More

    ಇನ್ನು ಟೆಲಿಗ್ರಾಮ್ ರೀತಿಯಲ್ಲೇ ಇನ್​ಸ್ಟಾಗ್ರಾಂನಲ್ಲೂ ಚ್ಯಾನಲ್​​ ಬರುತ್ತೆ!

    ಬೆಂಗಳೂರು: ಫೇಸ್​ಬುಕ್​, ಇನ್​ಸ್ಟಾಗ್ರಾಂ, ವಾಟ್ಸ್​ಆ್ಯಪ್​ ಮುಂತಾದ ಅನೇಕ ಆ್ಯಪ್​ಗಳ ಮಾತೃ ಸಂಸ್ಥೆ ಮೆಟಾ ಇದೀಗ ಇನ್​ಸ್ಟಾಗ್ರಾಂನಲ್ಲಿ ಟೆಲಿಗ್ರಾಮ್​ ರೀತಿಯಲ್ಲೇ ಚ್ಯಾನಲ್​ ಶುರು ಮಾಡುವ ಆಯ್ಕೆಯನ್ನು ಬಳಕೆದಾರರಿಗೆ ನೀಡಲಿದೆ.

    ಇನ್​ಸ್ಟಾಗ್ರಾಂ ಚಾನಲ್‌ಗಳೊಂದಿಗೆ ಟೆಲಿಗ್ರಾಮ್ ಚಾನೆಲ್‌ಗಳಿಗೆ ಸ್ಪರ್ಧೆಯೊಡ್ಡಲು ಮೆಟಾ ಮುಂದಾಗಿದೆ. ಅಮೆರಿಕದ ತಂತ್ರಜ್ಞಾನ ಸುದ್ದಿ ವೆಬ್‌ಸೈಟ್‌ ದಿ ವರ್ಜ್ ಪ್ರಕಾರ, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಗುರುವಾರ ಹೊಸ ಚಾನೆಲ್ ಒಂದರ ಮೂಲಕ ಈ ಘೋಷಣೆ ಮಾಡಿದ್ದಾರೆ. ಚಾನಲ್‌ಗಳ ಫೀಚರ್​ ಸದ್ಯಕ್ಕೆ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ.

    ಇನ್ನು ಟೆಲಿಗ್ರಾಮ್ ರೀತಿಯಲ್ಲೇ ಇನ್​ಸ್ಟಾಗ್ರಾಂನಲ್ಲೂ ಚ್ಯಾನಲ್​​ ಬರುತ್ತೆ!

    ಕ್ರಿಯೇಟರ್​ಗಳು ಇನ್ನು ಚಾನಲ್​ಗಳ ಮೂಲಕ ತಮ್ಮ ಸಾವಿರಾರು ಫಾಲೋವರ್​ಗಳಿಗೆ ಮೆಸೇಜ್​ ಹಾಗೂ ಅಪ್​ಡೇಟ್​ಗಳನ್ನು ಪ್ರಸಾರ ಮಾಡಬಹುದು. ಫಾಲೋವರ್​ಗಳು ಈ ಚಾನಲ್‌ಗಳಲ್ಲಿ ಪೋಸ್ಟ್ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಅವರು ಪೋಸ್ಟ್‌ಗಳಿಗೆ ಎಮೋಜಿ ಮೂಲಕ ಪ್ರತ್ಯುತ್ತರಿಸಲು ಮತ್ತು ಪೋಲ್​ಗಳಲ್ಲಿ ಮತ ಚಲಾಯಿಸಲು ಸಾಧ್ಯವಾಗುತ್ತದೆ.

    ಮೆಟಾ ಚಾನೆಲ್ ಎಂದು ಕರೆಯಲ್ಪಡುವ ಜುಕರ್‌ಬರ್ಗ್ ಅವರ ಚಾನೆಲ್​ನಲ್ಲಿ ಅವರು “ನಾವು ಮೆಟಾದಲ್ಲಿ ನಿರ್ಮಿಸುತ್ತಿರುವ ಎಲ್ಲಾ ಉತ್ಪನ್ನಗಳು ಮತ್ತು ತಂತ್ರಜ್ಞಾನದ ಸುದ್ದಿ ಮತ್ತು ನವೀಕರಣಗಳನ್ನು ಹಂಚಿಕೊಳ್ಳುವ ಸ್ಥಳವಾಗಿದೆ” ಎಂದು ಬರೆದಿದ್ದಾರೆ. ಈ ಬಗ್ಗೆ ದಿ ವರ್ಜ್ ವರದಿ ಮಾಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts