More

    ವೈಚಾರಿಕದಿಂದ ಕೂಡಿದೆ ಕುವೆಂಪು ಬರೆದ ಸಾಹಿತ್ಯ

    ಮಾನ್ವಿ: ರಾಷ್ಟ್ರಕವಿ ಕುವೆಂಪು ಬರೆದ ಲೇಖನಗಳು ವೈಚಾರಿಕತೆಯಿಂದ ಕೂಡಿದ್ದು, ಕಾವ್ಯ, ಕಥೆ, ಕಾದಂಬರಿ, ನಾಟಕಗಳ ಮೂಲಕ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ ಎಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿ ವಿಜಯಕುಮಾರ ತಿಳಿಸಿದರು.

    ಇದನ್ನೂ ಓದಿ: ಕುವೆಂಪು ಸಾಹಿತ್ಯದ ಪರಿಕಲ್ಪನೆ ಜೀವನದಲ್ಲಿ ಅಳವಡಿಸಿಕೊಳ್ಳಿ

    ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುವೆಂಪು ವಿಶ್ವಮತ ಮನುಜ ಮತ ಎನ್ನುವ ವಿಶ್ವ ಸಂದೇಶ ಸಾರಿದರು. ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಡುವ ಮೂಲಕ ಕನ್ನಡನಾಡಿನ ಗೌರವವನ್ನು ಹೆಚ್ಚಿಸಿದ್ದಾರೆ ಎಂದರು.

    ಬರವಣಿಗೆಗಿದೆ ಓದುಗರನ್ನು ಸೆಳೆಯುವ ಶಕ್ತಿ

    ಸಿರವಾರ: ಪಟ್ಟಣದ ತಹಸಿಲ್ ಕಚೇರಿಯಲ್ಲಿ ಕುವೆಂಪು ಭಾವಚಿತ್ರಕ್ಕೆ ತಹಸೀಲ್ದಾರ್ ರವಿ ಎಸ್.ಅಂಗಡಿ ಮಾಲಾರ್ಪಣೆ ಮಾಡಿದರು.
    ಕುವೆಂಪು ಅವರ ಕೊಡುಗೆ ಬಗ್ಗೆ ಎಷ್ಟು ಹೇಳಿದರೂ ಸಾಲದು. ಕುವೆಂಪು ಕಾವ್ಯಗಳ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

    ಕುವೆಂಪು ಕನ್ನಡದ ಅಗ್ರಮಾನ್ಯ ಕಾದಂಬರಿಕಾರರಾಗಿದ್ದು, ಅವರ ಬರವಣಿಗೆಗೆ ಓದುಗರನ್ನು ಸೆಳೆಯುವ ಶಕ್ತಿ ಇದೆ ಎಂದರು. ಉಪ ತಹಸೀಲ್ದಾರ್ ಸಿದ್ಧನಗೌಡ, ಕಂದಾಯ ಅಧಿಕಾರಿ ಶ್ರೀನಾಥ್, ಶಿರಸ್ತೇದಾರ್ ಫಕೃದ್ದೀನ್, ಗ್ರಾಮ ಲೆಕ್ಕಾಧಿಕಾರಿ ವಿಲ್ಸನ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ ಹೀರಾ,ಸಿಬ್ಬಂದಿ ಶ್ರೀದೇವಿ, ಲಾವಣ್ಯ, ಶ್ವೇತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts