More

  ಕೈಗಾರಿಕಾ ಭದ್ರತಾ ಪಡೆ ಎಸ್‌ಐ ನೇಮಕಾತಿಗೆ ಜ.29ಕ್ಕೆ ಲಿಖಿತ ಪರೀಕ್ಷೆಗೆ ದಿನಾಂಕ ನಿಗದಿ

  ಬೆಂಗಳೂರು: ಸಬ್‌ಇನ್‌ಸ್ಪೆಕ್ಟರ್ 545 ಹುದ್ದೆಗಳ ನೇಮಕಾತಿ ಹಗರಣದ ಬಳಿಕ ನೆಲೆಗುದಿಗೆ ಬಿದ್ದಿದ್ದ ಮತ್ತೊಂದು ಪಿಎಸ್‌ಐ ಲಿಖಿತ ಪರೀಕ್ಷೆ ದಿನಾಂಕ ನಿಗದಿ ಮಾಡಲಾಗಿದೆ.

  ರಾಜ್ಯ ಕೈಗಾರಿಕಾ ಭದ್ರತಾ ಪಡೆ ವಿಭಾಗದಲ್ಲಿ ಖಾಲಿ ಇರುವ 63 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆಯನ್ನು ಜ.29ಕ್ಕೆ ನಿಗದಿ ಮಾಡಿ ರಾಜ್ಯ ಪೊಲೀಸ್ ನೇಮಕಾತಿ ವಿಭಾಗ ಆದೇಶಿಸಿದೆ.

  2021-22ರಲ್ಲಿ ಕೈಗಾರಿಕಾ ಭದ್ರತಾ ಪಡೆ ವಿಭಾಗದ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, 545 ಎಸ್‌ಐ ನೇಮಕಾತಿ ಹಗರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಎಲ್ಲ ಪೊಲೀಸ್ ನೇಮಾತಿಯನ್ನು ನಿಲ್ಲಿಸಲಾಗಿತ್ತು. ಇತ್ತೀಚೆಗೆ ಕೆಎಸ್‌ಆರ್‌ಪಿ/ಐಆರ್‌ಬಿ ಪಿಎಸ್‌ಐ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆಸಲಾಗಿದೆ. ಇದೀಗ ಜ.8ರ ಭಾನುವಾರ ಸಹ ಸಿಎಆರ್ ಆ್ಯಂಡ್ ಡಿಎಆರ್ ವಿಭಾಗದ ಪಿಎಸ್‌ಐ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆಯಲಿದೆ. 3ನೇಯದಾಗಿ ಜ.29ಕ್ಕೆ ಕೈಗಾರಿಕಾ ಭದ್ರತಾ ವಿಭಾಗದ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆಸುವುದಾಗಿ ನೇಮಕಾತಿ ವಿಭಾಗ ತಿಳಿಸಿದೆ.

  ಇನ್ನೂ 545 ಮತ್ತು 402 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆಯಬೇಕಾಗಿದೆ.

  ಕಲ್ಯಾಣ ಮಂಟಪದಲ್ಲಿ ವಧು ಸಿಗರೇಟ್​ ಸೇದುವ ಸ್ಟೈಲ್​ಗೆ ದಂಗಾದ ವರ! ವಿಡಿಯೋ ವೈರಲ್​

  ಸಿದ್ಧೇಶ್ವರ ಶ್ರೀಗಳ ನಿಧನಕ್ಕೆ ಸ್ಯಾಂಡಲ್​ವುಡ್​ ಸಂತಾಪ

  ಅಪ್ರಾಪ್ತರಿಗೆ, ಕಾಲೇಜು ಯುವಕರಿಗೆ ಡ್ರಗ್ಸ್​ ಮಾರುತ್ತಿದ್ದ ರೌಡಿಯ ಬಂಧನ…

  ರಾಜ್ಯೋತ್ಸವ ರಸಪ್ರಶ್ನೆ - 20

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts