ನವದೆಹಲಿ: ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಕೊನೆಯವರೆಗೂ ಉಳಿಯುವ ಸುಂದರ ಕ್ಷಣಗಳು. ಹೀಗಾಗಿ ಮದುವೆ ಸಂದರ್ಭದಲ್ಲಿ ಸಾಧ್ಯವಾದಷ್ಟು ಆ ಕ್ಷಣವನ್ನು ವರ್ಣಮಯವಾಗಿಸಲು ವಧು-ವರರು ಬಯಸುತ್ತಾರೆ. ಹೀಗಾಗಿ ಪ್ರೀ ವೆಡ್ಡಿಂಗ್ ಫೋಟೋಶೂಟ್, ವಿಡಿಯೋ ರೆಕಾರ್ಡಿಂಗ್, ಅಲಂಕಾರ ಸೇರಿದಂತೆ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ.
ಮದುವೆ ಸಂದರ್ಭದಲ್ಲಿ ಅನೇಕ ಹಾಸ್ಯಮಯ ಘಟನೆಗಳು ಸಹ ಕ್ಯಾಮೆರಾದಲ್ಲಿ ಸರೆಯಾಗುತ್ತವೆ. ಅಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಣ್ಣು ಮಿಟುಕಿಸುವಷ್ಟರಲ್ಲಿ ವೈರಲ್ ಆಗಿಬಿಡುತ್ತವೆ. ಅಂಥದ್ದೇ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವೈರಲ್ ವಿಡಿಯೋದಲ್ಲಿ ವಧು ತನ್ನ ಕೈಯಿಂದ ಮುಖವನ್ನು ಮುಚ್ಚಿಕೊಂಡು ಹಾಸಿಗೆಯ ಮೇಲೆ ಕುಳಿತಿರುವುದನ್ನು ಕಾಣಬಹುದು. ಆಕೆಯ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ವಧುವನ್ನು ನೋಡಲು ಆಕೆಯ ಕೋಣೆಗೆ ಪ್ರವೇಶಿಸುತ್ತಾರೆ. ವಧು ಮತ್ತು ಎಲ್ಲರೂ ನಗುತ್ತಿರುವಾಗ ವಧುವನ್ನು ಎಲ್ಲರು ಹುರಿದುಂಬಿಸುವುದನ್ನು ಮತ್ತು ಹೊಗಳುವುದನ್ನು ಕಾಣಬಹುದು.
ವಿಡಿಯೋ ಕೊನೆಯಲ್ಲಿ ವಧು ಸ್ಟೈಲ್ ಆಗಿ ಸಿಗರೇಟ್ ಸೇದುವುದನ್ನು ಸಹ ಕಾಣಬಹುದು. ಸದ್ಯ ವಿಡಿಯೋ ವೈರಲ್ ಆಗಿದ್ದು, ವಧುವಿನ ಸ್ವ್ಯಾಗ್ ನೋಡಿ ದಂಗಾಗಿದ್ದು, ಕಾಮೆಂಟ್ಗಳ ಸುರಿಮಳೆ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)
ಹನಿಟ್ರ್ಯಾಪ್ ಮಾಡಲು ನಟಿಯರ ಬಳಕೆ: ಪಾಕ್ ನಿವೃತ್ತ ಸೇನಾಧಿಕಾರಿಯಿಂದ ಶಾಕಿಂಗ್ ಸಂಗತಿ ಬಯಲು
ಕೆಳ ಹಂತದ ಪೊಲೀಸ್ ಸಿಬ್ಬಂದಿಗೆ ಕಿರುಕುಳ ನೀಡಿದ ಆರೋಪ: ವಿಧಾನಸೌಧ ಭದ್ರತಾ ವಿಭಾಗ ಡಿಸಿಪಿ ಎತ್ತಂಗಡಿ
ಅಪ್ರಾಪ್ತರಿಗೆ, ಕಾಲೇಜು ಯುವಕರಿಗೆ ಡ್ರಗ್ಸ್ ಮಾರುತ್ತಿದ್ದ ರೌಡಿಯ ಬಂಧನ…