More

    ಗಡಿಭಾಗದ ಜನರ ರಕ್ತದೋಕುಳಿ ತಡೆಯಲು ಭಾರತ-ಪಾಕ್ ಮಾತುಕತೆ ಅವಶ್ಯ- ಹುರಿಯತ್​ !

    ಶ್ರೀನಗರ: ಗಡಿ ನಿಯಂತ್ರಣ ರೇಖೆ (ಎಲ್​ಒಸಿ) ಸಮೀಪ ವಾಸಿಸುವ ಜನರ ರಕ್ತದೋಕುಳಿಯನ್ನು ತಡೆಯುವ ಸಲುವಾಗಿ ಭಾರತ ಮತ್ತ ಪಾಕಿಸ್ತಾನದ ನಡುವೆ ಮಾತುಕತೆ ನಡೆಯಬೇಕಾದ್ದು ಅತೀ ಅವಶ್ಯ ಎಂದು ಮಾಡರೇಟ್​ ಹುರಿಯತ್​ ಕಾನ್ಫರೆನ್ಸ್ ಶನಿವಾರ ಆಗ್ರಹಿಸಿದೆ.

    ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಮಿರ್ವಾಜ್​ ಉಮರ್ ಫಾರೂಕ್ ನೇತೃತ್ವದ ಹುರಿಯತ್ ಕಾನ್ಫರೆನ್ಸ್, ದಶಕಗಳಿಂದ ಬಾಕಿ ಉಳಿದಿರುವ ಜಮ್ಮು-ಕಾಶ್ಮೀರದ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಮತ್ತು ಪಾಕಿಸ್ತಾನಗಳು ಪರಸ್ಪರ ಮಾತುಕತೆ ನಡೆಸಬೇಕು. ವಿನಾಕಾರಣ ಗಡಿಭಾಗದಲ್ಲಿರುವ ಅಮಾಯಕರ ರಕ್ತದೋಕುಳಿ ನಡೆಯುತ್ತಿರುವುದನ್ನು ತಪ್ಪಿಸಬೇಕು. ಅಷ್ಟೇ ಅಲ್ಲ ಎರಡೂ ರಾಷ್ಟ್ರಗಳ ಯೋಧರು ಪ್ರಾಣಕಳೆದುಕೊಳ್ಳುತ್ತಿದ್ದಾರೆ. ಇದನ್ನೂ ಎರಡೂ ಸರ್ಕಾರಗಳು ಪರಿಗಣಿಸಬೇಕು ಎಂದು ಹೇಳಿದೆ.

    ಇದನ್ನೂ ಓದಿ: ಅಕ್ರಮ ಬಾಕ್ಸೈಟ್ ದಂಧೆ ಬಂಟ್ವಾಳ ಶಾಸಕರ ಪತ್ನಿ, ಪಿಡಿಓ ಶಾಮೀಲು ಸಾಬೀತು ಮಾಜಿ ಸಚಿವ ರಮಾನಾಥ ರೈ ಆರೋಪ

    ಪಾಕಿಸ್ಥಾನ ಸೇನೆ ಶುಕ್ರವಾರ ನಡೆಸಿದ ಅಪ್ರಚೋದಿತವಾಗಿ ನಡೆಸಿದ ಭಾರಿ ಫೈರಿಂಗ್ ಮತ್ತು ಶೆಲ್ಲಿಂಗ್ ಕಾರಣ ಐವರು ಯೋಧರು, ಆರು ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಭಾರತೀಯ ಸೇನಾ ಪಡೆ ಕೂಡ ಪ್ರತಿಧಾಳಿ ನಡೆಸಿದ್ದು, ಪಾಕಿಸ್ಥಾನದ 8 ಯೋಧರು ಮೃತಪಟ್ಟು, 12 ಜನ ಗಾಯಗೊಂಡಿದ್ದರು. (ಏಜೆನ್ಸೀಸ್)

    ದಂಡ ಪಾವತಿಸಿದ್ರೂ ಸರಿ ‘ದಾದಾ’ಗಿರಿ ನಿಲ್ಲಲ್ವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts