More

    ಗರ್ಭಿಣಿ ಕರೀನಾ ಕಪೂರ್​ ಮನೆಯಲ್ಲಿ ದೀಪಾವಳಿ ಸಂಭ್ರಮ ಶುರು

    ಬಾಲಿವುಡ್​ ನಟಿ ಕರೀನಾ ಕಪೂರ್​ ಮನೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಶುರುವಾಗಿದೆ.
    ಗರ್ಭಿಣಿ ಆಗಿರುವ ಕರೀನಾ ಕಪೂರ್​ ತಮ್ಮ ಮ್ಯಾನೇಜರ್​ ಪೂನಂ ದಾಮಾನಿಯಾ ಅವರೊಂದಿಗೆ ಸರಳವಾಗಿ ದೀಪಾವಳಿ ಆಚರಿಸಿದ್ದಾರೆ. ಅವರ ಹಬ್ಬದ ಆಚರಣೆಯ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

    ಗರ್ಭಿಣಿ ಕರೀನಾ ಕಪೂರ್​ ತನ್ನ ಅಮ್ಮ ಬಬಿತಾ ಮತ್ತು ಸ್ನೇಹಿತೆ ಮಸಾಬಾ ಗುಪ್ತಾ ಅವರೊಂದಿಗೆ ಹಬ್ಬ ಆಚರಿಸಿರುವ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಕರೀನಾ ಬಿಳಿ ಬಣ್ಣದ ಸೆಲ್ವಾರ್​ ಕಮೀಜ್​, ದುಪ್ಪಟ್ಟಾ ಧರಿಸಿ ಸಾಂಪ್ರದಾಯಿಕ ಲುಕ್​​ನಲ್ಲಿದ್ದಾರೆ. ಇದನ್ನೂ ಓದಿ: ಮದುವೆ ಆಗಬೇಕಿದ್ದ ಪ್ರೇಮಿಗಳು ಜಮೀನಿನಲ್ಲೇ ವಿಷ ಕುಡಿದರು! ಆತ್ಮಹತ್ಯೆಗೆ ಅದೇ ಕಾರಣವಾಯ್ತ?

    ಈ ಫೋಟೋವನ್ನು ಪೂನಂ ದಾಮಾನಿಯಾ ಇನ್ಸ್ಟಾದಲ್ಲಿ ಶೇರ್​ ಮಾಡಿಕೊಂಡಿದ್ದು, ನಾನು ನನ್ನ ಪ್ರೀತಿ ಪಾತ್ರರೊಂದಿಗೆ ಹಬ್ಬ ಆಚರಿಸುತ್ತಿದ್ದೇನೆ ಎಂದು ಕ್ಯಾಪ್ಷನ್​ ಬರೆದಿದ್ದಾರೆ.  ಸದ್ಯ ಕರೀನಾ ಹಾಗೂ ಸೈಫ್​ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. 2012ರಲ್ಲಿ ವಿವಾಹವಾಗಿರುವ ಇವರ ನಾಲ್ಕು ವರ್ಷದ ಪುತ್ರ ತೈಮೂರ್​ ಈಗಾಗಲೇ ಸಖತ್​ ಫೇಮಸ್​ ಆಗಿದ್ದಾನೆ. (ಏಜೆನ್ಸೀಸ್​)

    ಗರ್ಭಿಣಿ ಕರೀನಾ ಕಪೂರ್​ ಮನೆಯಲ್ಲಿ ದೀಪಾವಳಿ ಸಂಭ್ರಮ ಶುರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts