More

    ದಂಡ ಪಾವತಿಸಿದ್ರೂ ಸರಿ ‘ದಾದಾ’ಗಿರಿ ನಿಲ್ಲಲ್ವಂತೆ!

    ಮುಂಬೈ: ನಗರ ಪಾಲಿಕೆಯೊಂದರ ಉಪಮೇಯರ್ ಅವರು. ತಮ್ಮ ಟೊಯೊಟಾ ಫಾರ್ಚೂನರ್ ವಾಹನಕ್ಕೆ ಫ್ಯಾನ್ಸಿ ನಂಬರ್ ಅಳವಡಿಸಿಕೊಂಡು ಮೋಟಾರು ವಾಹನ ಕಾಯ್ದೆಯ ನಿಯಮ ಉಲ್ಲಂಘಿಸಿದ್ದಲ್ಲದೆ, ವಾರಕ್ಕೆ ಎರಡು ಸಲ ದಂಡವನ್ನೂ ಪಾವತಿಸಿದ್ದಾರೆ. ಆದರೂ, ದಾದಾ ಎಂದು ಹಿಂದಿಯಲ್ಲಿ ಬಿಂಬಿತವಾಗಿರುವ ನಂಬರ್ ಪ್ಲೇಟ್ ಬದಲಾಯಿಸಿಲ್ಲ!

    ಉಲ್ಲಾಸ್​ನಗರ ಮುನ್ಸಿಪಲ್ ಕಾರ್ಪೊರೇಷನಿನ ಡೆಪ್ಯೂಟಿ ಮೇಯರ್ ಆರ್​ಪಿಐ(ಎ) ಪಕ್ಷ ನಾಯಕ ಭಗವಾನ್​ ಭಲೇರಾವ್ ಈ ರೀತಿ ನಿಯಮ ಉಲ್ಲಂಘಿಸಿ ‘ದಾದಾ’ತನ ಮೆರೆಯುತ್ತಿರುವವರು. ತಮ್ಮ ಐಷಾರಾಮಿ ವಾಹನದ ನೋಂದಣಿ ಸಂಖ್ಯೆ 4141 ಅದಾಗಿದ್ದು, ಹಿಂದಿ ಅಂಕಿಯಲ್ಲಿ ನಂಬರ್ ಬರೆಯಿಸಿಕೊಂಡಿದ್ದಾರೆ. ಅದು ಮೇಲ್ನೋಟಕ್ಕೆ ದಾದಾ ಎಂಬಂತೆ ಭಾಸವಾಗುತ್ತಿದೆ.

    ಇದನ್ನೂ ಓದಿ:  ಮಾಯಾವತಿ ಜತೆಗೆ ಮೈತ್ರೀನಾ… !- ಅಖಿಲೇಶ್ ಯಾದವ್ ನೀಡಿದ ಉತ್ತರ ಹೀಗಿದೆ ನೋಡಿ..

    ಈ ನಿಯಮ ಉಲ್ಲಂಘನೆಗಾಗಿ ಉಲ್ಲಾಸ್​ನಗರ ಸಂಚಾರಿ ಪೊಲೀಸರು ಅಕ್ಟೋಬರ್ 29ರಂದು 1,200 ರೂಪಾಯಿ ದಂಡ ವಿಧಿಸಿದ್ದರು. ನಂತರವೂ ದಂಡ ವಿಧಿಸಿದ್ದಾರೆ. ಆದಾಗ್ಯೂ, ಬದಲಾಗಿಲ್ಲ. ಸಾಮಾಜಿಕ ಕಾರ್ಯಕರ್ತೆ ಸರಿತಾ ಕಂಚನ್​ದಾನಿ ಎಂಬುವವರು ಈ ಬಗ್ಗೆ ಸಂಚಾರಿ ಪೊಲೀಸರಿಗೆ ದೂರು ನೀಡುತ್ತ ಬಂದಿದ್ದಾರೆ. ಕಳೆದ ವರ್ಷವೂ ಇದೇ ರೀತಿ ನೀಡಿದ್ದು, ಪೊಲೀಸರ ಕಣ್ತಪ್ಪಿಸಿ ಮತ್ತೆ ಫ್ಯಾನ್ಸಿ ನಂಬರ್ ಪ್ಲೇಟ್ ಹಾಕಿಕೊಂಡು ಓಡಾಡುವುದನ್ನು ಅವರು ಮುಂದುವರಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್)

    ಟಿಫನ್ ಬಾಕ್ಸ್​ನಲ್ಲೇನಿರಬಹುದು ಗೆಸ್ ಮಾಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts