ಬೆಂಗಳೂರು: ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಿಂದ ವಿಶ್ವ ಬ್ಯಾಂಕ್ ನೆರವಿನ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ (ಕೆಯುಡಬ್ಲುಎಸ್ಎಂಪಿ) ಅಡಿ ಬೆಂಗಳೂರಿನ ಯೋಜನಾ ಮೇಲ್ವಿಚಾರಣಾ ಘಟಕ ಹಾಗೂ ಹುಬ್ಬಳ್ಳಿ, ಬೆಳಗಾವಿ ಹಾಗೂ ಕಲಬುರಗಿಯ ಯೋಜನಾ ಅನುಷ್ಠಾನ ಘಟಕಗಳಲ್ಲಿ ಖಾಲಿ ಇರುವ ತಾಂತ್ರಿಕ, ತಾಂತ್ರಿಕೇತರ ಒಟ್ಟು 47 ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಹೇಳಿದ್ದೇ ಒಂದು, ಮಾಡಿದ್ದೇ ಇನ್ನೊಂದು; ಸುಶಾಂತ್ ಸಿಂಗ್ ಬದುಕಲ್ಲಿ ರೀಲು ರಿಯಲ್ಲಾಗಲಿಲ್ಲ…
ಹುದ್ದೆಗಳು: ಅಧೀಕ್ಷಕ ಅಭಿಯಂತರ-3. ಕಾರ್ಯನಿರ್ವಾಹಕ ಅಭಿಯಂತರ -ಸಿವಿಲ್-2, ಇಲೆಕ್ಟ್ರಿಕಲ್-1. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ – ಸಿವಿಲ್-2, ಎಲೆಕ್ಟ್ರಿಕಲ್-2. ಸಹಾಯಕ ಅಭಿಯಂತರ- ಸಿವಿಲ್-9, – ಇಲೆಕ್ಟ್ರಿಕಲ್-3, ಎಂಐಎಸ್ ಎಕ್ಸ್ಪರ್ಟ್-1. ವ್ಯವಸ್ಥಾಪಕ-3, ವ್ಯವಸ್ಥಾಪಕ (ಹಣಕಾಸು)/ ಹಣಕಾಸು ಪರಿಣತ-1, ಲೆಕ್ಕಪತ್ರ ಅಧೀಕ್ಷಕ/ ಲೆಕ್ಕಪತ್ರ ಅಧಿಕಾರಿ-4, ಸಾರ್ವಜನಿಕ ಸಂಪರ್ಕಾಧಿಕಾರಿ-3, ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಹಾಗೂ ಸಮುದಾಯ ಅಭಿವೃದ್ಧಿ ಪರಿಣತ-2, ಸಾಮಾಜಿಕ ಅಭಿವೃದ್ಧಿ ಮತ್ತು ಎಂ,ಇ ಪರಿಣತ-2, ಲೆಕ್ಕ ಸಹಾಯಕ-2, ಡಿಇಒ/ ಕಂಪ್ಯೂಟರ್ ಆಪರೇಟರ್-7 ಹುದ್ದೆಗಳಿವೆ.
ಇದನ್ನೂ ಓದಿ: ಮಾಜಿ ಮ್ಯಾನೇಜರ್ ದಿಶಾ ಆತ್ಮಹತ್ಯೆ ಸುದ್ದಿ ಕೇಳಿ ತೀವ್ರ ದುಃಖಿತರಾಗಿದ್ದ ಸುಶಾಂತ್; ಇಂದು ತಾವೂ ಅದೇ ಹಾದಿ ತುಳಿದರು
ವಿದ್ಯಾರ್ಹತೆ, ಮೆರಿಟ್, ಅನುಭವದ ಆಧಾರದ ಮೇಲೆ ಮೌಖಿಕ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಗರಿಷ್ಠ ವಯೋಮಿತಿ 63 ವರ್ಷ ನಿಗದಿಪಡಿಸಲಾಗಿದೆ. ಸರ್ಕಾರಿ ಕಚೇರಿ, ನಿಗಮ ಮಂಡಳಿಗಳಲ್ಲಿ ಕಾರ್ಯನಿರ್ವಹಿಸಿದ ಹಾಗೂ ಕೆಯುಐಡಿಎಫ್ಸಿ ಸಂಸ್ಥೆಯಲ್ಲಿ ಈ ಮೊದಲು ಕಾರ್ಯನಿರ್ವಹಿಸಿ ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಶೈಕ್ಷಣಿಕ ವಿದ್ಯಾರ್ಹತೆ/ ಅನುಭವ/ ಕಾರ್ಯಸ್ಥಳ/ ಕರ್ತವ್ಯಗಳ ವಿವರವನ್ನು ಸಂಸ್ಥೆಯ ವೆಬ್ಸೈಟ್ನಲ್ಲಿ ನೀಡಲಾಗಿದೆ. ಅರ್ಹ ಮತ್ತು ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಜೂನ್ 25 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ವೆಬ್ಸೈಟ್: www.kuidfc.com/careers
ಐದು ತಿಂಗಳ ಗರ್ಭಿಣಿ ಮೇಘನಾ ಸರ್ಜಾ ಆರೋಗ್ಯ ಹೇಗಿದೆ?; ಹರಿದಾಡಿದ್ದ ವದಂತಿಗಳಿಗೆ ಸಿಕ್ಕ ಉತ್ತರ ಇದು!