More

    ಕಿಸಾನ್​ ಕಾರ್ಡ್​ ಹೆಸರಲ್ಲಿ ವಂಚಿಸುತ್ತಿದ್ದ ಎನ್​ಜಿಒ ಸದಸ್ಯರನ್ನು ಕೂಡಿ ಹಾಕಿ ಥಳಿಸಿದ ಗ್ರಾಮಸ್ಥರು!

    ದಾವಣಗೆರೆ: ಕಿಸಾನ್ ಕಾರ್ಡ್ ಹೆಸರಲ್ಲಿ ರೈತರಿಗೆ ವಂಚನೆ ಮಾಡುತ್ತಿದ್ದ ಎನ್​ಜಿಓ ಸಿಬ್ಬಂದಿಯನ್ನ ಕೂಡಿ ಹಾಕಿ ಗ್ರಾಮಸ್ಥರು ಥಳಿಸಿದ ಪ್ರಕರಣ ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದಲ್ಲಿ ನಡೆದಿದೆ.

    ಈ ಎನ್​ಜಿಒ ಸಿಬ್ಬಂದಿ, ಇ ಕಾರ್ಡ್ ಇದ್ದರೆ ರೈತರು ಸುಲಭವಾಗಿ ಸೌಲಭ್ಯಗಳನ್ನು ಪಡೆಯಬಹುದು ಎಂದು ನಂಬಿಸಿದ್ದರು. ಇವರು ಎಷ್ಟು ಚಾಲಾಕಿಗಳು ಎಂದರೆ ಎಲೆಬೇತೂರು ಗ್ರಾಮ ಪಂಚಾಯಿತಿಯಲ್ಲಿಯೇ ಕಾರ್ಡ್ ಮಾಡಿಕೊಡುತ್ತಿದ್ದರು. ಅಷ್ಟೇ ಅಲ್ಲದೇ ಡಿಸಿ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅನುಮತಿ ಪಡೆದಿದ್ದಾಗಿ ಸುಳ್ಳು ಹೇಳಿದ್ದರು.

    ಈ ಎನ್​ಜಿಓ ಸಿಬ್ಬಂದಿ ಮಾತು ನಂಬಿ 200 ರೂ. ನೀಡಿ 300 ಕ್ಕೂ ಅಧಿಕ ಜನ ಕಾರ್ಡ್ ಮಾಡಿಸಿದ್ದರು. ಆದರೆ ಕಾರ್ಡ್ ನಂಬರ್ ಮತ್ತು ಬಾರ್ ಕೋರ್ಡ್ ಕೆಲಸ ಮಾಡುತ್ತಿರಲಿಲ್ಲ. ಈ ಬಗ್ಗೆ ಸಿಬ್ಬಂದಿ ಬಳಿ ಕೇಳಿದರೆ ರೈತರಿಗೆ ಎನ್​ಜಿಓ ಸಿಬ್ಬಂದಿ ಧಮಕಿ ಹಾಕಿದ್ದರು.

    ಕಿಸಾನ್​ ಕಾರ್ಡ್​ ಹೆಸರಲ್ಲಿ ವಂಚಿಸುತ್ತಿದ್ದ ಎನ್​ಜಿಒ ಸದಸ್ಯರನ್ನು ಕೂಡಿ ಹಾಕಿ ಥಳಿಸಿದ ಗ್ರಾಮಸ್ಥರು!

    ಆಗ ಗ್ರಾಮಸ್ಥರು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಹಾಗೂ ತಾಪಂ ಇಓ ಬಳಿ ಕೇಳಿದಾಗ ಸತ್ಯಾಂಶ ಬಯಲಾಗಿದೆ. ಇವರು ಇಲಾಖೆಯ ಅನುಮತಿ ಪಡೆಯದೆ ಎನ್​ಜಿಓ ಹೆಸರಲ್ಲಿ ರೈತರಿಗೆ ಕಾರ್ಡ್ ನೀಡುತ್ತಿದ್ದರು. ವಂಚನೆ ಸಂಶಯದ ಹಿನ್ನೆಲೆ ಸಿಬ್ಬಂದಿಯನ್ನು ಗ್ರಾಮಸ್ಥರು ಕೂಡಿ ಹಾಕಿದ್ದರು. ಬಳಿಕ ಸಿಬ್ಬಂದಿಯ ಜೊತೆಗೆ ಗ್ರಾಮಸ್ಥರ ವಾಗ್ವಾದ ನಡೆದಿದ್ದು ಆಗ ಸಿಬ್ಬಂದಿಯನ್ನ ಎಳೆದಾಡಿದ ಗ್ರಾಮಸ್ಥರು ಥಳಿಸಿದ್ದಾರೆ.

    ಈ ಪ್ರಕರಣ ನಡೆದ ಕೂಡಲೆ ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಗ್ರಾಮಸ್ಥರು ಎನ್​ಜಿಓ ಸಿಬ್ಬಂದಿಯನ್ನು ಒಪ್ಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts