More

    ಇಂಡೋನೇಷ್ಯಾದಲ್ಲಿ ಪ್ರೇಮಿಗಳ ದಿನ ಆಚರಿಸುವಂತಿಲ್ಲ: ಏಕೆ ಗೊತ್ತಾ?

    ಮಕಾಸ್ಸರ್​: ಪ್ರೇಮಿಗಳ ದಿನವಾದ ಇಂದು ಪ್ರಪಮಚದಾದ್ಯಂತ ವಿಜೃಂಭಣೆಯಿಂದ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತಿದೆ. ಆದರೆ ಇಂಡೋನೇಷ್ಯಾದಲ್ಲಿ ಈ ದಿನವನ್ನು ಆಚರಿಸುವಂತಿಲ್ಲ. ಇದರಿಂದ ಯುವ ಜನತೆಗೆ ಸೆಕ್ಸ್​ ಬಗ್ಗೆ ಆಸಕ್ತಿ ಮೂಡುತ್ತದೆ ಎನ್ನುವ ಕಾರಣಕ್ಕೆ ಅಲ್ಲಿನ ಸರ್ಕಾರ ಈ ದಿನವನ್ನು ಆಚರಿಸುವುದಕ್ಕೆ ಅನುಮತಿ ನೀಡಿಲ್ಲ.

    ಮಕಸ್ಸರ್​ನ ಮೇಯರ್​ ಮಹಮ್ಮದ್​ ಇಕ್ಬಾಲ್​ ಸಮದ್​ ಸುಹೇ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಯಾವುದೇ ರೀತಿಯಲ್ಲಿ ಪ್ರೇಮಿಗಳ ದಿನಾಚರಣೆಯನ್ನು ಮಾಡುವಂತಿಲ್ಲ ಎಂದು ಸಾರ್ವಜನಿಕ ಆದೇಶ ಹೊರಡಿಸಿದ್ದಾರೆ. ಈ ಆದೇಶದ ಮೇರೆಗೆ ನಗರದ ಕೆಲವು ಹೋಟೆಲ್​ಗಳ ಮೇಲೆ ದಾಳಿ ಮಾಡಲಾಗಿದ್ದು, ಹೋಟೆಲ್​ ಒಂದರಲ್ಲಿ ಅನೈತಿಕ ಸಂಬಂಧ ಹೊಂದಿದ್ದ ಜೋಡಿಯೊಂದನ್ನು ಬಂಧಿಸಲಾಗಿದೆ. ಜರ್ಮನ್​ ಮತ್ತು ಇಂಡೋನೇಷ್ಯಾ ಮೂಲದ ಇಬ್ಬರು ಅನೈತಿಕ ಸಂಬಂಧ ಹೊಂದಿದ್ದು ಅವರನ್ನು ಬಂಧಿಸಲಾಗಿತ್ತು. ಆದರೆ ಅವರಿಬ್ಬರು ವಿವಾಹ ಪೂರ್ವ ಅನೈತಿಕ ಸೆಕ್ಸ್​ನ ಬಗ್ಗೆ ಉಪನ್ಯಾಸ ನೀಡಲಾರಂಭಿಸಿದ್ದರಿಂದಾಗಿ ಅವರಿಬ್ಬರನ್ನು ಬಿಟ್ಟು ಕಳುಹಿಸಿರುವುದಾಗಿ ಸ್ಥಳೀಯ ಸಾರ್ವಜನಿಕ ಆದೇಶ ಕಚೇರಿಯ ಮುಖ್ಯಸ್ಥ ಇಮಾನ್​ ಹುಡ್​ ತಿಳಿಸಿದ್ದಾರೆ. ಉಳಿದಂತೆ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದ ಐದು ಯುವತಿಯರನ್ನು ದಾಳಿಯು ವೇಳೆ ಸೆರೆ ಹಿಡಿದಿರುವುದಾಗಿ ಹುಡ್​ ತಿಳಿಸಿದ್ದಾರೆ.

    ನಗರದಲ್ಲಿ ಯಾವುದೇ ಅಂಗಡಿಗಳಲ್ಲಿ ಕಾಂಡೋಂಮ್​ನ್ನು ಬಹಿರಂಗವಾಗಿ ಮಾರದಿರುವಂತೆಯೂ ಸಹ ಆದೇಶ ಹೊರಡಿಸಲಾಗಿದೆ. ಕಾಂಡೋಮ್​ಗಳ ಭಿತ್ತಿಚಿತ್ರಗಳನ್ನು ಸಹ ಪ್ರಕಟಿಸದಿರುವಂತೆ ಹೇಳಲಾಗಿದೆ. ಯಾವುದೇ ವ್ಯಕ್ತಿ ಕಾಂಡೋಮ್​ ಕೊಳ್ಳಬೇಕಾದರೆ ಆತ ವಿವಾಹಿತನೇ ಆಗಿರಬೇಕು ಮತ್ತು ಆತನ ಗುರುತಿನ ಚೀಟಿ ತೋರಿಸಿದ ಮೇಲೆ ಮಾತ್ರವೇ ಕಾಂಡೋಮ್​ನ್ನು ಆತನಿಗೆ ನೀಡಬೇಕು ಎಂದು ಎಲ್ಲ ಅಂಗಡಿ ಮುಕ್ಕಟ್ಟುಗಳಿಗೆ ಆದೇಶ ನೀಡಲಾಗಿದೆ.

    ಪ್ರೇಮಿಗಳ ದಿನದಂತಹ ಆಚರಣೆಗಳತ್ತ ಯುವ ಜನತೆ ಆಕರ್ಷಿತವಾಗುತ್ತದೆ. ಇಂತಹ ದಿನಾಚರಣೆಗಳು ಡ್ರಗ್ಸ್​ ಸೇವನೆಗೆ ಮತ್ತು ಸೆಕ್ಸ್​ಗೆ ಪ್ರೇರೇಪಿಸುತ್ತವೆ. ಹಾಗಾಗಿ ಈ ದಿನದ ಆಚರಣೆ ಮಾಡದಿರುವಂತೆ ಆದೇಶ ಹೊರಡಿಸಿರುವುದಾಗಿ ಹುಡ್​ ತಿಳಿಸಿದ್ದಾರೆ.

    ಇದನ್ನೂ ಓದಿ: ಕೊರೊನಾ ವೈರಸ್ ಕಾರಣಕ್ಕೆ ಸಾಗರದ ನಡುವೆ ನಿರ್ಬಂಧಿತವಾಗಿರುವ ಜಪಾನ್ ಹಡಗಿನಲ್ಲೂ ವ್ಯಾಲೆಂಟೈನ್ಸ್ ಡೇ: ಮನಕಲಕುವಂತಿದೆ ಆಚರಣೆ..

    ಸಾಮಾನ್ಯವಾಗಿ ಮುಸ್ಲಿಂ ಪ್ರಧಾನ ದೇಶಗಳಲ್ಲಿ ಪ್ರೇಮಿಗಳ ದಿನಾಚರಣೆಗೆ ಹೆಚ್ಚಿನ ಬೆಂಬಲವನ್ನು ನೀಡಲಾಗುವುದಿಲ್ಲ. ಈ ಆಚರಣೆಯಿಂದಾಗಿ ಧರ್ಮಕ್ಕೆ ಕಳಂಕ ತರುವಂತಹ ಕೆಲಸಗಲಾಗಬಹುದು ಎನ್ನುವ ದೃಷ್ಟಿಯಲ್ಲಿ ಆಚರಣೆಗೆ ಅನುಮತಿ ನಿರಾಕರಿಸಲಾಗುತ್ತದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts