More

    5 ಮ್ಯೂಚುಯಲ್ ಫಂಡ್ ವಿಭಾಗಗಳಲ್ಲಿ ಹೂಡಿಕೆ: 2023ರಲ್ಲಿ ಲಾಭದ ಸುರಿಮಳೆ

    ಮುಂಬೈ: ಇಕ್ವಿಟಿ ಮ್ಯೂಚುಯಲ್ ಫಂಡ್ ಹೂಡಿಕೆದಾರರಿಗೆ 2023 ಉತ್ತಮ ವರ್ಷವಾಗಿ ಹೊರಹೊಮ್ಮಿತು. ಅದರಲ್ಲೂ ಐದು ಇಕ್ವಿಟಿ ಮ್ಯೂಚುಯಲ್ ಫಂಡ್ ವಿಭಾಗಗಳಲ್ಲಿ ಹೂಡಿಕೆದಾರರು ಸಾಕಷ್ಟು ಲಾಭ ಮಾಡಿಕೊಂಡರು. ಸ್ಮಾಲ್ ಕ್ಯಾಪ್, ಮಿಡ್ ಕ್ಯಾಪ್, ವ್ಯಾಲ್ಯು, ಕಾಂಟ್ರಾ ಮತ್ತು ಮಲ್ಟಿ ಕ್ಯಾಪ್ – ಈ ಐದು ವರ್ಗಗಳಲ್ಲಿ 2023ರಲ್ಲಿ ಸರಾಸರಿ 30ಕ್ಕಿಂತ ಹೆಚ್ಚು ಲಾಭವು ಹೂಡಿಕೆದಾರರಿಗೆ ದೊರೆತಿರುವುದು ವಿಶೇಷವಾಗಿದೆ.

    ಇದಲ್ಲದೆ, ಈ ಇಕ್ವಿಟಿ ವರ್ಗಗಳಲ್ಲಿನ ಪ್ರತಿಯೊಂದು ಕಂಪನಿಯ ಮ್ಯೂಚುವಲ್​ ಫಂಡ್​ ಯೋಜನೆಯು ಕಳೆದ ವರ್ಷದಲ್ಲಿ ಶೇಕಡಾ 20% ಕ್ಕಿಂತ ಅಧಿಕ ಲಾಭ ನೀಡಿರುವುದು ಗಮನಾರ್ಹ ಸಂಗತಿಯಾಗಿದೆ.

    ಸ್ಮಾಲ್​ ಕ್ಯಾಪ್​ ಮ್ಯೂಚುವಲ್​ ಫಂಡ್​ಗಳು ಸಣ್ಣ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಸ್ಮಾಲ್ ಕ್ಯಾಪ್ ವರ್ಗದ ಮ್ಯೂಚುವಲ್​ ಫಂಡ್​ಗಳು 2023 ರಲ್ಲಿ ಅಂದಾಜು 41.08% ನಷ್ಟು ಸರಾಸರಿ ಆದಾಯವನ್ನು ನೀಡಿವೆ. ಸ್ಮಾಲ್ ಕ್ಯಾಪ್ ವರ್ಗದಲ್ಲಿ ಅಂದಾಜು ವಿವಿಧ ಕಂಪನಿಗಳ 24 ಯೋಜನೆಗಳಿವೆ.
    ಮಹೀಂದ್ರಾ ಮ್ಯಾನುಲೈಫ್ ಸ್ಮಾಲ್ ಕ್ಯಾಪ್ ಫಂಡ್ 57.18% ಕ್ಕಿಂತ ಹೆಚ್ಚಿನ ಲಾಭವನ್ನು ನೀಡಿತು. ಬಂಧನ್ ಸ್ಮಾಲ್ ಕ್ಯಾಪ್ ಫಂಡ್ 53.60% ಲಾಭ ನೀಡಿದೆ. ಅಲ್ಲದೆ, ನಿಪ್ಪಾನ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್ ಅತಿಹೆಚ್ಚು ಹಣ ಹೂಡಿಕೆಯಾದ ಫಂಡ್​ ಆಗಿದ್ದು, ಇದು 2023 ರಲ್ಲಿ 48.92% ಲಾಭ ಗಳಿಸಿಕೊಟ್ಟಿದೆ.

    ಮಿಡ್​ ಕ್ಯಾಪ್​ ಮ್ಯೂಚುವಲ್​ ಫಂಡ್​ಗಳು ಮಧ್ಯಮ ಗಾತ್ರದ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಮಿಡ್ ಕ್ಯಾಪ್ ವರ್ಗವು 2023 ರಲ್ಲಿ ಸರಾಸರಿ 37.04% ಆದಾಯವನ್ನು ನೀಡಿದೆ. ಮಿಡ್ ಕ್ಯಾಪ್ ವರ್ಗದಲ್ಲಿ ಅಂದಾಜು 29 ಸ್ಕೀಮ್‌ಗಳಿವೆ. ನಿಪ್ಪಾನ್ ಇಂಡಿಯಾ ಗ್ರೋತ್ ಫಂಡ್, ಮಿಡ್ ಕ್ಯಾಪ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ, 2023 ರಲ್ಲಿ 48.61% ಲಾಭ ನೀಡಿದೆ. ಮಹೀಂದ್ರಾ ಮ್ಯಾನುಲೈಫ್ ಮಿಡ್ ಕ್ಯಾಪ್ ಫಂಡ್ 47.01% ಲಾಭ ನೀಡಿದೆ. ಜೆಎಂ ಮಿಡ್‌ಕ್ಯಾಪ್ ಫಂಡ್ 44.54%ರಷ್ಟು ಲಾಭ ನೀಡಿದೆ. ಪಿಜಿಐಎಂ ಇಂಡಿಯಾ ಮಿಡ್‌ಕ್ಯಾಪ್ ಆಪರ್ಚುನಿಟೀಸ್ ಫಂಡ್ ಅಂದಾಜು 20.84% ಲಾಭ ನೀಡಿದ್ದು, ಈ ವಿಭಾಗದಲ್ಲಿ ಕಡಿಮೆ ಆದಾಯ ತಂದ ಯೋಜನೆಯಾಗಿದೆ.

    ವ್ಯಾಲ್ಯೂ ಮ್ಯೂಚುವಲ್​ ಫಂಡ್​ಗಳು ಕಡಿಮೆ ಮೌಲ್ಯಮಾಪನ ಮಾಡಿದ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ವ್ಯಾಲ್ಯು ಫಂಡ್​ ವರ್ಗವು 2023 ರಲ್ಲಿ ಅಂದಾಜು 34.37% ನಷ್ಟು ಸರಾಸರಿ ಆದಾಯ ನೀಡಿದೆ. ಈ ವರ್ಗವು 19 ಯೋಜನೆಗಳನ್ನು ಹೊಂದಿದೆ. ಮೌಲ್ಯದ ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಜೆಎಂ ವ್ಯಾಲ್ಯು ಫಂಡ್​ 47.66% ಆದಾಯ ನೀಡಿದೆ. ಆದಿತ್ಯ ಬಿರ್ಲಾ ಸನ್ ಲೈಫ್ ಪ್ಯೂರ್ ವ್ಯಾಲ್ಯೂ ಫಂಡ್ 43.02% ಲಾಭ ನೀಡಿದೆ. ಎಲ್​ಐಸಿ ಎಂಎಫ್​ ಲಾಂಗ್ ಟರ್ಮ್ ವ್ಯಾಲ್ಯೂ ಫಂಡ್ ಅಂದಾಜು 23.19% ಲಾಭ ನೀಡಿದ್ದು, ಈ ವರ್ಗದಲ್ಲಿ ಅತಿ ಕಡಿಮೆ ಆದಾಯ ನೀಡಿದ ಯೋಜನೆಯಾಗಿದೆ.

    ಕಾಂಟ್ರಾ ಫಂಡ್​ಗಳು ಅಂಡರ್​ ಪರ್ಫಾಮಿಂಗ್​ (ಕಡಿಮೆ ಪ್ರದರ್ಶನ) ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಕಾಂಟ್ರಾ ಫಂಡ್ ವರ್ಗವು 2023 ರಲ್ಲಿ ಅಂದಾಜು 34.02% ನಷ್ಟು ಸರಾಸರಿ ಆದಾಯವನ್ನು ನೀಡಿದೆ. ಈ ವರ್ಗವು ಮೂರು ಯೋಜನೆಗಳನ್ನು ಹೊಂದಿದೆ. ಎಸ್‌ಬಿಐ ಕಾಂಟ್ರಾ ಫಂಡ್, ಈ ವರ್ಗದಲ್ಲಿ ಅತಿಹೆಚ್ಚು ಹೂಡಿಕೆಯಾದ ಯೋಜನೆಯಾಗಿದೆ. ಅಂದಾಜು 38.22% ನಷ್ಟು ಆದಾಯವನ್ನು ನೀಡಿದೆ. ಈ ಯೋಜನೆಯು ರೂ 21,481.77 ಕೋಟಿ ಆಸ್ತಿಯನ್ನು ನಿರ್ವಹಿಸುತ್ತದೆ. ಕೊಟಕ್ ಇಂಡಿಯಾ ಇಕ್ಯೂ ಕಾಂಟ್ರಾ ಫಂಡ್ 35.01% ಮತ್ತು ಇನ್ವೆಸ್ಕೊ ಇಂಡಿಯಾ ಕಾಂಟ್ರಾ ಫಂಡ್ 28.82% ಲಾಭ ತಂದುಕೊಟ್ಟಿದೆ.

    ಮಲ್ಟಿ ಕ್ಯಾಪ್ ಮ್ಯೂಚುವಲ್​ ಫಂಡ್​ಗಳು ದೊಡ್ಡ, ಮಧ್ಯಮ ಮತ್ತು ಸಣ್ಣ ಗಾತ್ರದ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಮಲ್ಟಿ ಕ್ಯಾಪ್ ವರ್ಗವು 2023 ರಲ್ಲಿ ಅಂದಾಜು 32.76% ನಷ್ಟು ಸರಾಸರಿ ಆದಾಯವನ್ನು ನೀಡಿದೆ. ಮಲ್ಟಿ ಕ್ಯಾಪ್ ವಿಭಾಗದಲ್ಲಿ ಅಂದಾಜು 16 ಯೋಜನೆಗಳಿವೆ. ಎಚ್​ಡಿಎಫ್​ಸಿ ಮಲ್ಟಿ ಕ್ಯಾಪ್ ಫಂಡ್ ಅಂದಾಜು 40.19% ಲಾಭ ನೀಡಿದೆ. ಕೊಟಕ್ ಮಲ್ಟಿಕ್ಯಾಪ್ ಫಂಡ್ 39.77% ಆದಾಯ ನೀಡಿದೆ. ಎಸ್​ಬಿಐ ಮಲ್ಟಿಕ್ಯಾಪ್ ಫಂಡ್ ಅಂದಾಜು 22.48% ನಷ್ಟು ಆದಾಯ ನೀಡಿದ್ದು, ಇದು ಈ ವರ್ಗದಲ್ಲಿ ಅತಿಕಡಿಮೆ ಲಾಭ ನೀಡಿದ ಯೋಜನೆಯಾಗಿದೆ.

    ವಿವಿಧ ವರ್ಗಗಳ ಮ್ಯುಚೂವಲ್​ ಫಂಡ್​ಗಳು 2023ರಲ್ಲಿ ಗಳಿಸಿದ ಸರಾಸರಿ ಲಾಭ

    ಸ್ಮಾಲ್ ಕ್ಯಾಪ್ ಫಂಡ್ 41.08%
    ಮಿಡ್ ಕ್ಯಾಪ್ ಫಂಡ್ 37.04%
    ವ್ಯಾಲು ಫಂಡ್​ 34.37%
    ಕಾಂಟ್ರಾ ಫಂಡ್ 34.02%
    ಮಲ್ಟಿ ಕ್ಯಾಪ್ ಫಂಡ್ 32.76%

    ಸೂಪರ್​ಹಿಟ್​ ರೈಲ್ವೆ ಷೇರು: 5 ದಿನಗಳಲ್ಲಿ 42%; 6 ತಿಂಗಳಲ್ಲಿ 350%; 10 ತಿಂಗಳಲ್ಲಿ 470% ಏರಿಕೆ

    ಬಿಎಸ್​ಇ ಸೂಚ್ಯಂಕ 199.17 ಅಂಕ ಕುಸಿತ: ಐಟಿ ಷೇರುಗಳು ಹಿನ್ನಡೆ ಅನುಭವಿಸಿದ್ದೇಕೆ?

    3ನೇ ತ್ರೈಮಾಸಿಕದಲ್ಲಿ ನಿರೀಕ್ಷೆ ಮೀರಿದ ಎಚ್‌ಡಿಎಫ್‌ಸಿ ಬ್ಯಾಂಕ್ ಫಲಿತಾಂಶ: ಶೇ. 34ರಷ್ಟು ಏರಿಕೆಯೊಂದಿಗೆ ರೂ. 16,373 ಕೋಟಿ ಲಾಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts