More

    ನಂಬಿದ್ರೆ ನಂಬಿ, ಈತನ ಪ್ರಾಣ ಕಾಪಾಡಿದ್ದು ಐಫೋನ್​!

    ಅಲಾಸ್ಕಾ: ಮೊಬೈಲ್ ಫೋನ್ ​ಅಂದರೆ ಈಗ ಸಾಧ್ಯತೆಗಳ ಆಗರ. ಅದರಲ್ಲಿ ಮಾಡಲಾಗದದ್ದು ಬಹುಷಃ ಏನೂ ಇಲ್ಲಚವೋ ಏನೋ. ಕೇವಲ ಸಂವಹನಕ್ಕಾಗಿ ಹುಟ್ಟಿಕೊಂಡ ಮೊಬೈಲ್​ ಇಂದು ಸಾವಿರಾರು ಜನರಿಗೆ ಇಂದು ಅನ್ನ ಕೂಡ ಕೊಡುತ್ತಿದೆ. ಇದೀಗ ಮೊಬೈಲ್​ ಫೋನ್​ ಅಲಾಸ್ಕಾದಂತಹ ತೀವ್ರ ಚಳಿ ಇರುವ ಪ್ರದೇಶದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ವ್ಯಕ್ತಿ ಒಬ್ಬನನ್ನು ಕಾಪಾಡಿದೆ.

    ಅಮರಿಕ ಮತ್ತು ಕೆನಡಾದಲ್ಲಿ ಐಫೋನ್ 14 ಸರಣಿಯಲ್ಲಿ ಲಭ್ಯವಿರುವ ಸ್ಯಾಟಲೈಟ್ ವೈಶಿಷ್ಟ್ಯದ ಮೂಲಕ Apple ನ ತುರ್ತು SOS, ಅಲಾಸ್ಕಾದ ನಿಮಿಯುಕ್ ಪಾಯಿಂಟ್ ಬಳಿ ಸಿಲುಕಿಕೊಂಡಿದ್ದ ವ್ಯಕ್ತಿಯ ಜೀವವನ್ನು ಉಳಿಸಿದೆ.

    ನೂರ್ವಿಕ್‌ ಎಂಬ ಸ್ಥಳದಿಂದ ಕೊಟ್ಜೆಬ್ಯೂಗೆ ಸ್ನೋ-ಮಷಿನ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಕಳೆದುಹೋಗಿದ್ದರು. ನಂತರ ಅವರ ಐಫೋನ್‌ನಲ್ಲಿ ಉಪಗ್ರಹದ ಮೂಲಕ ಆ್ಯಪಲ್​ ಐಫೋನ್​ನ ತುರ್ತು SOS ಅನ್ನು ಸಕ್ರಿಯಗೊಳಿಸಿದ್ದಾರೆ. ಈ ಮಾಹಿತಿ ಅಲಾಸ್ಕಾ ಸ್ಟೇಟ್ ಟ್ರೂಪರ್ಸ್​ಗೆ ಡಿಸೆಂಬರ್ 1ರಂದು, ಎರಡು ಗಂಟೆ ಹೊತ್ತಿಗೆ ಸಿಕ್ಕಿತ್ತು.

    ವಾಯುವ್ಯ ಆರ್ಕ್ಟಿಕ್ ಬರೋ ಹುಡುಕಾಟ ಮತ್ತು ರಕ್ಷಣಾ ತಂಡ, ಆ್ಯಪಲ್​ನ SOSನ ಮಾಹಿತಿ ಆಧರಿಸಿ ತಕ್ಷಣ ಕಾರ್ಯಾಚರಣೆಗೆ ಇಳಿದಿದ್ದಾರೆ. ತಂಡ, ಆ್ಯಪಲ್​ನ ತುರ್ತು ಪ್ರತಿಕ್ರಿಯೆ ಕೇಂದ್ರ ನೀಡಿದ GPS ಲೊಕೇಷನ್​ ಆಧರಿಸಿ ನಿಮಿಯುಕ್ ಪಾಯಿಂಟ್ ಪ್ರದೇಶಕ್ಕೆ ಹೋಗಿದ್ದಾರೆ. ಸುಮಾರು ಹೊತ್ತಿನ ಹುಡುಕಾಟದ ನಂತರ ಈ ತಂಡ ಆ ವಯಸ್ಕ ಪುರುಷನನ್ನು ಪತ್ತೆಹಚ್ಚಿ ಕೊಟ್ಜೆಬ್ಯೂಗೆ ಸುರಕ್ಷಿತವಾಗಿ ಕರೆತಂದಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts