More

    ಬೋಯಿಂಗ್ ವಿಮಾನ ಹೈಜ್ಯಾಕ್​? ಪ್ರಯಾಣ ಆರಂಭಿಸಿದ ನಾಲ್ಕೇ ನಿಮಿಷಗಳಲ್ಲಿ ​ಸಂಪರ್ಕ ಕಡಿತ

    ಜಕಾರ್ತಾ: ಇಂಡೋನೇಷಿಯಾದ ವಿಮಾನ ನಿಲ್ದಾಣದಿಂದ ಹೊರಟ ವಿಮಾನವೊಂದು, ಹಾರಾಟ ಆರಂಭಿಸಿ ನಾಲ್ಕೇ ನಿಮಿಷಗಳಲ್ಲಿ ರಾಡಾರ್​ ಸಂಪರ್ಕ ಕಡಿತವಾಗಿಸಿಕೊಂಡಿದೆ. ವಿಮಾನದ ಪತ್ತೆಗಾಗಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಲಾಗಿದೆ.

    ಇದನ್ನೂ ಓದಿ: ಕರೊನಾ ಲಸಿಕೆ ಪಡೆದ ಹತ್ತೇ ದಿನಗಳಲ್ಲಿ ಸತ್ತ!; ಸಾವಿಗೆ ಕಾರಣ ವಿಷ ಎಂದಿತ್ತು ಮರಣೋತ್ತರ ಪರೀಕ್ಷೆಯಲ್ಲಿ…

    ಶ್ರೀವಿಜಯ ಏರ್​ ಎಸ್​ಜೆ-182, ಬೋಯಿಂಗ್​​ 737-500 ವಿಮಾನವು ಜಕಾರ್ತಾದಿಂದ ಮಧ್ಯಾಹ್ನ 12.07ಕ್ಕೆ (6.37 ಯುಟಿಎಸ್​) ಹೊರಟಿದೆ. 56 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ವಿಮಾನದಲ್ಲಿ ಪ್ರಯಾಣ ಆರಂಭಿಸಿದೆ. ವಿಮಾನ ಹಾರಾಟ ಆರಂಭಿಸಿ 10 ಸಾವಿರ ಅಡಿ ಎತ್ತರಹೋಗುವಷ್ಟರಲ್ಲಿ ವಿಮಾನದ ರಾಡಾರ್ ಸಂಪರ್ಕ ಕಡಿತಗೊಂಡಿದೆ. 12.11ರಿಂದ ವಿಮಾನ ಸಂಪರ್ಕ ಸಾಧ್ಯವಾಗಿಲ್ಲ.

    ಇದನ್ನೂ ಓದಿ: ಖುರ್ಚಿಯಲ್ಲಿ ಪ್ರಿಯತಮನನ್ನು ಕಟ್ಟಿ ಸೆಕ್ಸ್​ ಮಾಡಲು ಹೋದ ಮಹಿಳೆ; ಕಾಮದಾಸೆಯಲ್ಲೇ ಯಮಲೋಕ ಸೇರಿದ ಯುವಕ

    ಈ ವಿಮಾನವು 1994ರ ಮೇ ತಿಂಗಳಲ್ಲಿ ಮೊದಲ ಹಾರಾಟ ನಡೆಸಿತ್ತು. 26 ವರ್ಷಗಳಿಂದ ಯಾವುದೇ ತೊಂದರೆಯಿಲ್ಲದೆ ಜನರನ್ನು ಹೊತ್ತೊಯ್ಯುತ್ತಿದ್ದುದ್ದಾಗಿ ತಿಳಿಸಲಾಗಿದೆ. “ಕಾಣೆಯಾದ ವಿಮಾನವು ಪ್ರಸ್ತುತ ತನಿಖೆಯಲ್ಲಿದೆ ಮತ್ತು ರಾಷ್ಟ್ರೀಯ ಶೋಧ ಮತ್ತು ಪಾರುಗಾಣಿಕಾ ಸಂಸ್ಥೆ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿಯ ಸಮನ್ವಯದಲ್ಲಿದೆ” ಎಂದು ಇಂಡೋನೇಷ್ಯಾದ ಸಾರಿಗೆ ಸಚಿವಾಲಯದ ವಕ್ತಾರ ಅದಿತಾ ಐರಾವತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ವಿಮಾನ ಸಮುದ್ರದೊಳಗೆ ಬಿದ್ದಿದೆಯೇ ಎನ್ನುವ ಅನುಮಾನಗಳು ವ್ಯಕ್ತವಾಗಿದೆ. (ಏಜೆನ್ಸೀಸ್​)

    ಪಾರ್ಟಿಗೆ ಮಗಳನ್ನು ಕರೆದು ಹತ್ಯೆ ಮಾಡಿ, ಪ್ರಿಯಕರನನ್ನು ರೇಪ್​ ಮಾಡಿ ಕೊಂದ ಕುಟುಂಬ: ಬೆಚ್ಚಿಬೀಳಿಸುವ ಪ್ರಕರಣವಿದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts