More

    ಗುವಾಹಟಿಯಲ್ಲಿ ಸಿಗುವುದೇ ಸರಣಿ ಗೆಲುವಿನ ಗ್ಯಾರಂಟಿ!: ಇಂದು ಆಸೀಸ್ ಎದುರು 3ನೇ ಟಿ20

    ಗುವಾಹಟಿ: ಸತತ ಎರಡು ಪಂದ್ಯಗಳಲ್ಲಿ ಗೆದ್ದು ಮುನ್ನಡೆ ಕಂಡಿರುವ ಭಾರತದ ಯುವ ತಂಡ ಜಯದ ಓಟ ಮುಂದುವರಿಸುವ ಮೂಲಕ ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ಪ್ರವಾಸಿ ಆಸ್ಟ್ರೇಲಿಯಾ ಎದುರು ಮೂರನೇ ಟಿ20 ಪಂದ್ಯ ಮಂಗಳವಾರ ಬರ್ಸಾಪುರ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸೂರ್ಯಕುಮಾರ್ ಯಾದವ್ ನಾಯಕನಾಗಿ ಮೊದಲ ಸರಣಿ ಜಯದ ನಿರೀಕ್ಷೆಯಲ್ಲಿದ್ದಾರೆ. ಏಕದಿನ ವಿಶ್ವಕಪ್ ಗೆಲುವಿನ ಬಳಿಕ ಮೈಮರೆತಂತಿರುವ ಕಾಂಗರೂ ಪಡೆ ಈ ಸಲ ಪುಟಿದೆದ್ದು ಆತಿಥೇಯರಿಗೆ ತಿರುಗೇಟು ನೀಡುವ ಮೂಲಕ ಸರಣಿ ಜೀವಂತವಿರಿಸುವ ಹಂಬಲದಲ್ಲಿದೆ.

    ಮೊದಲ ಪಂದ್ಯದಲ್ಲಿ ಬೌಲಿಂಗ್ ವಿಭಾಗದ ವೈಲ್ಯದ ಬಳಿಕ 2ನೇ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ನೀಡಿರುವ ಯುವ ವೇಗಿಗಳು ಲಯಕ್ಕೆ ಮರಳಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ರನ್ ಪ್ರವಾಹಹರಿಸಿರುವ ಬ್ಯಾಟರ್‌ಗಳು ಭರ್ಜರಿ ಾರ್ಮ್‌ನಲ್ಲಿದ್ದಾರೆ. ಅಗ್ರ ಕ್ರಮಾಂಕದ ಮೂವರು ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ ಹಾಗೂ ಋತುರಾಜ್ ಗಾಯಕ್ವಾಡ್ ಅರ್ಧಶತಕ ಸಿಡಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದಾರೆ. ಪವರ್‌ಪ್ಲೇನಲ್ಲಿ ಯಶಸ್ವಿ ಜೈಸ್ವಾಲ್ ಆಟ ಮುಂದುವರಿದಿದೆ.

    ಋತುರಾಜ್ ಗಾಯಕ್ವಾಡ್ ನಿಧಾನಗತಿಯ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ಒದಗಿಸಿದ್ದು, ಬಿರುಸಿನ ಆರಂಭ ಒದಗಿಸುವತ್ತ ಗಮನಹರಿಸಬೇಕಾಗಿದೆ. ಇನ್ನು ಐಪಿಎಲ್‌ನಲ್ಲಿ ಮಿಂಚಿರುವ ರಿಂಕು ಸಿಂಗ್ ಸ್ಲಾಗ್ ಓವರ್‌ಗಳಲ್ಲಿ ಉಪಯುಕ್ತ ಆಟದೊಂದಿಗೆ ಎರಡು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು, ಟಿ20 ವಿಶ್ವಕಪ್‌ಗೂ ಮುನ್ನ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳವತ್ತ ಚಿತ್ತ ಹರಿಸಿದ್ದಾರೆ. ಬ್ಯಾಟಿಂಗ್ ಸ್ವರ್ಗ ಎನಿಸಿರುವ ಬರ್ಸಾಪುರ ಅಂಗಣದಲ್ಲಿಯೂ ಭಾರತೀಯ ಬ್ಯಾಟರ್‌ಗಳು ನಿರ್ಭೀತಿಯ ಆಟದ ಮೂಲಕ ಆಸೀಸ್ ಬೌಲರ್‌ಗಳಿಗೆ ಸವಾಲೊಡ್ಡುವ ನಿರೀಕ್ಷೆಯಲ್ಲಿದ್ದಾರೆ.

    ಟೀಮ್ ನ್ಯೂಸ್:
    ಭಾರತ: ಎರಡು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತದ ಗೆಲುವಿನ ಕಾಂಬಿನೇಷನ್‌ನಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಹಿಂದಿನ ಪಂದ್ಯ ತಂಡವನ್ನೇ ಉಳಿಸಿಕೊಂಡು ಸರಣಿ ವಶಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಆದರೆ 2 ಪಂದ್ಯಗಳ 8 ಓವರ್‌ಗಳಲ್ಲಿ 87 ರನ್ ಬಿಟ್ಟುಕೊಟ್ಟಿರುವ ಎಡಗೈ ವೇಗಿ ಅರ್ಷದೀಪ್ ಸಿಂಗ್ ಕೈಬಿಟ್ಟರೆ ಅಚ್ಚರಿಯೂ ಇಲ್ಲ.
    ಆಸ್ಟ್ರೇಲಿಯಾ: ಜೇಸನ್ ಬೆಹ್ರನ್‌ಡಾರ್ ಅವರನ್ನು ಕೈಬಿಟ್ಟು ದುಬಾರಿ ಬೆಲೆ ತೆತ್ತಿರುವುದರಿಂದ ವಾಪಸ್ ಆಗಬಹುದು. ವಿಶ್ವಕಪ್ ೈನಲ್ ಹೀರೋ ಟ್ರಾವಿಸ್ ಹೆಡ್ ವಿಶ್ರಾಂತಿಯಿಂದ ಮರಳಿದರೆ, ತನ್ವೀರ್ ಸಂಘ ಅಥವಾ ಸೀನ್ ಅಬೋಟ್ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ.

    ಆರಂಭ: ರಾತ್ರಿ 7
    ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ, ಡಿಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts