More

    ಭಾರತ ಮಹಿಳಾ ಕ್ರಿಕೆಟ್​ ತಂಡ ಯಾಕೆ ವಿಶ್ವಕಪ್​ ಗೆಲ್ಲಲಿಲ್ಲ ಗೊತ್ತೇ?

    ನವದೆಹಲಿ: ಭಾರತದ ಪುರುಷರ ಕ್ರಿಕೆಟ್​ ತಂಡ ಇದುವರೆಗೆ 3 ವಿಶ್ವಕಪ್​ಗಳನ್ನು (2 ಏಕದಿನ, 1 ಟಿ20) ಜಯಿಸಿದೆ. ಆದರೆ ಮಹಿಳಾ ಕ್ರಿಕೆಟ್​ ತಂಡ ಇದುವರೆಗೆ 3 ವಿಶ್ವಕಪ್​ಗಳಲ್ಲಿ (2 ಏಕದಿನ, 1 ಟಿ20) ಫೈನಲ್​ಗೇರಿದ್ದರೂ, ಪ್ರಶಸ್ತಿ ಜಯಿಸುವಲ್ಲಿ ವಿಫಲವಾಗಿದೆ. ಹಾಗಾದರೆ ಮಹಿಳೆಯರು ಎಡವುತ್ತಿರುವುದು ಎಲ್ಲಿ ಗೊತ್ತೇ? ಭಾರತದ ಮಹಿಳೆಯರ ರಾಷ್ಟ್ರೀಯ ಆಯ್ಕೆ ಸಮಿತಿಯಿಂದ ನಿರ್ಗಮನ ಕಾಣುತ್ತಿರುವ ಅಧ್ಯಕ್ಷೆ ಹೇಮಲತಾ ಕಲಾ ಈ ಬಗ್ಗೆ ವಿವರಣೆ ನೀಡಿದ್ದಾರೆ.

    ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಭಾರತದ ಮಹಿಳೆಯರನ್ನು ಒತ್ತಡವನ್ನು ನಿಭಾಯಿಸಿ ನಿಲ್ಲುವಲ್ಲಿ ವಿಫಲರಾಗುತ್ತಿರುವುದೇ ಅವರು ನಿರಾಸೆ ಅನುಭವಿಸಲು ಪ್ರಮುಖ ಕಾರಣ ಎಂದು ಕಲಾ ಅಭಿಪ್ರಾಯಪಟ್ಟಿದ್ದಾರೆ. ಆಟಗಾತಿರ್ಯರು ದೊಡ್ಡ ಪಂದ್ಯಗಳನ್ನು ಆಡಲು ಸಿದ್ಧರಾಗಿದ್ದಾರೆ. ಆದರೆ ತಂಡದಲ್ಲಿ ಯುವ ಮತ್ತು ಅನುಭವಿಗಳ ಉತ್ತಮ ಮಿಶ್ರಣವಿದ್ದರೂ, ಗೆಲುವು ಸಾಧಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಬ್ಯಾಟಿಂಗ್​ ವೈಫಲ್ಯ ಪ್ರಮುಖವಾಗಿ ಹಿನ್ನಡೆಯಾಗುತ್ತಿದೆ. ಅವರು ಭಾರಿ ಒತ್ತಡಕ್ಕೆ ಸಿಲುಕಿಕೊಳ್ಳುವುದೇ ಇದಕ್ಕೆ ಕಾರಣವಿರಬಹುದು ಎಂದು ಕಲಾ ವಿವರಿಸಿದ್ದಾರೆ. ಈ ವರ್ಷ ಫೆಬ್ರವರಿ-ಮಾರ್ಚ್​ನಲ್ಲಿ ನಡೆದ ಮಹಿಳೆಯರ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ ಫೈನಲ್​ಗೇರಿತ್ತು. ಟಿ20 ವಿಶ್ವಕಪ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್​ಗೇರಿದ್ದ ಭಾರತ, ಆತಿಥೇಯ ಆಸ್ಟ್ರೆಲಿಯಾ ವಿರುದ್ಧ ಸೋತು ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

    ಭಾರತ ಮಹಿಳಾ ಕ್ರಿಕೆಟ್​ ತಂಡ ಯಾಕೆ ವಿಶ್ವಕಪ್​ ಗೆಲ್ಲಲಿಲ್ಲ ಗೊತ್ತೇ?

    ಇದನ್ನೂ ಓದಿ: ನಕಲಿ ಟಿ20 ಲೀಗ್​ ಪ್ರಕರಣ, ಡ್ರೀಮ್​ ಇಲೆವೆನ್​ ವಿರುದ್ಧ ಬಿಸಿಸಿಐ ದೂರು

    ಭಾರತದ ಮಹಿಳೆಯರ ತಂಡ ಇದಕ್ಕೆ ಮುನ್ನ 2017ರಲ್ಲಿ ಏಕದಿನ ವಿಶ್ವಕಪ್​ ಟೂನಿರ್ಯ ಫೈನಲ್​ನಲ್ಲೂ ಎಡವಿತ್ತು. ಆಗ ಆತಿಥೇಯ ಇಂಗ್ಲೆಂಡ್​ ತಂಡದ ವಿರುದ್ಧ ಭಾರತದ ಮಹಿಳೆಯರು ನಿರಾಸೆ ಅನುಭವಿಸಿದ್ದರು. 2004ರ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಭಾರತದ ಮಹಿಳೆಯರು ಆಸ್ಟ್ರೆಲಿಯಾ ವಿರುದ್ಧ ಸೋಲು ಕಂಡಿದ್ದರು. 2018ರಲ್ಲಿ ಮಹಿಳೆಯರ ಏಷ್ಯಾಕಪ್​ ಫೈನಲ್​ನಲ್ಲೂ ಭಾರತದ ಮಹಿಳೆಯರು ಸೋಲು ಕಂಡಿದ್ದರು. 2018ರ ಟಿ20 ವಿಶ್ವಕಪ್​ನಲ್ಲಿ ಉಪಾಂತ್ಯದಲ್ಲಿ ಎಡವಿದ್ದರು.

    ಭಾರತ ಮಹಿಳಾ ಕ್ರಿಕೆಟ್​ ತಂಡ ಯಾಕೆ ವಿಶ್ವಕಪ್​ ಗೆಲ್ಲಲಿಲ್ಲ ಗೊತ್ತೇ?

    2017ರ ಏಕದಿನ ವಿಶ್ವಕಪ್ ಫೈನಲ್​ ಮತ್ತು 2018ರ ಟಿ20 ವಿಶ್ವಕಪ್​ ಸೆಮಿಫೈನಲ್​ ಪಂದ್ಯಗಳ ಸೋಲಿಗೂ ಕಾರಣವೇನೆಂದು ವಿವರಿಸಿರುವ ಕಲಾ, 2017ರಲ್ಲಿ ಬ್ಯಾಟಿಂಗ್​ ಕುಸಿತ ದೊಡ್ಡ ಹಿನ್ನಡೆಯಾಗಿತ್ತು. 229 ರನ್​ ಬೆನ್ನಟ್ಟುವ ವೇಳೆ ಒಂದು ಹಂತದಲ್ಲಿ 3 ವಿಕೆಟ್​ಗೆ 191 ರನ್​ ಪೇರಿಸಿದ್ದೆವು. ಆದರೂ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅಲ್ಲಿ ಗಾಬರಿಯಾಗುವ ಅಗತ್ಯವಿರಲಿಲ್ಲ. ಆದರೂ ನಮ್ಮ ತಂಡ ಗಾಬರಿ ಬಿದ್ದಿತು. ಸೆಮಿಫೈನಲ್​ನಲ್ಲಿ ಆಸ್ಟ್ರೆಲಿಯಾವನ್ನು ಮಣಿಸಿದ್ದೆವು. 2018ರಲ್ಲಿ ಮತ್ತೆ ಆಸ್ಟ್ರೆಲಿಯಾವನ್ನು ಟಿ20 ವಿಶ್ವಕಪ್​ ಟೂರ್ನಿಯ ಲೀಗ್​ ಹಂತದಲ್ಲಿ ಸೋಲಿಸಿದ್ದೆವು ಎಂದು ಹೇಳಿದ್ದಾರೆ. ಕಲಾ ಅವರು ಭಾರತ ಪರ 78 ಏಕದಿನ ಮತ್ತು 7 ಟೆಸ್ಟ್​ ಪಂಯಗಳನ್ನು ಆಡಿದ್ದಾರೆ. 2015ರಿಂದ ಆಯ್ಕೆ ಮಂಡಳಿಯಲ್ಲಿದ್ದ ಅವರು, 2016ರಲ್ಲಿ ಅಧ್ಯಕ್ಷೆಯಾಗಿದ್ದರು. ಜೆಮೀಮಾ ರೋಡ್ರಿಗಸ್​ ಮತ್ತು ಶೆಫಾಲಿ ವರ್ಮ ಅವರಂಥ ಯುವ ಆಟಗಾತಿರ್ಯರಿಗೆ ಅವಕಾಶ ಕಲ್ಪಿಸಿ ಯಶಸ್ಸು ಕಂಡಿದ್ದು ಅವರ ಅವಧಿಯ ಪ್ರಮುಖ ಸಾಧನೆಯಾಗಿದೆ.

    ವಿಂಬಲ್ಡನ್​ ರದ್ದುಗೊಂಡರೂ ಟೆನಿಸ್​ ಆಟಗಾರರಿಗೆ ಸಿಗಲಿದೆ ಬಹುಮಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts