More

    “ಪೆಟ್ಟು ಬಿದ್ದ ಹುಲಿ ಹೆಚ್ಚು ಅಪಾಯಕಾರಿ” : ಮಮತಾ ಬ್ಯಾನರ್ಜಿ ಎಚ್ಚರಿಕೆ

    ಕೊಲ್ಕತಾ : ಪಶ್ಚಿಮ ಬಂಗಾಳದಲ್ಲಿ, ಕಾಲಿಗೆ ಫ್ರಾಕ್ಚರ್​ ಹಾಕಿಸಿಕೊಂಡಿರುವ ಸಿಎಂ ಮಮತಾ ಬ್ಯಾನರ್ಜಿ, ಭಾನುವಾರ ವೀಲ್ ಚೇರ್​ನಲ್ಲೇ ಕೂತು ಚುನಾವಣಾ ಪ್ರಚಾರ ಪುನರಾರಂಭಿಸಿದ್ದಾರೆ. ನಂದಿಗ್ರಾಮದಲ್ಲಿ ಗಾಯಗೊಂಡು ಮೂರು ದಿನಗಳ ಸಣ್ಣ ಬ್ರೇಕ್​ ತೆಗೆದುಕೊಂಡು ವಾಪಾಸಾಗಿರುವ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೊಲ್ಕತಾದಲ್ಲಿ ಹಮ್ಮಿಕೊಂಡಿದ್ದ ರೋಡ್​ಶೋನಲ್ಲಿ ಭಾಗವಹಿಸಿದರು.

    2007 ರಲ್ಲಿ ಭೂಸ್ವಾಧೀನ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸ್ ಗುಂಡಿನ ದಾಳಿಯಲ್ಲಿ 14 ಗ್ರಾಮಸ್ಥರು ಹತ್ಯೆಗೀಡಾದ ನೆನಪಿಗಾಗಿ ಆಚರಿಸುವ ‘ನಂದಿಗ್ರಾಮ್ ದಿವಸ್’ನ ಭಾಗವಾಗಿ ಟಿಎಂಸಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಮೇಯೋ ರಸ್ತೆಯಿಂದ ಹಜ್ರಾ ಮೋರೆವರೆಗಿನ ಐದು ಕಿಲೋಮೀಟರ್ ರೋಡ್ ಶೋನಲ್ಲಿ ಭಾಗವಹಿಸಿದ ದೀದಿ ವೀಲ್ ಚೇರ್​ನಿಂದಲೇ ನೆರೆದ ಜನರಿಗೆ ಕೈಮುಗಿಯುತ್ತಾ ಸಾಗಿದರು. ಅವರ ರಕ್ಷಣಾ ಸಿಬ್ಬಂದಿ ವೀಲ್ ಚೇರನ್ನು ತಳ್ಳುತ್ತಿದ್ದರು.

    ಇದನ್ನೂ ಓದಿ: ಡಂಗೂರ ಸಾರಿ ಕರೊನಾ ಲಸಿಕೆ ಬಗ್ಗೆ ಜಾಗೃತಿ

    ಈ ಸಂದರ್ಭದಲ್ಲಿ ಮಾತನಾಡಿದ ದೀದಿ, ಪೆಟ್ಟು ಬಿದ್ದ ಹುಲಿ ಹೆಚ್ಚು ಅಪಾಯಕಾರಿಯಾಗುತ್ತದೆ ಎಂದು ತಮ್ಮನ್ನು ತಾವೇ ಬಂಗಾಳದ ಹುಲಿಗೆ ಹೋಲಿಸಿಕೊಂಡರು! “ನಾನು ನನ್ನ ಜೀವನದಲ್ಲಿ ಹಲವಾರು ದಾಳಿಗಳನ್ನು ಎದುರಿಸಿದ್ದೇನೆ. ಆದರೆ ಯಾವಾಗಲೂ ಯಾರ ವಿರುದ್ಧವೂ ಶರಣಾಗಿಲ್ಲ. ನಾನು ಎಂದಿಗೂ ತಲೆ ಬಗ್ಗಿಸುವುದಿಲ್ಲ. ಗಾಯಗೊಂಡ ಹುಲಿಯು ಇನ್ನೂ ಹೆಚ್ಚು ಅಪಾಯಕಾರಿಯಾಗುತ್ತದೆ” ಎಂದರು.

    “ಇಂದು ಪ್ರಚಾರಕ್ಕಾಗಿ ಹೊರಹೋಗದಂತೆ ವೈದ್ಯರು ನನಗೆ ಸಲಹೆ ನೀಡಿದರು. ಆದರೆ ನಾವು ಈಗಾಗಲೇ ಕೆಲವು ದಿನಗಳನ್ನು ಕಳೆದುಕೊಂಡಿರುವ ಕಾರಣ ನಾನು ಇಂದಿನ ರಾಲಿಯಲ್ಲಿ ಭಾಗವಹಿಸಬೇಕು ಎಂದನಿಸಿತು. ಪ್ರಜಾಪ್ರಭುತ್ವವನ್ನು ಸರ್ವಾಧಿಕಾರದಿಂದ ಹೊಸಕಿಹಾಕುತ್ತಿರುವಾಗ, ಜನರ ನೋವಿಗಿಂತ ನನ್ನ ನೋವು ಹೆಚ್ಚಲ್ಲ” ಎಂದು ದೀದಿ ಹೇಳಿದರು. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಜಮ್ಮು-ಕಾಶ್ಮೀರದ ಶಾಲೆಗಳಿಗೆ ತ್ರಿವರ್ಣ ಫಲಕಗಳು

    ಹೇಗ್ಹೇಗೋ ಮುಟ್ಟುತ್ತಾ ‘ಪರೀಕ್ಷೆ’ ನಡೆಸುತ್ತಿದ್ದ ನರ್ಸಿಂಗ್ ಇನ್ಸ್​​ಟಿಟ್ಯೂಟ್ ಮುಖ್ಯಸ್ಥನ ಬಂಧನ

    ತಮಿಳುನಾಡು : ಅರವಕುರಿಚಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅಣ್ಣಾಮಲೈ ಐಪಿಎಸ್

    “ಆ ರಹೀ ಹೇ ಪೊಲೀಸ್… !” ಭರ್ಜರಿ ಆ್ಯಕ್ಷನ್ ಚಿತ್ರಕ್ಕೆ ತಯಾರಾಗಿ !

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts