More

    ಕೊರೊನಾ ವೈರಸ್ ಕಾರಣಕ್ಕೆ ಸಾಗರದ ನಡುವೆ ನಿರ್ಬಂಧಿತವಾಗಿರುವ ಜಪಾನ್ ಹಡಗಿನಲ್ಲೂ ವ್ಯಾಲೆಂಟೈನ್ಸ್ ಡೇ: ಮನಕಲಕುವಂತಿದೆ ಆಚರಣೆ..

    ಟೋಕಿಯೊ: ಜಗತ್ತಿನಾದ್ಯಂತ ಇಂದು ವ್ಯಾಲೆಂಟೈನ್ಸ್ ಡೇ ಆಚರಿಸಲಾಗುತ್ತಿದೆ. ಕೊರೊನಾ ವೈರಸ್ ಕಾರಣಕ್ಕೆ ಸಾಗರದ ನಡುವೆ ಹಡಗಿನಲ್ಲೇ ನಿರ್ಬಂಧಿತರಾದವರ ಪ್ರೇಮಿಗಳ ದಿನಾಚರಣೆ ವಿಶಿಷ್ಟವಾಗಿದ್ದು, ಜಗತ್ತಿನ ಗಮನಸೆಳೆದಿದೆ. ಸಂಕಷ್ಟದಲ್ಲೂ ಜೀವಂತಿಕೆ ಮತ್ತು ಲವಲವಿಕೆ ಉಳಿಸಕೊಳ್ಳುವ ಈ ಪ್ರಯತ್ನಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ.

    ಜಪಾನ್​ನ ಡೈಮಂಡ್​ ಪ್ರಿನ್ಸ್​ ಹಡಗಿನಲ್ಲಿ ಇಂದು ಪ್ರೇಮಿಗಳ ದಿನದ ಪ್ರಯುಕ್ತ ಸಿಬ್ಬಂದಿಗಳು ಸೇರಿ ಪ್ರಯಾಣಿಕರೆಲ್ಲರೂ ಪರಸ್ಪರ ಶುಭ ಹಾರೈಸಿಕೊಂಡಿದ್ದಾರೆ. ಸಿಬ್ಬಂದಿಗಳಿಗೆ ಪೇಪರ್​ನಲ್ಲಿ ಮಾಡಿರುವ ಹಾರ್ಟ್ ಸಿಂಬಲ್​ಗಳ ಮೂಲಕ ಪ್ರಯಾಣಿಕರು ಶುಭ ಹಾರೈಸಿದ್ದರೆ, ಪ್ರಯಾಣಿಕರಿಗೆ ವಿಶೇಷ ತಿಂಡಿ ಮತ್ತು ಕೆಲ ಉಡುಗೊರೆಗಳನ್ನು ನೀಡುವ ಮೂಲಕ ಸಿಬ್ಬಂದಿಗಳು ಹಾರೈಸಿದ್ದಾರೆ.

    ಪ್ರೇಮಿಗಳ ದಿನದ ಪ್ರಯುಕ್ತ ನಿರ್ಭಂದಿತ ಪ್ರಿನ್ಸ್​ ಕ್ರೂಸ್ ಹಡಗಿನಲ್ಲಿ ಇಂದು ವಿಶೇಷ ತಿಂಡಿಯನ್ನು ತಯಾರಿಸಲಾಗಿತ್ತು. ವಿಶೇಷ ಡೆಸರ್ಟ್​, ಸಲಾಡ್​, ಇತ್ಯಾದಿಗಳನ್ನು ಪ್ರಯಾಣಿಕರಿಗೆ ನೀಡಲಾಗಿದೆ. ಅದಲ್ಲದೆ ಹಡಗಿನಲ್ಲಿ “you are great”, ” together we must overcome” ಎನ್ನುವಂತಹ ಸ್ಫೂರ್ತಿದಾಯಕ ಮಾತಗಳನ್ನು ಡಿಸ್ಪ್ಲೇ ಮಾಡಲಾಗಿದ್ದು ಕೊರೊನಾ ವೈರಸ್​ ಭಯದಲ್ಲಿರುವ ಜನರಿಗೆ ಸ್ಫೂರ್ತಿ ತುಂಬಲಾಗಿದೆ.

    ಜಪಾನ್​ ಮೂಲದ ಪ್ರಿನ್ಸ್​ ಕ್ರೂಸ್​ ವಿಮಾನದಲ್ಲಿ ಕೊರೊನಾ ವೈರಸ್​ ಪತ್ತೆಯಾಗಿದ್ದು ಹಡಗನ್ನು ಭೂಪ್ರದೇಶಕ್ಕೆ ಭಾರದಿರುವಂತೆ ನಿರ್ಭಂದಿಸಾಗಿದೆ. ಕಳೆದ 10 ದಿನಗಳಿಂದ ಸಮುದ್ರದಲ್ಲಿರುವ ಈ ಹಡಗಿನಲ್ಲಿ 200 ಜನರಲ್ಲಿ ಕೊರೊನಾ ಇರುವುದಾಗಿ ಪತ್ತೆಯಾಗಿದ್ದು ಅವರನ್ನೆಲ್ಲ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಡಗಿನಲ್ಲಿ ಉಳಿದಿರುವವರನ್ನು ಫೆ.19ರವರೆಗೆ ತಪಾಸಣೆಯಲ್ಲಿಟ್ಟು ಕೊರೊನಾ ಇಲ್ಲದಿರುವುದು ಖಾತ್ರಿಯಾದರೆ ಮಾತ್ರ ಅವರನ್ನು ಅವರ ಕುಟುಂಬದವರೊಂದಿಗೆ ಕಳುಹಿಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts