More

    ಸೂಪರ್​ಹಿಟ್​ ರೈಲ್ವೆ ಷೇರು: 5 ದಿನಗಳಲ್ಲಿ 42%; 6 ತಿಂಗಳಲ್ಲಿ 350%; 10 ತಿಂಗಳಲ್ಲಿ 470% ಏರಿಕೆ

    ಮುಂಬೈ: ಸರ್ಕಾರಿ ಸ್ವಾಮ್ಯದ ರೈಲ್ವೆ ಕಂಪನಿಯಾದ ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್ (ಐಆರ್‌ಎಫ್‌ಸಿ) ಲಿಮಿಟೆಡ್​ ಷೇರುಗಳು ಬುಲೆಟ್ ರೈಲಿನ ವೇಗದಲ್ಲಿ ಕಾರ್ಯನಿರ್ವಹಿಸುತ್ತಿವೆ.

    ಈ ಕಂಪನಿಯ ಷೇರುಗಳ ಬೆಲೆ ಒಂದೇ ದಿನದಲ್ಲಿ ಶೇಕಡಾ 12 ರಷ್ಟು ಹೆಚ್ಚಳ ಕಂಡು 146.69 ರೂಪಾಯಿ ತಲುಪಿದೆ. ಮಂಗಳವಾರದ ಈ ಷೇರು ಬೆಲೆಯು ಒಂದು ವರ್ಷದ ಗರಿಷ್ಠ ಮಟ್ಟದ್ದಾಗಿದೆ.

    ಕಂಪನಿಯ ಷೇರುಗಳು ಹಿಂದಿನ ಸೋಮವಾರ 130.11 ರಲ್ಲಿ ವಹಿವಾಟು ನಡೆಸಿದ್ದವು. ಅಲ್ಲದೆ, ಈ ಷೇರುಗಳಿಗೆ 52 ವಾರಗಳ ಕನಿಷ್ಠ ಮಟ್ಟ 25.45 ರೂಪಾಯಿ ಆಗಿತ್ತು.

    ಕಳೆದ 6 ತಿಂಗಳುಗಳಲ್ಲಿ ಐಆರ್‌ಎಫ್‌ಸಿ ಷೇರುಗಳು ಶೇಕಡಾ 350% ಕ್ಕಿಂತ ಹೆಚ್ಚು ಏರಿಕೆ ಕಂಡಿವೆ. ಕಳೆದ 5 ದಿನಗಳಲ್ಲಿ, ಶೇಕಡಾ 42.66ರಷ್ಟು ಲಾಭವನ್ನು ನೀಡಿವೆ. ಈ ಕಂಪನಿಯ ಷೇರುಗಳು ಕೇವಲ 6 ತಿಂಗಳಲ್ಲಿ ಶೇಕಡಾ 350 ರಷ್ಟು ಏರಿಕೆ ಕಂಡಿವೆ.

    ಜುಲೈ 17, 2023 ರಂದು ಈ ಕಂಪನಿಯ ಷೇರುಗಳ ಬೆಲೆ ರೂ. 32.47 ಆಗಿತ್ತು. ಜನವರಿ 16, 2024 ರಂದು ರೂ. 146.69ಕ್ಕೆ ಏರಿಕೆಯಾಗಿದೆ. ಈ ಷೇರುಗಳ ಬೆಲೆ ಒಂದು ತಿಂಗಳಲ್ಲಿ 55%ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಈ ಷೇರುಗಳ ಬೆಲೆ 94.36 ರಿಂದ 146.69 ಕ್ಕೆ ಏರಿದೆ.

    ಕಳೆದ 10 ತಿಂಗಳುಗಳಲ್ಲಿ ಐಆರ್​ಎಫ್​ಸಿ ಷೇರುಗಳ ಬೆಲೆ ನಾಟಕೀಯ ಏರಿಕೆ ಕಂಡಿದಎ. ಕಳೆದ 10 ತಿಂಗಳುಗಳಲ್ಲಿ ಈ ಕಂಪನಿಯ ಷೇರುಗಳ ಬೆಲೆ ಶೇಕಡಾ 470ಕ್ಕಿಂತ ಹೆಚ್ಚು ಹೆಚ್ಚಳ ಕಂಡಿದೆ. ಮಾರ್ಚ್ 2023 ರ ಅಂತ್ಯದ ವೇಳೆಗೆ ಐಆರ್​ಎಫ್​ಸಿ ಷೇರುಗಳ ಬೆಲೆ ರೂ. 25.45 ಆಗಿತ್ತು.

    ಐಆರ್​ಎಫ್​ಸಿಯು ಮಿನಿರತ್ನ ಕಂಪನಿಯಾಗಿದ್ದು, ಇದರ ಆಡಳಿತ ನಿಯಂತ್ರಣವು ರೈಲ್ವೆ ಸಚಿವಾಲಯದಲ್ಲಿದೆ. ಐಆರ್​ಎಫ್​ಸಿಯು ರೈಲ್ವೆ ಮೂಲಸೌಕರ್ಯವನ್ನು ಹೆಚ್ಚಿಸಲು ಬಾಂಡ್ ಮಾರುಕಟ್ಟೆಯಲ್ಲಿ ಹಣವನ್ನು ಸಂಗ್ರಹಿಸುತ್ತದೆ. ಇದು ರೈಲ್ವೆ ಸಚಿವಾಲಯದ ಮಾರುಕಟ್ಟೆ ಎರವಲು ಅಂಗವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಸ್ಪರ್ಧಾತ್ಮಕ ಬೆಲೆಗಳಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಬಂಡವಾಳ ಮಾರುಕಟ್ಟೆಗಳಲ್ಲಿ ಎರವಲು ಪಡೆಯುವ ಮೂಲಕ ಹಣವನ್ನು ಸಂಗ್ರಹಿಸಲು ಶ್ರಮಿಸುತ್ತದೆ.

    ಕಂಪನಿಯು ಐದು ವರ್ಷಗಳಲ್ಲಿ ವಾರ್ಷಿಕವಾಗಿ ಶೇಕಡಾ 25.3 ಗಳಿಕೆ ಹೆಚ್ಚಳವನ್ನು ದಾಖಲಿಸಿದೆ. ಆದರೆ, ಕಂಪನಿಯ ಸ್ಟಾಕ್ ಬೆಲೆಗಳು ಪ್ರಸ್ತುತ ಪುಸ್ತಕ ಮೌಲ್ಯಕ್ಕಿಂತ 3.64 ಪಟ್ಟು ಹೆಚ್ಚಾಗಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

    ಬಿಎಸ್​ಇ ಸೂಚ್ಯಂಕ 199.17 ಅಂಕ ಕುಸಿತ: ಐಟಿ ಷೇರುಗಳು ಹಿನ್ನಡೆ ಅನುಭವಿಸಿದ್ದೇಕೆ?

    3ನೇ ತ್ರೈಮಾಸಿಕದಲ್ಲಿ ನಿರೀಕ್ಷೆ ಮೀರಿದ ಎಚ್‌ಡಿಎಫ್‌ಸಿ ಬ್ಯಾಂಕ್ ಫಲಿತಾಂಶ: ಶೇ. 34ರಷ್ಟು ಏರಿಕೆಯೊಂದಿಗೆ ರೂ. 16,373 ಕೋಟಿ ಲಾಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts