More

    ಐಪಿಎಲ್ ಉದ್ದೀಪನ ಪರೀಕ್ಷೆಯಲ್ಲಿ ಸ್ಟಾರ್ ಕ್ರಿಕೆಟಿಗರೇ ಟಾರ್ಗೆಟ್!

    ನವದೆಹಲಿ: ಯುಎಇಯಲ್ಲಿ ನಡೆಯಲಿರುವ ಐಪಿಎಲ್ 13ನೇ ಆವೃತ್ತಿಯ ವೇಳೆ ಕನಿಷ್ಠ 50 ಡೋಪಿಂಗ್ ಟೆಸ್ಟ್‌ಗಳನ್ನು ನಡೆಸಲು ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ (ನಾಡಾ) ನಿರ್ಧರಿಸಿದೆ. ಇದಕ್ಕಾಗಿ ನಾಡಾದ ಮೂವರು ಉನ್ನತ ಅಧಿಕಾರಿಗಳು ಮತ್ತು 6 ಡೋಪ್ ಕಂಟ್ರೋಲ್ ಅಧಿಕಾರಿಗಳು (ಡಿಸಿಒ) ಯುಎಇಗೆ ಪ್ರಯಾಣಿಸಲಿದ್ದಾರೆ.

    ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 60 ಪಂದ್ಯಗಳು ನಡೆಯಲಿದ್ದು, ಈ ವೇಳೆ ಇನ್-ಕಾಂಪಿಟಿಷನ್ (ಐಸಿ) ಮತ್ತು ಔಟ್-ಆ್-ಕಾಂಪಿಟಿಷನ್ (ಒಒಸಿ) ಪರೀಕ್ಷೆಗಳನ್ನು ನಡೆಸಲು ನಾಡಾ ಯೋಜಿಸಿದೆ. ಟೂರ್ನಿಯ ವೇಳೆ ನಾಡಾದ ಒಟ್ಟು 9 ಪ್ರತಿನಿಧಿಗಳು ಯುಎಇಯಲ್ಲಿರಲಿದ್ದಾರೆ. ಅಗತ್ಯ ಬಿದ್ದರೆ ಯುಎಇ ರಾಷ್ಟ್ರೀಯ ಉದ್ದೀಪನ ನಿಗ್ರಹ ಸಂಸ್ಥೆಯ (ನಾಡೋ) ನೆರವನ್ನೂ ಪಡೆದುಕೊಳ್ಳಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

    ನಾಡಾ ತಲಾ ಓರ್ವ ಅಧಿಕಾರಿ ಮತ್ತು ಇಬ್ಬರು ಡಿಸಿಒ ಒಳಗೊಂಡ 3 ತಂಡಗಳನ್ನು ರಚಿಸಲಿದ್ದು, ಐಪಿಎಲ್ ಪಂದ್ಯಗಳು ನಡೆಯುವ 3 ತಾಣಗಳಲ್ಲಿ ಇವರು ಹಾಜರಿರುತ್ತಾರೆ. ಅವರಿಗೆ ಸ್ಥಳೀಯ ನಾಡೋ ಸಿಬ್ಬಂದಿ ನೆರವು ಒದಗಿಸಲಿದ್ದಾರೆ. ಒಟ್ಟಾರೆ 5 ಪ್ರತ್ಯೇಕ ಡೋಪ್ ಕಂಟ್ರೋಲ್ ಸ್ಟೇಷನ್‌ಗಳನ್ನು (ಡಿಸಿಎಸ್) ನಿರ್ಮಿಸಲು ಬಿಸಿಸಿಐಗೆ ನಾಡಾ ಸೂಚಿಸಿದೆ. 3 ತಾಣಗಳಲ್ಲಿ ಮಾತ್ರವಲ್ಲದೆ, ತಂಡಗಳು ದುಬೈ ಮತ್ತು ಅಬುಧಾಬಿಯಲ್ಲಿ ಅಭ್ಯಾಸ ನಡೆಸುವ ಸ್ಥಳಗಳಲ್ಲೂ ಡಿಸಿಎಸ್ ನಿರ್ಮಾಣಗೊಳ್ಳಲಿವೆ.

    ಇದನ್ನೂ ಓದಿ: ಇನ್‌ಸ್ಟಾಗ್ರಾಂನಲ್ಲಿ ಮತ್ತೊಂದು ಮೈಲಿಗಲ್ಲು ನೆಟ್ಟ ವಿರಾಟ್ ಕೊಹ್ಲಿ

    ಭಾರತದಲ್ಲಿ ನಡೆಯುವ ಡೋಪಿಂಗ್ ಸ್ಯಾಂಪಲ್ ಸಂಗ್ರಹ ಮತ್ತು ಪರೀಕ್ಷೆಯ ವೆಚ್ಚವನ್ನು ನಾಡಾ ಭರಿಸುತ್ತದೆ. ಆದರೆ ಈ ಬಾರಿ ಐಪಿಎಲ್ ಟೂರ್ನಿ ವಿದೇಶದಲ್ಲಿ ನಡೆಯುತ್ತಿರುವುದರಿಂದ ವೆಚ್ಚಗಳನ್ನು ನಾಡಾ ಭರಿಸಲಿದೆಯೇ ಅಥವಾ ಬಿಸಿಸಿಐ ಭರಿಸಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ದೋಹಾದ ವಾಡಾ ಮಾನ್ಯತೆಯ ಪ್ರಯೋಗಾಲಯದಲ್ಲಿ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಒಳಪಡಿಸುವ ನಿರೀಕ್ಷೆ ಇದೆ.

    ಧೋನಿ, ಕೊಹ್ಲಿಗೂ ಪರೀಕ್ಷೆ ಸಾಧ್ಯತೆ
    ಐಪಿಎಲ್ ವೇಳೆ ನಾಡಾದ ಡೋಪಿಂಗ್ ಪರೀಕ್ಷೆಗೆ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರಂಥ ಸ್ಟಾರ್ ಆಟಗಾರರೇ ಪ್ರಮುಖ ಟಾರ್ಗೆಟ್ ಆಗಿರುತ್ತಾರೆ ಎನ್ನಲಾಗಿದೆ. ಮೂತ್ರದ ಸ್ಯಾಂಪಲ್‌ಗಳನ್ನು ಮಾತ್ರವಲ್ಲದೆ, ರಕ್ತದ ಮಾದರಿಯನ್ನೂ ನಾಡಾ ಅಧಿಕಾರಿಗಳು ಸಂಗ್ರಹಿಸುವ ಸಾಧ್ಯತೆ ಇದೆ.

    ಧೋನಿಯನ್ನು ಹೊಗಳಿದ್ದಕ್ಕೆ ಸಕ್ಲೇನ್ ಮುಷ್ತಾಕ್ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಿಟ್ಟಾಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts