದಲ್ಲಿ ತೋರಿದ ಅದ್ಭುತ ನಿರ್ವಹಣೆ ಲವಾಗಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್-15ರ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 3 ವಿಕೆಟ್‌ಗಳಿಂದ ಮಣಿಸಿತು. ಕಡೇ ಓವರ್‌ನಲ್ಲಿ ಸಿಎಸ್‌ಕೆ ಜಯಿಸಲು 17 ರನ್‌ಗಳ ಅವಶ್ಯಕತೆಯಿತ್ತು. ಜೈದೇವ್ ಉನಾದ್ಕತ್ ಎಸೆದ ಓವರ್‌ನಲ್ಲಿ ಮೊದಲ ಎಸೆತದಲ್ಲಿ ಡ್ವೇನ್ ಪ್ರಿಟೋರಿಯಸ್ ಎಲ್‌ಬಿ ಯಾದರೆ, 2ನೇ ಎಸೆತದಲ್ಲಿ ಡ್ವೇನ್ ಬ್ರಾವೊ ಸಿಂಗಲ್ಸ್ ತಂದರು. ಕಡೇ 4 ಎಸೆತಗಳಲ್ಲಿ ಕ್ರಮವಾಗಿ ಸಿಕ್ಸರ್, ಬೌಂಡರಿ, ಎರಡು ರನ್ ಹಾಗೂ ಬೌಂಡರಿ ಸಿಡಿಸಿದ ಧೋನಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.
    ಮತ್ತೊಂದೆಡೆ, ಸತತ 7ನೇ ಸೋಲನುಭವಿಸಿದ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಟೂರ್ನಿಯ ಪ್ಲೇ ಆಫ್ ರೇಸ್‌ನಿಂದ ಬಹುತೇಕ ಹೊರಗುಳಿಯಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ವೇಗದ ಬೌಲರ್ ಮುಕೇಶ್ ಚೌಧರಿ (19ಕ್ಕೆ 3) ಮಾರಕ ದಾಳಿ ನಡುವೆಯೂ ತಿಲಕ್ ವರ್ಮ (51* ರನ್, 43 ಎಸೆತ, 3 ಬೌಂಡರಿ, 2 ಸಿಕ್ಸರ್) ಅಜೇಯ ಅರ್ಧಶತಕದ ನೆರವಿನಿಂದ 7 ವಿಕೆಟ್‌ಗೆ 155 ರನ್ ಗಳಿಸಿತು. ಪ್ರತಿಯಾಗಿ ಸಿಎಸ್‌ಕೆ ತಂಡ ಡೇನಿಯಲ್ ಸ್ಯಾಮ್ಸ್ (30ಕ್ಕೆ 4) ಮಾರಕ ದಾಳಿ ನಡುವೆಯೂ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 156 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts