More

    ಸ್ಪರ್ಧಾತ್ಮಕ ಗೆಲುವಿಗೆ ಆಸಕ್ತಿಯೇ ಪ್ರೇರಣೆ : ಎನ್.ಎಂ. ಬಿರಾದಾರ ಅಭಿಮತ

    ಸಿಂದಗಿ : ಕಲಿಕಾಸಕ್ತಿ ಮತ್ತು ಎಲ್ಲ ವಿಷಯಗಳ ಗ್ರಹಿಕೆಯೇ ಜಗತ್ತಿನ ಸ್ಪರ್ಧಾತ್ಮಕ ಪರೀಕ್ಷೆಗಳ ಗೆಲುವಿಗೆ ಮುಖ್ಯ ಪ್ರೇರಣೆಯಾಗಿದೆ ಎಂದು ವಿಜಯಪುರ ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ. ಬಿರಾದಾರ ಹೇಳಿದರು.

    ಇಲ್ಲಿನ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ನಾಲ್ಕು ದಿನಗಳ ಟಿಇಟಿ ಹಾಗೂ ಸಿಇಟಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿ, ಪದವಿ ಅಥವಾ ಸ್ನಾತಕೋತ್ತರ ಪದವೀಧರರು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಕೆಗೆ ವಿಷಯವಾರು ಓದು, ಸತತ ಅಧ್ಯಯನ ಮಾಡುವುದನ್ನು ಬೆಳೆಸಿಕೊಳ್ಳಬೇಕು. ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಓದುವ ಮೂಲಕ ವಿಷಯಾಧಾರಿತ ಪರೀಕ್ಷೆಯನ್ನು ಗೆಲ್ಲಬಹುದು ಎಂದರು.

    ಮಕ್ಕಳ ಸಾಹಿತಿ ಹ.ಮ. ಪೂಜಾರಿ ಮಾತನಾಡಿ, ಪಠ್ಯ ಬೋಧನೆ ಒಂದು ಪವಿತ್ರ ಕೆಲಸ. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು. ಆಗಲೇ ಮಕ್ಕಳು ಸ್ಪರ್ಧೆಯ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಸಫಲರಾಗುತ್ತಾರೆ ಎಂದರು.

    ಪ್ರಾಚಾರ್ಯ ಡಾ. ಶರಣಬಸವ ಜೋಗೂರ, ತರಬೇತಿದಾರ ಶ್ರೀಶೈಲ ಹಲಕಟ್ಟಿ, ವಿದ್ಯಾರ್ಥಿ ಕಲ್ಯಾಣ ಘಟಕದ ಮುಖ್ಯಸ್ಥ ದಾನಯ್ಯ ಮಠಪತಿ, ಸುಧಾಕರ ಚವ್ಹಾಣ, ಎನ್.ಬಿ. ಪೂಜಾರಿ, ಜೆ.ಸಿ. ನಂದಿಕೋಲ, ಡಾ. ಕವಿತಾ ರಾಠೋಡ, ವಿದ್ಯಾ ಮೋಗಲಿ, ಸಿ.ಜಿ. ಕತ್ತಿ, ಶಿವಕುಮಾರ ಕತ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts