More

    PHOTOS: ಇಂದು ಅಂತಾರಾಷ್ಟ್ರೀಯ ಶ್ವಾನ ದಿನ, ಕ್ರಿಕೆಟಿಗರ ಶ್ವಾನ ಪ್ರೀತಿ…!

    ಬೆಂಗಳೂರು: ಮನುಷ್ಯನಿಗೂ ಶ್ವಾನಗಳಿಗೂ ಎಲ್ಲಿಲ್ಲದ ನಂಟು. ದೈನಂದಿನ ಜೀವನದ ಭಾಗವಾಗಿರುತ್ತವೆ ಈ ಶ್ವಾನಗಳು. ಪ್ರೀತಿ ಪಾತ್ರರಿಗೆ ಅಷ್ಟೇ ಭಾವನಾತ್ಮಕ ನಂಟು ಹೊಂದಿರುತ್ತವೆ. ಶ್ವಾನವನ್ನು ಪ್ರೀತಿಸದ, ಸಾಕದ ಮನುಷ್ಯ ಸಿಗಲಾರ. ಹೀಗೆ ಶ್ವಾನಗಳಿಗೂ ಒಂದು ದಿನ ಉಂಟು. ಇಂದು (ಆ.26) ಅಂತಾರಾಷ್ಟ್ರೀಯ ಶ್ವಾನಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಕ್ರಿಕೆಟಿಗರು ವೃತ್ತೀಜಿವನದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಶ್ವಾನಗಳೊಂದಿಗೆ ಕಾಲ ಕಳೆಯುವುದನ್ನು ಮಾತ್ರ ಮರೆಯುವುದಿಲ್ಲ..

    ಇದನ್ನೂ ಓದಿ: ನಿಮ್ಮ ತಾಯಿ, ಅಜ್ಜಿಯ ಗಂಟಲು ಸೀಳಿದ್ದೇನೆ, ನೋಡಿ ಬನ್ನಿ ಎಂದು ಕರೆದ ಷಾಟ್‌ಪುಟ್‌ ಚಾಂಪಿಯನ್‌!

    PHOTOS: ಇಂದು ಅಂತಾರಾಷ್ಟ್ರೀಯ ಶ್ವಾನ ದಿನ, ಕ್ರಿಕೆಟಿಗರ ಶ್ವಾನ ಪ್ರೀತಿ...! PHOTOS: ಇಂದು ಅಂತಾರಾಷ್ಟ್ರೀಯ ಶ್ವಾನ ದಿನ, ಕ್ರಿಕೆಟಿಗರ ಶ್ವಾನ ಪ್ರೀತಿ...!ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ, ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ನಾಯಕ ಕೆಎಲ್​ ರಾಹುಲ್​ ಅವರ ಶ್ವಾನ ಪ್ರೀತಿ ನಮಗೆಲ್ಲರಿಗೂ ಗೊತ್ತೇ ಇದೆ. ದಿನಪೂರ್ತಿ ಕ್ರಿಕೆಟ್​ನಲ್ಲಿ ಮುಳುಗಿದರೂ ಶ್ವಾನಗಳೊಂದಿಗೆ ಆಟವಾಡುವ ಸಲುವಾಗಿಯೇ ಸ್ವಲ್ಪ ಸಮಯ ನಿಗದಿಪಡಿಸಿಕೊಂಡಿರುತ್ತಾರೆ ಈ ಕ್ರಿಕೆಟಿಗರು. ಕೇವಲ ಕೊಹ್ಲಿ, ರಾಹುಲ್​ ಕಥೆಯಲ್ಲೇ ಬಹುತೇಕ ಕ್ರಿಕೆಟಿಗರು ವಿವಿಧ ತಳಿಯ ಶ್ವಾನಗಳನ್ನು ಹೊಂದಿದ್ದಾರೆ. ಇಂದು ಅಂತಾರಾಷ್ಟ್ರೀಯ ಶ್ವಾನಗಳ ದಿನಾಚರಣೆ ಹಿನ್ನೆಲೆಯಲ್ಲಿ ತಮ್ಮ ಶ್ವಾನಗಳೊಂದಿಗೆ ಪೋಸ್​ ನೀಡಿದ್ದಾರೆ ಕ್ರಿಕೆಟಿಗರು..

    ಇದನ್ನೂ ಓದಿ: ಐಪಿಎಲ್ ಉದ್ದೀಪನ ಪರೀಕ್ಷೆಯಲ್ಲಿ ಸ್ಟಾರ್ ಕ್ರಿಕೆಟಿಗರೇ ಟಾರ್ಗೆಟ್!

    PHOTOS: ಇಂದು ಅಂತಾರಾಷ್ಟ್ರೀಯ ಶ್ವಾನ ದಿನ, ಕ್ರಿಕೆಟಿಗರ ಶ್ವಾನ ಪ್ರೀತಿ...! PHOTOS: ಇಂದು ಅಂತಾರಾಷ್ಟ್ರೀಯ ಶ್ವಾನ ದಿನ, ಕ್ರಿಕೆಟಿಗರ ಶ್ವಾನ ಪ್ರೀತಿ...! PHOTOS: ಇಂದು ಅಂತಾರಾಷ್ಟ್ರೀಯ ಶ್ವಾನ ದಿನ, ಕ್ರಿಕೆಟಿಗರ ಶ್ವಾನ ಪ್ರೀತಿ...!ಐಪಿಎಲ್​ನಲ್ಲಿ ಆಡಲು ಯುಎಇಯಲ್ಲಿರುವ ಆಟಗಾರರು ತಮ್ಮ ಶ್ವಾನಗಳೊಂದಿಗಿರುವ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಜತೆಗೆ ಫ್ರಾಂಚೈಸಿಗಳಾದ ಆರ್​ಸಿಬಿ, ಡೆಲ್ಲಿ, ಮುಂಬೈ, ಸನ್​ರೈಸರ್ಸ್​ ಹಾಗು ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡಗಳು ತಮ್ಮ ಅಧಿಕೃತ ಇನ್​ಸ್ಟಾಗ್ರಾಂನಲ್ಲಿ ಆಟಗಾರರು ಶ್ವಾನಗಳೊಂದಿಗೆ ಇರುವ ಚಿತ್ರಗಳನ್ನು ಪ್ರಕಟಿಸಿವೆ. ಅಲ್ಲದೆ, ಟೆನಿಸ್ ಆಟಗಾರ್ತಿ ಸೆರೇನಾ ವಿಲಿಯಮ್ಸ್, ಫುಟ್ ಬಾಲ್ ತಾರೆ ಲಿಯೊನೆಲ್ ಮೆಸ್ಸಿ ಕೂಡ ಶ್ವಾನ ಪ್ರೀತಿಯನ್ನು ಅನಾವರಣಗೊಳಿಸಿದ್ದಾರೆ.

    PHOTOS: ಇಂದು ಅಂತಾರಾಷ್ಟ್ರೀಯ ಶ್ವಾನ ದಿನ, ಕ್ರಿಕೆಟಿಗರ ಶ್ವಾನ ಪ್ರೀತಿ...!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts