More

    ಇಂದಿನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಹಬ್ಬ

    ಬೆಂಗಳೂರು: ಭಾರತ-ಆಸೀಸ್ ಸರಣಿಯ ಜತೆಗೆ ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆ ಮತ್ತೆ ಕರೊನಾ ಕಾಲಕ್ಕಿಂತ ಹಿಂದಿನಂತೆ ಪುಟಿದೇಳಲಿದೆ. ನ್ಯೂಜಿಲೆಂಡ್‌ನಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ 3 ಟಿ20, 2 ಟೆಸ್ಟ್ ಪಂದ್ಯಗಳ ಸರಣಿ ಶುರುವಾಗಲಿದ್ದರೆ, ದಕ್ಷಿಣ ಆಫ್ರಿಕಾದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧದ 3 ಟಿ20, 3 ಏಕದಿನ ಪಂದ್ಯಗಳ ಸರಣಿಗೂ ಶುಕ್ರವಾರ ಚಾಲನೆ ಸಿಗಲಿದೆ.

    ಕರೊನಾದಿಂದಾಗಿ ಮಾರ್ಚ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡ ಬಳಿಕ ಜುಲೈನಲ್ಲಿ ಇಂಗ್ಲೆಂಡ್ ಮತ್ತು ಪ್ರವಾಸಿ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯೊಂದಿಗೆ 117 ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆ ಪುನರಾರಂಭಗೊಂಡಿತ್ತು. ಬಳಿಕ ಇಂಗ್ಲೆಂಡ್ ತಂಡ ತವರಿನಲ್ಲಿ ಪಾಕಿಸ್ತಾನ, ಐರ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧವೂ ಸರಣಿ ಆಡಿತ್ತು.

    ಸೆಪ್ಟೆಂಬರ್-ನವೆಂಬರ್‌ನಲ್ಲಿ ಯುಎಇಯಲ್ಲಿ ಐಪಿಎಲ್ 13ನೇ ಆವೃತ್ತಿ ನಡೆಯುತ್ತಿದ್ದ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆ ಮತ್ತೆ ಸ್ತಬ್ಧಗೊಂಡಿತ್ತು. ಈ ವೇಳೆ ಪಾಕಿಸ್ತಾನ-ಜಿಂಬಾಬ್ವೆ ತಂಡಗಳ ನಡುವೆ ಮಾತ್ರ ಸೀಮಿತ ಓವರ್ ಸರಣಿ ನಡೆದಿತ್ತು. ಇದೀಗ ಐಪಿಎಲ್ ಬಳಿಕ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ನಲ್ಲಿ ಕರೊನಾ ಭೀತಿಯ ನಡುವೆ ಬಯೋ-ಬಬಲ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭಗೊಳ್ಳುತ್ತಿದೆ. ಈ ಪೈಕಿ ಆಸ್ಟ್ರೇಲಿಯಾದಲ್ಲಿ ಮಾತ್ರ ಶೇಕಡಾವಾರು ಲೆಕ್ಕಾಚಾರದಲ್ಲಿ ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

    *ಭಾರತ-ಆಸ್ಟ್ರೇಲಿಯಾ
    ಮೊದಲ ಏಕದಿನ ಆರಂಭ: ಬೆಳಗ್ಗೆ 9.10
    ಎಲ್ಲಿ: ಸಿಡ್ನಿ
    ನೇರಪ್ರಸಾರ: ಸೋನಿ ಸಿಕ್ಸ್, ಡಿಡಿ.

    *ನ್ಯೂಜಿಲೆಂಡ್-ವೆಸ್ಟ್ ಇಂಡೀಸ್
    ಮೊದಲ ಟಿ20 ಆರಂಭ: ಮಧ್ಯಾಹ್ನ 11.30
    ಎಲ್ಲಿ: ಆಕ್ಲೆಂಡ್
    ನೇರಪ್ರಸಾರ: ಅಮೆಜಾನ್ ಪ್ರೈಮ್

    *ದಕ್ಷಿಣ ಆಫ್ರಿಕಾ-ಇಂಗ್ಲೆಂಡ್
    ಮೊದಲ ಟಿ20 ಆರಂಭ: ರಾತ್ರಿ 9.30
    ಎಲ್ಲಿ: ಕೇಪ್‌ಟೌನ್
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಟೀಮ್ ಇಂಡಿಯಾಗೆ ಕಪಿಲ್ ದೇವ್ ಕಾಲದ ಸಮವಸ್ತ್ರ ವಾಪಸ್! ರೆಟ್ರೋ ಜೆರ್ಸಿಯ ಝಲಕ್ ಪ್ರದರ್ಶಿಸಿದ ಧವನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts