More

    30 ಲಕ್ಷ ತಲುಪಿದ ಫೈನಾನ್ಸಿಯಲ್ ಫ್ರೀಡಂ ಆ್ಯಪ್​ ಬಳಕೆದಾರರ ಸಂಖ್ಯೆ: ಡಾ. ಶಶಿ ರೆಡ್ಡಿ IndianMoney.comನ ಹೊಸ ಛೇರ್ಮನ್

    ಬೆಂಗಳೂರು: ಡಾ. ಶಶಿ ರೆಡ್ಡಿ ಇಂಡಿಯನ್ ಮನಿ ಡಾಟ್ ಕಾಂನ ಛೇರ್ಮನ್ ಆಗಿ ಸೆಪ್ಟೆಂಬರ್ 1, 2021 ರಿಂದ ಅಧಿಕಾರ ವಹಿಸಿಕೊಂಡಿದ್ದಾರೆ. ಇಂಡಿಯನ್ ಮನಿ ಡಾಟ್ ಕಾಂ ಹಣಕಾಸು ಶಿಕ್ಷಣ ಮತ್ತು ಜೀವನೋಪಾಯ ಕೌಶಲ್ಯಗಳನ್ನು ಕಲಿಸಿಕೊಡುವ ದೇಶದ ಮುಂಚೂಣಿ ಸಂಸ್ಥೆಯಾಗಿದ್ದು ಸುಮಾರು 30 ಲಕ್ಷ ಜನರು ಇಂಡಿಯನ್ ಮನಿ ಡಾಟ್ ಕಾಂ ನ ಫೈನಾನ್ಸಿಯಲ್ ಫ್ರೀಡಂ ಆ್ಯಪ್ ಅನ್ನು ಸಕ್ರೀಯವಾಗಿ ಬಳಸುತ್ತಿದ್ದಾರೆ.

    ಡಾ. ಶಶಿ ರೆಡ್ಡಿ ಅವರ ನೇತೃತ್ವದ ಎಸ್ಆರ್​ಐ ಕ್ಯಾಪಿಟಲ್, ಇಂಡಿಯನ್ ಮನಿ ಡಾಟ್ ಕಾಂನಲ್ಲಿ ಹೂಡಿಕೆ ಮಾಡಿದ್ದು, ಇದಕ್ಕೂ ಮೊದಲು ಹೈದ್ರಾಬಾದ್ ಏಜೆಂಲ್ಸ್ ಸಂಸ್ಥೆಯವರು ಕೂಡ ಸಂಸ್ಥೆಯಲ್ಲಿ ಹಣ ತೊಡಗಿಸಿಕೊಂಡಿದ್ದರು.

    ಈ ಬೆಳವಣಿಗೆಯ ಬಗ್ಗೆ ಮಾತನಾಡಿದ ಇಂಡಿಯನಿ ಮನಿ ಡಾಟ್ ಕಾಂನ ಸಂಸ್ಥಾಪಕ – ಸಿಇಒ ಸಿ.ಎಸ್. ಸುಧೀರ್, “ಶಶಿ ರೆಡ್ಡಿ ಅವರ ನಾಯಕತ್ವದಲ್ಲಿ, ನಾವು ಮತ್ತೊಂದು ಹಂತದ ಬೆಳವಣಿಗೆ ಸಾಧಿಸಲು ಸಾಧ್ಯವಾಗುತ್ತದೆ. ಅವರ ಮಾರ್ಗದರ್ಶನಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ. ಫೈನಾನ್ಸಿಯಲ್ ಫ್ರೀಡಂ ಆ್ಯಪ್​ನ ನಿರ್ಮಾಣ ಹಂತದಿಂದಲೂ ಶಶಿ ರೆಡ್ಡಿ ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇದು ನಮ್ಮ ಪಾಲಿಗೆ ಹೆಮ್ಮೆಯ ಕ್ಷಣ” ಎಂದರು.

    ಡಾ. ಶಶಿ ರೆಡ್ಡಿ ಮಾತನಾಡಿ, “ಇಂಡಿಯನ್ ಮನಿ ಡಾಟ್ ಕಾಂ ಫೈನಾನ್ಸಿಯಲ್ ಫ್ರೀಡಂ ಆ್ಯಪ್​ ಮೂಲಕ ನೀಡುತ್ತಿರುವ ಸೇವೆ ವಿನೂತನವಾಗಿದ್ದು, ಭಾರತ ಅಥವಾ ವಿದೇಶಗಳಲ್ಲೂ ಈ ರೀತಿಯ ಸೌಲಭ್ಯವಿಲ್ಲ. ಜನರು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಇರುವ ವಿವಿಧ ಬಿಸಿನೆಸ್ ಐಡಿಯಾಗಳ ಬಗ್ಗೆ ನಾವು ವಿಸ್ತೃತ ಮಾಹಿತಿ ನೀಡಿ ನಿರ್ದಿಷ್ಟ ಬಿಸಿನೆಸ್​ನಲ್ಲಿ ಯಶಸ್ಸು ಕಾಣುವುದು ಹೇಗೆ ಎನ್ನುವ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದೇವೆ. ಕುರಿ-ಮೇಕೆ ಸಾಕಾಣಿಕೆ, ಹೂವಿನ ಕೃಷಿ, ಹಣಕಾಸು ನಿರ್ವಹಣೆ ಹೀಗೆ ಅನೇಕ ವಿಚಾರಗಳ ಬಗ್ಗೆ ಜನರ ಜ್ಞಾನ ಹೆಚ್ಚಳ ಮಾಡುತ್ತಿದ್ದೇವೆ. ಅಭಿವೃದ್ಧಿಶೀಲ ಅರ್ಥ ವ್ಯವಸ್ಥೆಯಲ್ಲಿ ಈ ರೀತಿಯ ಕೌಶಲ್ಯವೃದ್ಧಿಯಿಂದ ಜನರ ಬದುಕು ಹಸನಾಗುತ್ತದೆ. ಸಶಕ್ತ ಭಾರತವನ್ನು ನಿರ್ಮಾಣ ಮಾಡುವ ಮಹದುದ್ದೇಶ ಹೊಂದಿರುವ ಸಂಸ್ಥೆಯ ಭಾಗವಾಗುವುದಕ್ಕೆ ಮತ್ತು ಮುನ್ನೋಟವಿರುವ ಸಿ.ಎಸ್.ಸುಧೀರ್​ರಂತಹ ಉದ್ಯಮಿಯ ಜತೆ ಕೈ ಜೋಡಿಸುವುದಕ್ಕೆ ಹೆಮ್ಮೆ ಎನಿಸುತ್ತದೆ” ಎಂದರು.

    ಇಂಡಿಯನ್ ಮನಿ ಡಾಟ್ ಕಾಂ ಹಣಕಾಸು ಶಿಕ್ಷಣ ಮತ್ತು ಜೀವನೋಪಾಯ ಕೌಶಲ್ಯಗಳನ್ನು ಕಲಿಸಿಕೊಡುವ ದೇಶದ ಮುಂಚೂಣಿ ಸಂಸ್ಥೆಯಾಗಿದ್ದು, ಸುಮಾರು 30 ಲಕ್ಷ ಜನರು ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆ್ಯಪ್ ಅನ್ನು ಸಕ್ರೀಯವಾಗಿ ಬಳಸುತ್ತಿದ್ದಾರೆ. ಸದ್ಯ 380 ಕ್ಕೂ ಹೆಚ್ಚು ಕೋರ್ಸ್​ಗಳು ಫೈನಾನ್ಸಿಯಲ್ ಫ್ರೀಡಂ ಆ್ಯಪ್​ನಲ್ಲಿವೆ. ಹಣಕಾಸು ನಿರ್ವಹಣೆ, ಬಿಸಿನೆಸ್, ವೃತ್ತಿ ಜೀವನ, ಕೃಷಿ ಮತ್ತು ಜೀವನ ಕಲೆಗಳು ಎಂಬ 5 ವಿಭಾಗಗಳು ಆ್ಯಪ್​ನಲ್ಲಿದ್ದು ಕನ್ನಡ, ಇಂಗ್ಲೀಷ್, ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ವಿವಿಧ ಕೋರ್ಸ್​ಗಳು ಲಭ್ಯವಿವೆ. ನಿರ್ದಿಷ್ಟ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಸಾಧಕರೇ ಕೋರ್ಸ್​ಗಳಲ್ಲಿ ಮಾರ್ಗದರ್ಶನ ಮಾಡಿದ್ದಾರೆ.

    ಶರೀರದಲ್ಲಿ ಕೆಟ್ಟ ಕೊಬ್ಬಿನಾಂಶ ಕರಗಿಸಿ ಆರೋಗ್ಯ ಕಾಪಾಡುವಲ್ಲಿ ಧಾನ್ಯಗಳ ಪಾತ್ರ ತುಂಬಾ ಮಹತ್ವದ್ದು

    ಕರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಎರಡ್ಮೂರು ದಿನದಲ್ಲಿ 1 ಲಕ್ಷ ರೂ. ಪರಿಹಾರ ಬಿಡುಗಡೆ: ಬೊಮ್ಮಾಯಿ

    ತಮ್ಮ ಮುಂದಿನ ಚಿತ್ರದ ಆಫರ್​ ತಿರಸ್ಕರಿಸಿದ ಸಾಯಿ ಪಲ್ಲವಿಗೆ ಮೆಗಾಸ್ಟಾರ್ ಮೆಚ್ಚುಗೆ: ಅಚ್ಚರಿಯ ಕಾರಣ ಇಲ್ಲಿದೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts