More

    ಡೇಟಿಂಗ್ ಮಾಡುತ್ತಿದ್ದಾರೆ ಜೀನತ್ ಅಮಾನ್ …ಪ್ರೇಮಿಗಳ ದಿನದಂದು ತನ್ನ ಪ್ರೀತಿ ಬಹಿರಂಗಪಡಿಸಿದ 80ರ ದಶಕದ ಹಾಟೆಸ್ಟ್‌ ನಟಿ

    ಮುಂಬೈ: ಹಿರಿಯ ನಟಿ ಜೀನತ್ ಅಮಾನ್ ಬಹುಮುಖ ಪ್ರತಿಭೆಯ ನಟಿಯರಲ್ಲಿ ಒಬ್ಬರು. ಅತ್ಯುತ್ತಮ ನಟನೆಯ ಹೊರತಾಗಿ, ಸೌಂದರ್ಯಕ್ಕೂ ಹೆಸರುವಾಸಿಯಾಗಿದ್ದಾರೆ. 72ರ ಹರೆಯದಲ್ಲೂ ತಮ್ಮ ಉತ್ತಮ ವ್ಯಕ್ತಿತ್ವದಿಂದ ಕೋಟ್ಯಂತರ ಜನರ ಹೃದಯವನ್ನು ಆಳುತ್ತಿದ್ದಾರೆ. ಇತ್ತೀಚೆಗಷ್ಟೇ ಜೀನತ್ ಇನ್‌ಸ್ಟಾಗೆ ಪಾದಾರ್ಪಣೆ ಮಾಡಿದ್ದು, ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಅವರ ಇತ್ತೀಚಿನ ಪೋಸ್ಟ್‌ ಮತ್ತೊಮ್ಮೆ ಸುದ್ದಿ ಮಾಡುತ್ತಿದೆ.

    ಹೌದು, ಜೀನತ್ ಅಮಾನ್ ಡೇಟಿಂಗ್ ಮಾಡುತ್ತಿರುವ ವಿಚಾರವನ್ನು ಪ್ರೇಮಿಗಳ ದಿನದಂದು ಬಹಿರಂಗಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿರುವ ಜೀನತ್, ಪ್ರೇಮಿಗಳ ದಿನದಂದು ತಾನು ಯಾರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇದರೊಂದಿಗೆ ತಮ್ಮ ಅಭಿಮಾನಿಗಳಿಗೆ ಪ್ರೀತಿ, ಸಂಬಂಧಗಳ ಬಗ್ಗೆ ಸಲಹೆಯನ್ನೂ ನೀಡಿದ್ದಾರೆ.

    ಯಾರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ? 
    ನಿನ್ನೆ ಪ್ರೇಮಿಗಳ ದಿನದ ಸಂದರ್ಭದಲ್ಲಿ, ಜೀನತ್ ಕೆಲವು ಫೋಟೋಗಳನ್ನು ತನ್ನ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ತಾನು ಯಾರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಫೋಟೋಗಳನ್ನು ಹಂಚಿಕೊಳ್ಳುವಾಗ, “ಇತ್ತೀಚಿನ ದಿನಗಳಲ್ಲಿ ನಾನು ನನ್ನೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ. ಪಾರ್ಟ್​​​​​ನರ್ ನಿಮಗಾಗಿ ಮಾಡುವ ಎಲ್ಲಾ ಕೆಲಸಗಳನ್ನು ನಾನು ನನಗಾಗಿ ಮಾಡುತ್ತೇನೆ. ನಿಮಗೆ ಬೇಕಾದ ಹಾಗೆ ನಿಮ್ಮನ್ನು ಪ್ರೀತಿಸುವ ವ್ಯಕ್ತಿಯನ್ನು ನೀವು ಪಡೆದುಕೊಳ್ಳಲಾಗದಿದ್ದರೆ, ನೀವು ನಿಮ್ಮನ್ನು ಪ್ರೀತಿಸಬಹುದು” ಎಂದು ಬರೆದುಕೊಂಡಿದ್ದಾರೆ.

    ಈ ವೇಳೆ ಜೀನತ್ ತಮ್ಮ ಅಭಿಮಾನಿಗಳಿಗೆ ಡೇಟಿಂಗ್ ಟಿಪ್ಸ್ ಕೂಡ ನೀಡಿದ್ದಾರೆ. ಜಾತಿ, ಧರ್ಮ, ವರ್ಗ ಮತ್ತು ಲಿಂಗದ ಕಾರಣಕ್ಕಾಗಿ ಯಾವ ಕುಟುಂಬಗಳು ತಮ್ಮ ಸಂಗಾತಿಯನ್ನು ಇಷ್ಟಪಡುವುದಿಲ್ಲವೋ ಅಂತಹ ಪ್ರೇಮಿಗಳಿಗೆ ನಟಿ ಈ ಸಲಹೆಗಳನ್ನು ನೀಡಿದ್ದಾರೆ. ‘ಜಾತಿ, ವರ್ಗ, ಧರ್ಮ, ಲಿಂಗ ಅಥವಾ ಇಂತಹ ಯಾವುದೇ ವಿಷಯದ ಕಾರಣದಿಂದ ನಿಮ್ಮ ಕುಟುಂಬವು ನಿಮ್ಮ ಸಂಬಂಧವನ್ನು ವಿರೋಧಿಸಿದರೆ, ಅವರಿಗೆ ಸವಾಲು ಹಾಕಿ! ಆದರೆ ಈ ಕಾರಣಗಳಿಗಾಗಿ ಸಂಗಾತಿಯನ್ನು ಅವರು ಇಷ್ಟಪಡದಿದ್ದರೆ, ಅವರ ಮಾತನ್ನು ಕೇಳಿ” ಎಂದು ವಿವರವಾಗಿ ತಿಳಿಸಿದ್ದಾರೆ. ಜೀನತ್ ಅವರ ಈ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅವರ ಸಲಹೆಗಳನ್ನು ಅಭಿಮಾನಿಗಳು ಸಹ ತುಂಬಾ ಇಷ್ಟಪಡುತ್ತಿದ್ದಾರೆ.

    ಸಂಜಯ್ ಖಾನ್ ವಿವಾಹವಾದ ಜೀನತ್ 
    ಜೀನತ್ ಅಮಾನ್ 1985 ರಲ್ಲಿ ನಟ ಸಂಜಯ್ ಖಾನ್ ಅವರನ್ನು ರಹಸ್ಯವಾಗಿ ವಿವಾಹವಾದರು. ಸಂಜಯ್ ಖಾನ್ ಆಗಲೇ ಮದುವೆಯಾಗಿದ್ದರು, ಆದರೆ ಅವರು ಜೀನತ್ ಕಡೆಗೆ ಆಕರ್ಷಿತರಾಗಿದ್ದರು. ತಿಂಗಳುಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಸಂಜಯ್ ಖಾನ್ ಮತ್ತು ಜೀನತ್ ಅಮಾನ್ ವಿವಾಹವಾದರು. ಮದುವೆಯಾದ ಸ್ವಲ್ಪ ಸಮಯದ ನಂತರ, ಅವರ ಸಂಬಂಧವು ಹದಗೆಡಲು ಪ್ರಾರಂಭಿಸಿತು ಮತ್ತು ಅವರು ಬೇರಾದರು. ಸಂಜಯ್ ಖಾನ್ ತುಂಬಾ ಕೋಪದ ಸ್ವಭಾವದವರು ಎನ್ನಲಾಗಿದೆ. ಅವರು ಜೀನತ್ ಅಮಾನ್ ಮೇಲೆ ಹಲವಾರು ಬಾರಿ ಕೈ ಎತ್ತಿದ್ದರು, ಇದರಿಂದಾಗಿ ಅವರ ಒಂದು ಕಣ್ಣಿಗೆ ಆಳವಾದ ಗಾಯವಾಗಿತ್ತು. ನಟಿ 40 ವರ್ಷಗಳಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ಅವರು ಈ ನೋವಿನಿಂದ ಮುಕ್ತಿ ಪಡೆದಿದ್ದಾರೆ.

    ಜಯಾ ಬಚ್ಚನ್ ಆಸ್ತಿ ಎಷ್ಟಿದೆ, ಎಷ್ಟು ಕಾರುಗಳಿವೆ, ಅವರ ಕುಟುಂಬದ ಒಟ್ಟು ಸಂಪತ್ತೆಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts