More

    ಕೆಳ ಹಂತದ ಪೊಲೀಸ್ ಸಿಬ್ಬಂದಿಗೆ ಕಿರುಕುಳ ನೀಡಿದ ಆರೋಪ: ವಿಧಾನಸೌಧ ಭದ್ರತಾ ವಿಭಾಗ ಡಿಸಿಪಿ ಎತ್ತಂಗಡಿ

    ಬೆಂಗಳೂರು: ವಿಧಾನಸೌಧ ಭದ್ರತಾ ವಿಭಾಗದ ಪೊಲೀಸರಿಗೆ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿದ್ದ ಡಿಸಿಪಿ ಅಶೋಕ ರಾಮಪ್ಪ ಜುಂಜರವಾಡ್ ಸೇರಿದಂತೆ 7 ಸಶಸ ಅಧೀಕ್ಷಕರನ್ನು ವರ್ಗಾವಣೆ ಮಾಡಿ ಗೃಹ ಇಲಾಖೆ ಮಂಗಳವಾರ ಆದೇಶಿಸಿದೆ.

    ಡಿಸಿಪಿ ಅಶೋಕ ರಾಮಪ್ಪ ಜುಂಜರವಾಡ್ ವಿರುದ್ಧ ವಿಧಾನಸೌಧ ಭದ್ರತ ವಿಭಾಗದ ಪೊಲೀಸ್ ಅಧಿಕಾರಿ, ಸಿಬ್ಬಂದಿ ರಾಷ್ಟ್ರಪತಿಗೆ ದಯಾ ಮರಣ ಕೋರಿ ಅರ್ಜಿ ಸಲ್ಲಿಸಿದ್ದರು. ಈ ನಿವೇದನ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೂ ಮೊದಲು ಕಾರು ಚಾಲಕ ಸಹ ಡಿಸಿಪಿ ವಿರುದ್ಧ ಬಹಿರಂಗ ಪತ್ರ ಬರೆದು ನೋವು ಹಂಚಿಕೊಂಡಿದ್ದರು. ಈ ಎಲ್ಲದರ ಪರಿಣಾಮ ಅಶೋಕ ರಾಮಪ್ಪ ಜುಂಜರವಾಡ್‌ರನ್ನು ಯಲಹಂಕದ ಪಿಡಿಎಂಎಸ್‌ಗೆ ವರ್ಗಾವಣೆ ಮಾಡಿದೆ.

    ಅದೇ ವೇಳೆ ಶಿವರಾಜು-ಕೆಎಆರ್‌ಪಿ ಮೌಂಟೆಂಡ್ ಕಂಪನಿ (ಹಾಸನ), ಎಂ.ಜಿ. ನಾಗರಾಜು-ಪಿಟಿಎಸ್ (ಹಾಸನ), ಎ. ಮಾರುತಿ- ಸಿಎಆರ್ (ಮೈಸೂರು ನಗರ), ಚನ್ನವೀರಪ್ಪ ಬಿ.ಹಡಪ್ಪದ್- ವಿಧಾನಸೌಧ ಭದ್ರತೆ, ಮಹದೇವಪ್ಪ ಮಾರುತಿ ಯಾದವಾಡ- ಪಿಟಿಎಸ್ (ಧಾರವಾಡ), ಪಿ. ಉಮೇಶ್-ಸಿಎಆರ್ (ಮಂಗಳೂರು ನಗರ)ಕ್ಕೆ ವರ್ಗಾವಣೆ ಮಾಡಲಾಗಿದೆ.

    ಹನಿಟ್ರ್ಯಾಪ್​​ ಮಾಡಲು ನಟಿಯರ ಬಳಕೆ: ಪಾಕ್​ ನಿವೃತ್ತ ಸೇನಾಧಿಕಾರಿಯಿಂದ ಶಾಕಿಂಗ್​ ಸಂಗತಿ ಬಯಲು

    ಬರುತ್ತಿದ್ದಾರೆ ಲಕ್ಷೋಪಲಕ್ಷ ಜನ; ನಾಳೆ ಬೆಳಗ್ಗೆವರೆಗೂ ಮುಂದುವರೆಯುವುದೇ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ?

    ವಯಸ್ಸಿಗೆ ಮೊದಲೇ ನಿಮಗೆ ಬಿಳಿ ಕೂದಲಾಗಿವೆಯೇ? ಅದನ್ನು ಮತ್ತೆ ಕಪ್ಪು ಮಾಡಲು 4 ಸುಲಭ ಮನೆಮದ್ದು ಇಲ್ಲಿವೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts