More

    ರೇಪಿಸ್ಟ್​ ತಂದೆಯನ್ನು ಬರ್ಬರ ಹತ್ಯೆಗೈದಿದ್ದ ಮೂವರು ಸಹೋದರಿಯರ ಬೆನ್ನಿಗೆ ನಿಂತ ಕೋರ್ಟ್​, ತನಿಖಾ ಸಮಿತಿ!

    ಮಾಸ್ಕೋ: ಮಲಗಿದ್ದಾಗ ರೇಪಿಸ್ಟ್​ ತಂದೆಯನ್ನೇ ಚುಚ್ಚಿಕೊಂದ ಮೂವರು ಸಹೋದರಿಯರ ವಿರುದ್ಧ ಪ್ರಕರಣ ದಾಖಲಿಸಲು ರಷ್ಯಾ ತನಿಖಾಗಾರರು ನಿರಾಕರಿಸಿದ್ದಾರೆ.

    ಕ್ರಿಶ್ಚಿಯನಾ (21), ಏಂಜಲಿನಾ (20) ಮತ್ತು ಮರಿಯಾ ಖಚತುರ್ಯನ್ (19) 2018ರ ಜುಲೈನಲ್ಲಿ ತಮ್ಮ ತಂದೆ ಮಿಕಾಯಿಲ್​ ಖಚತುರ್ಯನ್​ರನ್ನು ಮಲಗಿದ್ದ ವೇಳೆ ಬರ್ಬರವಾಗಿ ಹತ್ಯೆ ಮಾಡಿದ್ದರು. ನಿರಂತರ ಲೈಂಗಿಕ ಕಿರುಕುಳ ಸಹಿಸಲಾಗದೇ ಕೊಲೆ ಮಾಡಿದ್ದಾಗಿ ಸಹೋದರಿಯರು ಒಪ್ಪಿಕೊಂಡಿದ್ದರು.

    ಇದನ್ನೂ ಓದಿ: ನಾಲ್ಕು ದಿನ ಕಾಡೆಲ್ಲ ಅಲೆದು ಮಾವೋವಾದಿಗಳ ವಶದಲ್ಲಿದ್ದ ಗಂಡನನ್ನು ಬಿಡಿಸಿಕೊಂಡು ಬಂದ ಮಹಿಳೆ!

    ಮೂವರ ವಿರುದ್ಧ ಕೊಲೆ ಪ್ರಕರಣವೂ ದಾಖಲಾಗಿತ್ತು. ಆದರೆ, ಮಾಸ್ಕೋ ಜನರ ಆಕ್ರೋಶದಿಂದ ಅಲ್ಲಿನ ಪ್ರಾಸಿಕ್ಯೂಟರ್ ಕಚೇರಿ ಪ್ರಕರಣವನ್ನು ಜನವರಿಯಲ್ಲಿ ಕೈಬಿಟ್ಟು, ಆತ್ಮ ರಕ್ಷಣೆಗಾಗಿ ಕೊಲೆ ಅನಿವಾರ್ಯ ಎಂದು ತೀರ್ಪು ನೀಡಿತ್ತು. ಆದಾಗ್ಯೂ ಕೋರ್ಟ್​ ನೀಡಿದ ತೀರ್ಪನ್ನು ರಷ್ಯಾದ ತನಿಖಾ ಸಮಿತಿ ಅಂದಿನಿಂದಲೂ ತಿರಸ್ಕರಿಸುತ್ತಾ ಬಂದಿತ್ತು.

    ಪ್ರಕರಣ ಸಂಬಂಧ ಹೆಚ್ಚುವರಿ ತನಿಖೆಯನ್ನು ಸಮಿತಿ ಕೈಗೊಂಡಿತ್ತು. ಇದೀಗ ಸಮಿತಿಯೂ ಸಹ ನ್ಯಾಯಾಲಯದ ತೀರ್ಮಾನಕ್ಕೆ ಬಂದಿದೆ ಎಂದು ವಕೀಲರೊಬ್ಬರು ಬಿಬಿಸಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಲ್ಲದೆ, ಕೊಲೆ ಸಂಬಂಧ ಯಾವುದೇ ಹೊಸ ಸಾಕ್ಷ್ಯಾಧಾರಗಳು ಇಲ್ಲದೇ ಇರುವುದರಿಂದ ಆತ್ಮರಕ್ಷಣೆಗಾಗಿಯೇ ಹತ್ಯೆ ನಡೆದಿದೆ ಎಂಬ ಒಮ್ಮತಕ್ಕೆ ಬರಲಾಗಿದೆ. ಹೀಗಾಗಿ ಪ್ರಕರಣ ದಾಖಲಿಸಲು ಯಾರೊಬ್ಬರು ಒಪ್ಪದಿರುವ ಕಾರಣ ಈ ಕೇಸ್​ ವಿಚಾರಣೆಗೂ ಬರಲು ಸಾಧ್ಯವಿಲ್ಲದಂತಾಗಿದೆ.

    ಇದನ್ನೂ ಓದಿ: VIDEO| ಅಥಣಿಯಲ್ಲಿ ಕ್ವಾರಂಟೈನ್​ ಇಂಕ್​​ ಕಂಡು ಕಂಗಾಲಾದ ಜನ

    ಘಟನೆ ಹಿನ್ನೆಲೆ ಏನು?
    2018ರ ಜುಲೈನಲ್ಲಿ ಮೂವರು ಸಹೋದರಿಯರು ಸೇರಿ ಮಲಗಿದ್ದ ತಂದೆಯ ಮೇಲೆ ಚಾಕು, ಸುತ್ತಿಗೆ ಮತ್ತು ಮೆಣಸಿನ ಪುಡಿಯಿಂದ ದಾಳಿ ಮಾಡಿ ಹತ್ಯೆ ಮಾಡಿದ್ದರು. ಬಳಿಕ ನಿರಂತರವಾಗಿ ನಮಗೆ ಲೈಂಗಿಕ ತೊಂದರೆ ನೀಡುತ್ತಿದ್ದರು. ತೀರಾ ಕೆಟ್ಟದ್ದಾಗಿ ನಮ್ಮ ಜತೆ ನಡೆದುಕೊಳ್ಳುತ್ತಿದ್ದರು. ಇದನ್ನು ಸಹಿಸಲಾಗದೇ ಸ್ವ ರಕ್ಷಣೆಗಾಗಿ ಹತ್ಯೆ ಮಾಡಿದ್ದಾಗಿ ಹೇಳಿಕೊಂಡಿದ್ದರು.

    ಪರಿಣಿತರೊಬ್ಬರ ವರದಿಯ ಪ್ರಕಾರ ಮೂವರು ಸಹೋದರಿಯರ ತಂದೆ ಅವರನ್ನು ತನ್ನ ಮುಂದೆ ಸಂಪೂರ್ಣ ಬೆತ್ತಲಾಗುವಂತೆ ಹೇಳುತ್ತಿದ್ದನಂತೆ. ಏಕೆಂದು ಕೇಳಿದರೆ ನಿಮ್ಮನ್ನು ಚೆಕ್​ ಮಾಡಬೇಕು ಎನ್ನುತ್ತಿದ್ದನಂತೆ. ಬಳಿಕ ಹಸ್ತಮೈಥುನ ಮಾಡುವಂತೆ ಅವರಿಗೆ ಆದೇಶಿಸುತ್ತಿದ್ದಲ್ಲದೆ, ವಿವಿಧ ಶಸ್ತ್ರಾಸ್ತ್ರಗಳಿಂದ ಅವರನ್ನು ಹೆದರಿಸಿ ಬಹಳ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ ಎಂಬುದು ವರದಿಯಲ್ಲಿದೆ. ಈ ಬಗ್ಗೆ ಸಹೋದರಿಯರು ದೂರು ನೀಡಿದರು ಅದನ್ನು ಅಲ್ಲಿನ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲವೆಂಬ ಆರೋಪವು ಇದೆ.

    ಇದನ್ನೂ ಓದಿ: PHOTOS| ಪಾಕ್​ ಹಿಂದುಗಳ ನೆರವಿಗೆ ನಿಂತ ಮಾಜಿ ಕ್ರಿಕೆಟರ್​ ಶಾಹೀದ್ ಅಫ್ರಿದಿ!

    ನಿಮ್ಮ ತಾಯಿಯ ಸ್ಥಾನದಲ್ಲಿ ನಿಮ್ಮನ್ನು ಇಡುತ್ತೇನೆ. ನಿಮ್ಮನ್ನು ಮದುವೆಯಾಗುತ್ತೇನೆ. ನಿಮಗೆಲ್ಲಾ ಮಗುವನ್ನು ಕೊಡುತ್ತೇನೆಂದು ಹೇಳುತ್ತಿದ್ದ ಎಂದು ಸಹೋದರಿಯರೇ ತಂದೆಯ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ. ಸದ್ಯ ಮೂವರು ಸಹೋದರಿಯರು ರಷ್ಯಾದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಒಬ್ಬರಿಗೊಬ್ಬರು ಭೇಟಿಯಾಗದಂತೆ ನ್ಯಾಯಾಲಯ ಆದೇಶಿಸಿದೆ. (ಏಜೆನ್ಸೀಸ್​)

    ಕರೊನಾಕ್ಕೆ ಸಿದ್ಧವಾಗಿದೆ ಆಯುರ್ವೇದದ 4 ಮದ್ದು; ಕ್ಲಿನಿಕಲ್​ ಪ್ರಯೋಗಕ್ಕೆ ಸಿದ್ಧತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts