More

    ಕುವೆಂಪು ಸಾಹಿತ್ಯದ ಪರಿಕಲ್ಪನೆ ಜೀವನದಲ್ಲಿ ಅಳವಡಿಸಿಕೊಳ್ಳಿ

    ಉಡುಪಿ: ರಾಷ್ಟ್ರಕವಿ ಕುವೆಂಪು ಕರ್ನಾಟಕದವರು ಎನ್ನುವುದು ನಮಗೆಲ್ಲ ಹಮ್ಮೆ, ನಾಡಿಗೇ ದೊಡ್ಡ ಕೀರ್ತಿ. “ಓ ನನ್ನ ಚೇತನ ಆಗು ನೀ ಅನಿಕೇತನ’ ಎಂಬ ಕುವೆಂಪು ಆಶಯದಂತೆ ವಿದ್ಯಾರ್ಥಿಗಳೆಲ್ಲ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಎಡಿಸಿ ಮಮತಾದೇವಿ ಜಿ.ಎಸ್​. ಹೇಳಿದರು.

    ಜಿಲ್ಲಾಡಳಿತ, ಜಿಪಂ ಮತ್ತು ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಉಡುಪಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕುವೆಂಪು ಜನ್ಮದಿನ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

    ಆಡಂಬರದ, ದುಂದುವೆಚ್ಚದ ವಿವಾಹ ಕಾರ್ಯಕ್ರಮ ಆಚರಿಸುವುದು ಕುವೆಂಪು ಅವರಿಗೆ ಇಷ್ಟ ಇರಲಿಲ್ಲ. ಹೀಗಾಗಿಯೇ “ಮಂತ್ರ ಮಾಂಗಲ್ಯ’ ಎಂಬ ಹೊಸ ವಿಧಾನ ಹಾಗೂ ಸರಳರೂಪದ ವಿವಾಹ ಕ್ರಮವನ್ನು ಪರಿಚಯಿಸಿದ ಹೆಗ್ಗಳಿಕೆ ಅವರದ್ದು. ಇದಲ್ಲದೆ, ಅವರೆಲ್ಲ ಕಾವ್ಯ&ಸಾಹಿತ್ಯಗಳಲ್ಲಿ ಮಾನವೀಯ ಮೌಲ್ಯಗಳನ್ನೇ ಪ್ರತಿಪಾದಿಸಿರುವುದು ಕಂಡುಬರುತ್ತದೆ ಎಂದರು.

    ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರಜ್ಞಾ ಮಾರ್ಪಳ್ಳಿ ಕುವೆಂಪು ಅವರ ವ್ಯಕ್ತಿತ್ವ ಹಾಗೂ ಅವರ ಕೃತಿಯ ಆಶಯಗಳೇನು ಎಂಬ ಕುರಿತು ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸತಿ ಇಲಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣಪತಿ ಕೆ., ಪ್ರಾಂಶುಪಾಲೆ ಡಾ.ಸುಮಾ ಉಪಸ್ಥಿತರಿದ್ದರು. ಕುವೆಂಪು ರಚಿತ ಭಾವಗೀತೆಗಳ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ವಿನಯಾ ಬಾಬುರಾಜ್​ ನಾಡಗೀತೆ ಹಾಡಿದರು. ರಾಮಚಂದ್ರ ಭಟ್​ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಇಂದಿರಾ ಬಿ. ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts