More

    ಕರೊನಾ ಕವಚ; ಕೋವಿಡ್​ನಿಂದ ಬಚಾವಾಗಲು ಇಲ್ಲಿವೆ ವಿಶೇಷ ವಿಮಾ ಯೋಜನೆಗಳು

    ನವದೆಹಲಿ: ಹಲವು ಜೀವ ವಿಮಾ ಕಂಪನಿಗಳು ಕರೊನಾ ಕವಚ್ ಹೆಸರಿನಲ್ಲಿ ಅಲ್ಪಾವಧಿಯ ವಿಶೇಷ ಕೋವಿಡ್​ ವಿಮಾ ಯೋಜನೆಗಳನ್ನು ಆರಂಭಿಸಿವೆ. ಅದರಲ್ಲೂ ಕೆಲ ಕಂಪನಿಗಳ 447 ರೂ.ಗಳಷ್ಟು ಕಡಿಮೆ ಮೊತ್ತಕ್ಕೆ ವಿಮಾ ಸೌಲಭ್ಯ ಕಲ್ಪಿಸುತ್ತಿವೆ.

    ಬಜಾಜ್​ ಅಲಾಯನ್ಸ್​, ಮ್ಯಾಕ್ಸ್​ ಬುಪಾ, ಎಚ್​ಡಿಎಫ್​ ಎರ್ಗೊ, ಭಾರತಿ ಅಕ್ಸಾ ಮೊದಲಾದ ಕಂಪನಿಗಳು ವಿಮಾ ಯೋಜನೆ ಪ್ರಕಟಿಸಿದ್ದು, ಇನ್ನೂ ಹಲವು ಕಂಪನಿಗಳು ಇದೇ ಹಾದಿಯಲ್ಲಿವೆ. ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ ಕೋವಿಡ್​19ಗಾಗಿ ವಿಶೇಷ ವಿಮಾ ಯೋಜನೆ ಪ್ರಕಟಿಸುವಂತೆ ಎಲ್ಲ ಕಂಪನಿಗಳಿಗೂ ಕಳೆದ ತಿಂಗಳು ಸೂಚಿಸಿತ್ತು.

    ಇದನ್ನೂ ಓದಿ; ಕದ್ದ ಹಣದಿಂದಲೇ ಖರೀದಿಸಿದ್ದ ಖಾಸಗಿ ವಿಮಾನ; ಸೈಬರ್​ ಫ್ರಾಡ್​ನಲ್ಲಿ ಈತನನ್ನು ಮೀರಿಸೋರೆ ಇಲ್ಲ…!

    ಈ ಪಾಲಿಸಿ ಆರೋಗ್ಯ ವಿಮೆ ಮಾದರಿಯಲ್ಲಿಯೇ ಇರಲಿದೆ. ಆದರೆ, ಅಲ್ಪಾವಧಿಯದ್ದಾಗಿದ್ದು, (3-9 ತಿಂಗಳು) ಕೇವಲ ಕೋವಿಡ್​ಗೆ ಮಾತ್ರ ಸಂಬಂಧಿಸಿರಲಿದೆ. ಕೆಲ ಕಂಪನೆಗಳು ಹೆಚ್ಚುವರಿ ಮೊತ್ತಕ್ಕೆ ಆಸ್ಪತ್ರೆಯ ಇತರ ವೆಚ್ಚಗಳ ಪಾವತಿಗೂ ಅವಕಾಶ ಕಲ್ಪಿಸಿವೆ. ಆದರೆ, ಸಾಮಾನ್ಯ ಆರೋಗ್ಯ ವಿಮೆಗೆ ಹೋಲಿಸಿದಲ್ಲಿ ಕಡಿಮೆ ಪ್ರಿಮಿಯಂ ಹೊಂದಿರಲಿದೆ.

    ಆಸ್ಪತ್ರೆಗೆ ದಾಖಲಾಗಿದ್ದಕ್ಕೆ ಮಾತ್ರವಲ್ಲದೆ, ಮನೆಯಲ್ಲೇ ಚಿಕಿತ್ಸೆ, ಆಯುಷ್​ ಚಿಕಿತ್ಸೆ, ಆಸ್ಪತ್ರೆಗೆ ದಾಖಲಾಗುವ ಮುನ್ನ ಹಾಗೂ ನಂತರದ ವೆಚ್ಚವನ್ನು ಈ ವಿಮಾ ಯೋಜನೆ ಒಳಗೊಳ್ಳಲಿದೆ. ಶೇ.99 ಜನರು ಆನ್​ಲೈಲ್​ ಅಥವಾ ಆಫ್​ಲೈನ್​ನಲ್ಲಿ ಈ ವಿಮೆಯನ್ನು ಖರೀದಿಸಬಹುದು. ತೀರಾ ವಯಸ್ಸಾದವರು ಹಾಗೂ ಇತರ ತೊಂದರೆ ಇರುವ ರೋಗಿಗಳಿಗೆ ಟೆಲಿಮೆಡಿಸಿನ್​ ಮೂಲಕ ತಪಾಸಣೆಗೆ ಒಳಗಾಗಬೇಕಾಗಬಹುದು ಎಂದು ಬಜಾಜ್​ ಅಲಾಯನ್ಸ್​ನ ರಿಟೇಲ್​ ಮುಖ್ಯಸ್ಥ ಗುರುದೀಪ್​ಸಿಂಗ್​ ಭಾತ್ರಾ ಹೇಳಿದ್ದಾರೆ.

    ಇದನ್ನೂ ಓದಿ; ಕರೊನಾ ಸಂಕಷ್ಟದಿಂದ ಕೆಲಸ ಕಳೆದುಕೊಂಡಿದ್ದವನಿಗೆ ಖುಲಾಯಿಸಿದ ಅದೃಷ್ಟ…!

    35 ವರ್ಷದೊಳಗಿನ ವ್ಯಕ್ತಿಗಳಿಗೆ 3.5 ತಿಂಗಳ ಅವಧಿಗೆ 50 ಸಾವಿರ ಪರಿಹಾರ ಮೊತ್ತಕ್ಕೆ 447 ರೂ. ಪ್ರಿಮಿಯಂ ನಿಗದಿಪಡಿಸಲಾಗಿದೆ. ಅಂತೆಯೇ, 9.5 ತಿಂಗಳ ಅವಧಿಗೆ 745 ರೂ. ಪ್ರಿಮಿಯಂ ಭರಿಸಬೇಕಾಗುತ್ತದೆ. 5 ಲಕ್ಷ ರೂ. ಪರಿಹಾರ ಮೊತ್ತಕ್ಕೆ 1,320 ರೂ ನೀಡಬೇಕಾಗುತ್ತದೆ. 60 ವರ್ಷ ಮೇಲ್ಪಟ್ಟವರಿಗೆ 5,630 ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.

    ಮುಂದಿನ ಮಾರ್ಚ್​ವರೆಗೆ ಮಾತ್ರ ಈ ವಿಮೆ ಮಾರಾಟ ಇರಲಿದೆ. ನಂತರ ಪರಿಸ್ಥಿತಿ ನೋಡಿಕೊಂಡು ವಿಸ್ತರಿಸಲಾಗುತ್ತದೆ. ಅಥವಾ ಲಸಿಕೆ ಕಂಡುಹಿಡಿದರೆ ಈ ವಿಮೆ ಅಗತ್ಯ ಬೀಳುವುದಿಲ್ಲ ಎಂದು ಅವರು ಮಾಹಿತಿ ನೀಡುತ್ತಾರೆ.
    ಮ್ಯಾಕ್ಸ್​ ಬುಪಾ ಕಂಪನಿ 31-55 ವರ್ಷದೊಳಗಿವ ವ್ಯಕ್ತಿಗಳಿಗೆ 2,200 ರೂ. ನಿಗದಿಪಡಿಸಿದ್ದು, 2 ವಯಸ್ಕರು ಹಾಗೂ ಮಕ್ಕಳಿಗೆ 4700 ರೂ. ಪ್ರಿಮಿಯಂ ಇರಿಸಿದೆ.

    ಒಂದು ಕಾರು ಕೊಂಡರೆ ಮತ್ತೊಂದು ಫ್ರೀ…, ಲಾರಿ ಖರೀದಿಗೆ 13 ಸಾವಿರ ರೂ. ಡೌನ್​ಪೇಮೆಂಟ್​…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts