More

    ಸಾಕುನಾಯಿಯನ್ನು ಕರೆದೊಯ್ಯಲು ಬಾಡಿಗೆ ವಿಮಾನದಲ್ಲಿ ಬೆಂಗಳೂರಿಗೆ ಬಂದು ಮರಳಿದರು!

    ಬೆಂಗಳೂರು: ನಗರದಲ್ಲೇ ಬಿಟ್ಟು ಹೋಗಿದ್ದ ತಮ್ಮ ಸಾಕುನಾಯಿಯನ್ನು ಮುಂಬೈಗೆ ಕರೆದೊಯ್ಯಲು ಕೈಗಾರಿಕೋದ್ಯಮಿಯೊಬ್ಬರು ಬಾಡಿಗೆ ವಿಮಾನದಲ್ಲಿ ಬೆಂಗಳೂರಿಗೆ ಬಂದು, ಅದೇ ವಿಮಾನದಲ್ಲಿ ನಾಯಿಯೊಂದಿಗೆ ಮುಂಬೈಗೆ ಮರಳಿದ್ದಾರೆ.

    ಜೂನ್​ 4ರ ಬೆಳಗ್ಗೆ ಮುಂಬೈನಿಂದ ಹೊರಟ ಕೈಗಾರಿಕೋದ್ಯಮಿ ಹಾಗೂ ಅವರ ಕುಟುಂಬದ ಇನ್ನಿಬ್ಬರು ಸದಸ್ಯರು ಮಧ್ಯಾಹ್ನ 1.30ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದರು. ಅಂದಾಜು ಎರಡು ಗಂಟೆ ನಗರದಲ್ಲಿದ್ದ ಅವರು ನಾಯಿಯನ್ನು ಕರೆದುಕೊಂಡು ಅದೇ ವಿಮಾನದಲ್ಲಿ ಮುಂಬೈಗೆ ಮರಳಿದರು ಎನ್ನಲಾಗಿದೆ.

    ಇದನ್ನೂ ಓದಿ: ಕರೊನಾದ ಆರಂಭಿಕ ಚಿಕಿತ್ಸೆಗೆ ರೆಂಡೆಸಿವಿರ್​ ಚುಚ್ಚುಮದ್ದು ಬಳಕೆಗೆ ಸರ್ಕಾರದ ಹಸಿರುನಿಶಾನೆ

    ಕರೊನಾ ನೆಗೆಟಿವ್​ ವರದಿ ತಂದಿದ್ದರು: ಕೋವಿಡ್​-19 ಕೆಂಪು ವಲಯ ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಹಿನ್ನೆಲೆಯಲ್ಲಿ ಕೈಗಾರಿಕೋದ್ಯಮಿ ಮತ್ತು ಕುಟುಂಬಸ್ಥರು ಖಾಸಗಿ ಪ್ರಯೋಗಾಲಯದಲ್ಲಿ ಕೋವಿಡ್​-19 ಪರೀಕ್ಷೆಗೆ ಒಳಪಟ್ಟಿದ್ದರು. ಅಲ್ಲದೆ, ಅವರ ವರದಿ ಕೋವಿಡ್​ ನೆಗೆಟಿವ್​ ಎಂದು ಬಂದಿತ್ತು. ಆ ಪ್ರಮಾಣಪತ್ರದೊಂದಿಗೆ ಅವರು ಬೆಂಗಳೂರಿಗೆ ಬಂದಿದ್ದರು.

    ಆದರೆ, ಈ ಪ್ರಯೋಗಾಲಯಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಮಾನ್ಯತೆ ಇರದಿದ್ದ ಕಾರಣ ವಿಮಾನ ನಿಲ್ದಾಣದಲ್ಲಿ ಸ್ವಲ್ಪಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಪ್ರಮಾಣಪತ್ರ ನೈಜವಾದದ್ದು ಎಂಬುದು ಖಚಿತಪಟ್ಟ ನಂತರದಲ್ಲಿ ವಿಮಾನ ನಿಲ್ದಾಣದಿಂದ ಹೊರಹೋಗಲು ಕೈಗಾರಿಕೋದ್ಯಮಿ ಮತ್ತು ಅವರ ಕುಟುಂಬಸ್ಥರಿಗೆ ಅಧಿಕಾರಿಗಳು ಅನುಮತಿ ನೀಡಿದರು ಎನ್ನಲಾಗಿದೆ.

    ಕರೊನಾ ವೈರಸ್​ನಿಂದ ಬದುಕುಳಿದವನ ಮನೆಗೆ ಬಂತು 8. 5 ಕೋಟಿ ರೂ. ಆಸ್ಪತ್ರೆ ಬಿಲ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts