More

    ಚಿನ್ನದ ಬಳಕೆ ಮೇಲೆ ಕರೊನಾ ವೈರಸ್​ ದಾಳಿ: ಈ ವರ್ಷ ಚಿನ್ನದ ಬಳಕೆ ಕುಸಿಯಲಿದೆ

    ನವದೆಹಲಿ: ಕರೊನಾ ವೈರಸ್​ ಹಾವಳಿ ಹಿನ್ನೆಲೆಯಲ್ಲಿ ಈ ವರ್ಷ ಚಿನ್ನದ ಬಳಕೆ ಕಳೆದ ವರ್ಷಕ್ಕಿಂತ ಶೇ.50 ಕಡಿಮೆಯಾಗುವ ನಿರೀಕ್ಷೆ ಇದೆ.

    ಕರೊನಾ ವೈರಸ್​ ಹಾವಳಿಯಿಂದ ರಾಷ್ಟ್ರದಲ್ಲಿ ಲಾಕ್​ಡೌನ್​ ಇರುವುದರಿಂದ ಚಿನ್ನದ ಮಳಿಗೆಗಳು ಬಾಗಿಲು ಮುಚ್ಚಿವೆ. ಈ ರೀತಿ ಮಳಿಗೆಗಳು ಬಾಗಿಲು ಮುಚ್ಚಿದನ್ನು 30 ವರ್ಷಗಳಿಂದ ಕಂಡೇ ಇಲ್ಲ ಎಂಬುದು ಚಿನ್ನದ ವ್ಯಾಪಾರಿಗಳ ಅಭಿಪ್ರಾಯ.

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಮಳಿಗೆಗಳು ಮುಚ್ಚಿರುವುದರಿಂದ ಚಿನ್ನದ ಪೂರೈಕೆ ಕಡಿಮೆಯಾಗಿ ಚಿನ್ನದ ಬೆಲೆ ದಿಢೀರ್​ ಏರಿಕೆಯಾಗಿದೆ. ಈ ವರ್ಷದ ಏಪ್ರಿಲ್​ ಆರಂಭದಲ್ಲಿ 7 ವರ್ಷಗಳಲ್ಲಿ ಕಾಣದಷ್ಟು ಚಿನ್ನದ ಬೆಲೆ ಏರಿಕೆ ಕಂಡಿದೆ. ದಿಢೀರ್​ ಬೆಲೆ ಏರಿಕೆ ಕೂಡ ಚಿನ್ನದ ಖರೀದಿ ಮೇಲೆ ಪರಿಣಾಮ ಬೀರಿ ಚಿನ್ನದ ಬಳಕೆ ಕಡಿಮೆಯಾಗಲಿದೆ.

    ಈ ವರ್ಷ ಚಿನ್ನದ ಬಳಕೆ 400 ಟನ್​ನಿಂದ 350 ಟನ್​ಗೆ ಇಳಿಯುವ ನಿರೀಕ್ಷೆ ಇದೆ ಎಂದು ಅಖಿಲ ಭಾರತ ಚಿನ್ನಾಭರಣ ಮಾರಾಟಗಾರರ ಸಂಘದ ಅಧ್ಯಕ್ಷ ಎನ್​.ಅನಂತ ಪದ್ಮನಾಭನ್​ ತಿಳಿಸಿದ್ದಾರೆ.

    ಕಳೆದ ವರ್ಷ 690. 4 ಟನ್​ ಚಿನ್ನದ ಬಳಕೆಯಾಗಿತ್ತು. 1991ಲ್ಲಿ ಅತೀ ಕಡಿಮೆ ಚಿನ್ನದ ಬಳಕೆಯಾಗಿದೆ. ಬೇಸಿಗೆಯಲ್ಲಿ ಮದುವೆಗಳು ನಡೆಯುತ್ತಿದ್ದವು. ಲಾಕ್​ಡೌನ್​ ಹಿನ್ನೆಲೆಯಲ್ಲಿ ಮದುವೆಗಳು ನಡೆಯುತ್ತಿಲ್ಲ. ಹೀಗಾಗಿ ಚಿನ್ನ ಖರೀದಿ ಪಾತಾಳ ತಲುಪಿದೆ. ಲಾಕ್​ಡೌನ್​ ಅಂತ್ಯಗೊಂಡರೆ ಅಕ್ಷಯ ತೃತೀಯದಲ್ಲಿ ಚಿನ್ನದ ಖರೀದಿ ನಡೆಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

    ಚಿನ್ನಾಭರಣ ಖರೀದಿ ಕಡಿಮೆಯಾಗಿರುವುದರಿಂದ ಈ ವಲಯದಲ್ಲಿ ದುಡಿಯುತ್ತಿರುವ ಉದ್ಯೋಗಿಗಳ ವೇತನ ಕಡಿತ ಮಾಡುವ ಚಿಂತನೆ ಕೂಡ ನಡೆಯುತ್ತಿದೆ ಎಂದು ಅವರು ತಿಳಿಸಿದರು. (ಏಜೆನ್ಸೀಸ್​)

    VIDEO | ಪ್ರಾಣಿಗಳಿಂದ ಮನುಷ್ಯ ಕಲಿಯಬೇಕಾದುದು ಇದೆ ಎಂಬುದನ್ನು ತೋರಿಸಿಕೊಟ್ಟ ವಿಡಿಯೋ ಯಾವುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts