More

    ಚೀನಾಕ್ಕೆ ಭಾರತೀಯರ ಕೂದಲು ಕಳ್ಳಸಾಗಣೆ!

    ನವದೆಹಲಿ: ಭಾರತೀಯರ ಕೂದಲನ್ನು ಚೀನಾಕ್ಕೆ ಕಳ್ಳಸಾಗಣೆ ಮಾಡುತ್ತಿರುವ ಚೀನೀಯರ ಬೃಹತ್ ಜಾಲದ ಸುಳಿವನ್ನು ಭಾರತದ ಕೂದಲು ರಫ್ತುದಾರರು ಬಯಲುಗೊಳಿಸಿದ್ದಾರೆ. ಹೈದರಾಬಾದ್​ನಿಂದ ಮ್ಯಾನ್ಮಾರ್, ಬಾಂಗ್ಲಾ, ವಿಯೆಟ್ನಾಂ ಮೂಲಕ ಚೀನಿಯರು ಕೂದಲು ಕಳ್ಳಸಾಗಣೆ ಮಾಡುತ್ತಿದ್ದಾರೆ. ಇದರಲ್ಲಿ ತೆರಿಗೆ ವಂಚನೆಯೂ ಅವ್ಯಾಹತವಾಗಿ ನಡೆದಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಈ ದಂಧೆಗೆ ತಡೆಯೊಡ್ಡಬೇಕು ಎಂದು ಭಾರತದ ಕೂದಲು ರಫ್ತುದಾರರು ಡೈರೆಕ್ಟೊರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್​ಐ)ಗೆ ಪತ್ರಬರೆದಿದೆ.

    ವ್ಯವಹಾರ ಹೇಗೆ?: ಹೈದರಾ ಬಾದ್​ನಿಂದ ಮ್ಯಾನ್ಮಾರ್, ಬಾಂಗ್ಲಾ, ವಿಯೆಟ್ನಾಂಗೆ ಏರ್ ಕಾರ್ಗೊ ಮೂಲಕ ಕಚ್ಚಾ ಕೂದಲು ರವಾನೆಯಾಗುತ್ತದೆ. ಇದರ ಇನ್ವಾಯ್್ಸ ನಿಜ ಮೌಲ್ಯಕ್ಕಿಂತ ಕಡಿಮೆ ಇರುತ್ತದೆ. ಕಳ್ಳಸಾಗಣೆದಾರರು ಕೂದಲಿನ ನಿಜ ಮೌಲ್ಯವನ್ನು ಹವಾಲಾ ಹಣದ ಮೂಲಕ ವಿಶೇಷವಾಗಿ ಚಿನ್ನದ ರೂಪದಲ್ಲಿ ಪಡೆಯುತ್ತಾರೆ. ಪಶ್ಚಿಮ ಬಂಗಾಳ ಮತ್ತು ತೆಲಂಗಾಣದ ವ್ಯಾಪಾರಿಗಳು ಈ ರೀತಿ ಕಳ್ಳಮಾರ್ಗ ಅನುಸರಿಸುತ್ತಿದ್ದಾರೆ ಎಂಬ ಬಗ್ಗೆ ರಫ್ತುದಾರರು ಡಿಆರ್​ಐ ಗಮನಸೆಳೆದಿದ್ದಾರೆ.

    ಕಾರಣವೇನು?: ಫೆಮಾ ನಿಯಮ ಪಾಲನೆ ತಪ್ಪಿಸುವುದಕ್ಕಾಗಿ ವಿದೇಶಿ ವಿನಿಮಯ ವರದಿಯಲ್ಲೂ ಕೂದಲಿನ ಮೌಲ್ಯವನ್ನು ಕಡಿಮೆ ಅಂದಾಜಿಸಲಾಗುತ್ತದೆ. ಆದಾಯ ತೆರಿಗೆ ತಪ್ಪಿಸುವುದು, ಚೀನಾದ ಆಮದು ಸುಂಕ ಶೇಕಡ 28 ಇದ್ದು, ಇದನ್ನು ವಂಚಿಸುವುದಕ್ಕಾಗಿ ಬೇರೆ ಬೇರೆ ಭೂಮಾರ್ಗಗಳ ಮೂಲಕ ಚೀನಾಕ್ಕೆ ಭಾರತೀಯರ ಕೂದಲು ಕಳ್ಳಸಾಗಣೆ ಯಾಗುತ್ತಿದೆ ಎಂಬುದು ಭಾರತದ ಕೂದಲು ರಫ್ತುದಾರರ ಅಹವಾಲು.

    ರಫ್ತು ಡೇಟಾದಲ್ಲೇನಿದೆ?: ಹೈದರಾಬಾದ್ ಏರ್ ಕಾರ್ಗೆದ 2018ರ ಏಪ್ರಿಲ್ 1ರಿಂದ 2019ರ ಮಾರ್ಚ್ 31ರ ನಡುವಿನ ಡೇಟಾ ಪ್ರಕಾರ, ಕಚ್ಚಾ ಕೂದಲಿನ ಬೆಲೆ ಸರಾಸರಿ ಒಂದು ಕಿಲೋಕ್ಕೆ 2 ಡಾಲರ್ (-ರೂ;147)ರಿಂದ 62 ಡಾಲರ್ (-ರೂ;4550). ಈ ಅವಧಿಯಲ್ಲಿ ಒಟ್ಟು -ರೂ; 26 ಕೋಟಿ ಕೂದಲು ರವಾನೆಯಾಗಿದೆ. 2016-17ರಲ್ಲಿ ಇದು -ರೂ;42 ಕೋಟಿ ಇತ್ತು. 2017-18ರಲ್ಲಿ -ರೂ;132 ಕೋಟಿಗೆ ಏರಿಕೆಯಾಗಿತ್ತು. ಏಪ್ರಿಲ್ 2020ರಿಂದ ನವೆಂಬರ್ 2020ರ ನಡುವಿನ ಅವಧಿಯಲ್ಲಿ -ರೂ;33 ಕೋಟಿ ಮೌಲ್ಯದ ಕಚ್ಚಾ ಕೂದಲು ರಫ್ತಾಗಿದೆ.

    ಎಲ್ಲಿಂದ ಸಂಗ್ರಹ: ಆಂಧ್ರ, ತೆಲಂಗಾಣಗಳ ದೇವ ಸ್ಥಾನ, ಚರ್ಚ್​ಗಳಿಂದ ಏಲಂ ಮೂಲಕ ಕಚ್ಚಾ ಕೂದಲುಗಳನ್ನು ಸಂಗ್ರಹಿಸಲಾಗುತ್ತದೆ. ಅದೇ ರೀತಿ, ಸಲೂನ್, ಮನೆಗಳಿಂದ ಕೂದಲನ್ನು ಸಂಗ್ರಹಿಸಿ ಕಳ್ಳಸಾಗಣೆ ಮಾಡಲಾಗುತ್ತಿದೆ.

    ಕಳ್ಳಸಾಗಣೆ ದಾರಿ: ಸಂಗ್ರಹಿಸಿದ ಕಚ್ಚಾ ಕೂದಲನ್ನು ಸಿಕಂದರಾಬಾದ್​ನಿಂದ ರೈಲುಗಳ ಮೂಲಕ ಕೋಲ್ಕತ ಅಥವಾ ಗುವಾಹಟಿಗೆ ಸಾಗಿಸಲಾಗುತ್ತದೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಮ್ಯಾನ್ಮಾರ್​ಗೆ ಇದು ರವಾನೆಯಾಗುತ್ತದೆ.

    ಕಡಿಮೆ ಹಣಕ್ಕೆ ರಫ್ತು: ಹ್ಯೂಮನ್ ಹೇರ್ ಆಂಡ್ ಹೇರ್ ಪ್ರಾಡಕ್ಟ್ ್ಸ ಮ್ಯಾನುಫ್ಯಾಕ್ಚರರ್ಸ್ ಆಂಡ್ ಎಕ್ಸ್​ಪೋರ್ಟರ್ಸ್ ಅಸೋಸಿಯೇ ಷನ್ ಆಫ್ ಇಂಡಿಯಾದವರು ಡಿಆರ್​ಐಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿರುವುದು ಇಷ್ಟು -‘ಭಾರತದಿಂದ ಕಾನೂನುಬದ್ಧವಾ ಗಿಯೇ ಅರೆ ಸಂಸ್ಕರಿತ ಕೂದಲುಗಳನ್ನು ಚೀನಾ ಮತ್ತು ಕೊರಿಯನ್ ಕಂಪನಿಗಳು ಆಮದುಮಾಡಿಕೊಳ್ಳುತ್ತಿವೆ. ಸ್ಥಳೀಯ ವಾಗಿ ಲಭ್ಯವಿರುವ ಚೀನೀಯರ ಕೂದಲುಗಳನ್ನು ಸಂಸ್ಕರಿಸಿ ರಫ್ತು ಮಾಡಿದರೆ ಚೀನಾ 9% ರಫ್ತು ಇನ್​ಸೆಂಟಿವ್ ಕೊಡುತ್ತದೆ. ಇದನ್ನು ಕೆಲವು ಚೀನೀಯರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts