More

    ಪಾಕಿಸ್ತಾನದಿಂದ ಕರೊನಾ ಭಯೋತ್ಪಾದನೆ, ಕಾಶ್ಮೀರಕ್ಕೆ ಕೋವಿಡ್​ 19 ಸೋಂಕಿತ ಉಗ್ರರ ರವಾನೆ

    ಮುಂಬೈ: ವಿಶ್ವಮಾರಿ ಕರೊನಾ ನಿಯಂತ್ರಣಕ್ಕೆ ಭಾರತ ಸೇರಿ ವಿಶ್ವದ ಎಲ್ಲ ರಾಷ್ಟ್ರಗಳು ಕ್ರಮ ಕೈಗೊಳ್ಳುತ್ತಿವೆ. ಆದರೆ, ಇದನ್ನು ಒಂದು ಅವಕಾಶವನ್ನಾಗಿ ಬಳಸಿಕೊಳ್ಳಲು ಪಾಕಿಸ್ತಾನ ಮುಂದಾಗಿದೆ. ಕೋವಿಡ್​ 19 ಸೋಂಕಿತ ಉಗ್ರರನ್ನು ಕಾಶ್ಮೀರದೊಳಗೆ ನುಸುಳಿಸುವ ಮೂಲಕ ಕರೊನಾ ಭಯೋತ್ಪಾದನೆ ಆರಂಭಿಸಿದೆ.

    ಒಂದು ಮೂಲದ ಪ್ರಕಾರ, ಕರೊನಾ ಸೋಂಕಿತ ಉಗ್ರರ ಒಂದು ತಂಡವನ್ನು ಭಾರತದೊಳಗೆ ನುಸುಳಿಸುವಲ್ಲಿ ಪಾಕಿಸ್ತಾನ ಸೇನಾಪಡೆ ಈಗಾಗಲೆ ಯಶಸ್ವಿಯಾಗಿದೆ.

    ಲಷ್ಕರ್​ ಸಂಚು: ಕರೊನಾ ಸೋಂಕಿತ ಉಗ್ರರನ್ನು ಭಾರತದೊಳಗೆ ನುಸುಳಿಸುವುದು ಪಾಕ್​ ಮೂಲದ ಭಯೋತ್ಪಾದನಾ ಸಂಘಟನೆ ಲಷ್ಕರ್​ ಎ ತೊಯ್ಬಾದ ಸಂಚಾಗಿದೆ. ಇದಕ್ಕಾಗಿ ಅದು ಈಗಾಗಲೆ ಕರೊನಾ ಸೋಂಕಿನ ಕುರುಹು ಇರುವ ಉಗ್ರರನ್ನು ಭಾರತದ ಗಡಿಯೊಳಗೆ ನುಸುಳಿಸಿದೆ ಎನ್ನಲಾಗಿದೆ. ಹೀಗೆ ಭಾರತದೊಳಗೆ ನುಸುಳಿ ಬಂದಿರುವ ಕರೊನಾ ಸೋಂಕಿತ ಉಗ್ರರು ಕಾಶ್ಮೀರ ಕಣಿವೆಯಲ್ಲಿ ಕ್ರಿಯಾಶೀಲರಾಗಿರುವ ಉಗ್ರರಿಗೆ ಸೋಂಕನ್ನು ದಾಟಿಸಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

    ಸಿಂಧ್​ ಪ್ರಾಂತ್ಯದಲ್ಲಿ ಕರೊನಾ ಸೋಂಕು ವ್ಯಾಪಕವಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿರುವ ಸೋಂಕಿತ ಯುವಕರನ್ನು ಉಗ್ರರ ಚಟುವಟಿಕೆಗಳಿಗಾಗಿ ಲಷ್ಕರ್​ ನೇಮಿಸಿಕೊಳ್ಳುತ್ತಿದೆ ಎಂದು ಹೇಳಲಾಗಿದೆ. ಈ ವಿಷಯವನ್ನು ಭಾರತೀಯ ಸೇನಾಪಡೆ ಮೂಲಗಳು ಖಚಿತಪಡಿಸಿವೆ.

    ಲಷ್ಕರ್​ನ ಪ್ರಮುಖ ಉಗ್ರ ಹಫೀಜ್​ ಸೈಯೀದ್​ ಸ್ವತಃ ಈ ನೇಮಕಾತಿ ಪ್ರಕ್ರಿಯೆಯ ನಿಗಾವಹಿಸಿರುವುದಾಗಿ ಹೇಳಲಾಗಿದೆ.
    ಕರೊನಾ ಸೋಂಕಿತ ಉಗ್ರರನ್ನು ಭಾರತದ ಗಡಿಯೊಳಗೆ ನುಸುಳಿಸುವ ಮೂಲಕ ಪಾಕಿಸ್ತಾನ, ಕಾಶ್ಮೀರದ ಜನತೆಯ ಬಗ್ಗೆ ತನಗೆ ಯಾವುದೇ ವಿಶೇಷ ಮಮಕಾರ ಅಥವಾ ಕಾಳಜಿ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ. ತಮ್ಮ ದೇಶದಲ್ಲಿನ ಸೋಂಕಿತರನ್ನು ಹೊರಗೋಡಿಸುವ ಮೂಲಕ ಕಾಶ್ಮೀರ ಕಣಿವೆಯಲ್ಲಿ ಸೋಂಕನ್ನು ವ್ಯಾಪಕವಾಗಿ ಹಬ್ಬಿಸಿ, ಜನರ ಪ್ರಾಣತೆಗೆಯುವ ಸಂಚು ರೂಪಿಸಿದೆ ಎಂದು ಸರ್ಕಾರದ ಉನ್ನತ ಮೂಲಗಳು ಆರೋಪಿಸಿವೆ.

    ಏಪ್ರಿಲ್​ 2ರಂದು ಪಾಕ್​ ಸೇನಾಪಡೆ ಸಿಬ್ಬಂದಿ ಕದನ ವಿರಾಮ ಉಲ್ಲಂಘಿಸಿ ಭಾರಿ ಗುಂಡಿನ ದಾಳಿ ನಡೆಸಿದ್ದರು. ಇದನ್ನು ಬೆಂಬಲವಾಗಿಸಿಕೊಂಡು ಐದಾರು ಜನ ಉಗ್ರರ ಗುಂಪು ಕುಪ್ವಾರಾ ಬಳಿಯ ಗಡಿ ನಿಯಂತ್ರಣ ರೇಖೆಯ ಮೂಲಕ ಭಾರತದೊಳಗೆ ನುಸುಳಲು ಮುಂದಾಗಿದ್ದರು. ಇವರ ಚಲನವಲನದ ಮೇಲೆ ನಿಗಾವಹಿಸಿದ್ದಾಗಲೇ ನಿಗೂಢವಾಗಿ ಕಾಣೆಯಾದರು ಎಂದು ಸೇನಾಪಡೆ ಮೂಲಗಳು ತಿಳಿಸಿವೆ.

    ಕರೊನಾ ಸೋಂಕಿತರು ಪಾಕ್​ ಆಕ್ರಮಿತ ಕಾಶ್ಮೀರದ ಭಾಗದಲ್ಲಿರುವ ಲಾಂಚ್​ಪ್ಯಾಡ್​ಗಳಲ್ಲಿ ಹೆಚ್ಚುಕಾಲ ಇರಿಸಿಕೊಂಡರೆ, ಪಾಕ್​ ಯೋಧರಿಗೂ ಸೋಂಕು ತಗಲುವ ಭಯದಲ್ಲಿ ಪಾಕಿಸ್ತಾನ ಅವರೆಲ್ಲರನ್ನೂ ಭಾರತದೊಳಗೆ ನುಸುಳಿಸುತ್ತಿದೆ ಎಂದು ಹೇಳಿವೆ.

    ಒಂದು ಮೂಲದ ಪ್ರಕಾರ ಕರೊನಾ ಸೋಂಕಿತ ಉಗ್ರರು ಇರುವ ಲಾಂಚ್​ಪ್ಯಾಡ್​ಗಳಲ್ಲಿ ಪಾಕ್​ನ 600ಕ್ಕೂ ಹೆಚ್ಚು ಯೋಧರು ಕೋವಿಡ್​ 19 ಸೋಂಕಿಗೆ ತುತ್ತಾಗಿದ್ದಾರೆ ಎಂದು ಹೇಳಲಾಗಿದೆ.

    ದಿನನಿತ್ಯ ಪತ್ನಿ ಜತೆ ಜಗಳದಿಂದ ಬೇಸತ್ತ ಆತ ಫ್ಲೈಓವರ್​ನಿಂದ ಜೋತು ಬಿದ್ದು ಆತ್ಮಹತ್ಯೆಗೆ ಯತ್ನಿಸಿದ… ಮುಂದೇನಾಯಿತು…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts