More

    ಕರೊನಾ ಕ್ವಾರಂಟೈನ್ ಉಲ್ಲಂಘಿಸಿದ ಭಾರತೀಯನಿಗೆ ಬಹ್ರೈನ್​ನಲ್ಲಿ 3 ವರ್ಷ ಜೈಲು ಶಿಕ್ಷೆ! ಸಹಾಯಕ್ಕೆ ಮೊರೆ

    ಬಹ್ರೈನ್ : ಕೋವಿಡ್ 19 ನಿಯಮಗಳ ಉಲ್ಲಂಘನೆಗಾಗಿ ಬಹ್ರೈನ್​ನಲ್ಲಿ 3 ವರ್ಷ ಜೈಲು ಶಿಕ್ಷೆಗೊಳಗಾಗಿರುವ ತನ್ನ ತಮ್ಮನ ಬಿಡುಗಡೆಗೆ ಸಹಾಯ ಮಾಡಬೇಕೆಂದು ಹೈದರಾಬಾದ್​ ನಿವಾಸಿಯೊಬ್ಬರು ವಿದೇಶಾಂಗ ಸಚಿವಾಲಯದ ಮೊರೆ ಹೋಗಿದ್ದಾರೆ. ಬಿಹಾರ ಮೂಲದ ಮೊಹಮ್ಮದ್​ ಖಾಲಿದ್​ ಎಂಬುವನಿಗೆ ಕ್ವಾರಂಟೈನ್​ ಮೀರಿ ಓಡಾಡಿದ ಆರೋಪದ ಮೇಲೆ ಬಹ್ರೈನ್​ನಲ್ಲಿ ಜೈಲು ಶಿಕ್ಷೆಯೊಂದಿಗೆ 10 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

    ಅಕ್ರಮವಾಗಿ ಶಿಕ್ಷೆ ವಿಧಿಸಲಾಗಿದೆ ಎಂದಿರುವ ಖಾಲಿದ್​ನ ಕುಟುಂಬಸ್ಥರು, ಈ ವಿಚಾರದಲ್ಲಿ ಭಾರತ ಸರ್ಕಾರವು ಮಧ್ಯಸ್ತಿಕೆ ವಹಿಸಿ ಆತ​ನ ಬಿಡುಗಡೆಗೆ ಅನುವು ಮಾಡಿಕೊಡಬೇಕೆಂದು ಕೋರಿದ್ದಾರೆ. ಖಾಲಿದ್​ ಸಹೋದರ ಎನ್ನಲಾದ ಹುಸ್ಸೈನ್ ಅಹಮದ್​ ಎಂಬುವರು ಈ ಬಗ್ಗೆ ವಿದೇಶಾಂಗ ಸಚಿವ ಎಸ್​.ಜೈಶಂಕರ್​ ಅವರಿಗೆ ಪತ್ರ ಬರೆದಿದ್ದಾರೆ.

    ಇದನ್ನೂ ಓದಿ: ಡೇಟಿಂಗ್​ ಆ್ಯಪ್​ ಮೂಲಕ ಪುಸಲಾಯಿಸಿ ಕರೆದರು, ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್​ ಮಾಡಿದರು!

    ಕಳೆದ 8 ವರ್ಷಗಳಿಂದ ಬಹ್ರೈನ್​ನ ಜಾಹೆಕಾನ್​ ಕಂಪನಿಯಲ್ಲಿ ಎಲೆಕ್ಟ್ರಿಷಿಯನ್​ ಆಗಿ ಕೆಲಸ ಮಾಡುತ್ತಿರುವ ಮೊಹಮ್ಮದ್​ ಖಾಲಿದ್​​ಗೆ ಮೇ 18 ರಂದು ಕರೊನಾ ಪಾಸಿಟೀವ್ ಬಂತು. ಕೋವಿಡ್​ ಕ್ಯಾಂಪ್​ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಮೇ 31 ಕ್ಕೆ ಡಿಸ್ಚಾರ್ಜ್​ ಆದ. ನಂತರ 17 ದಿನಗಳ ಮಟ್ಟಿಗೆ ಮನೆಯಲ್ಲೇ ಕ್ವಾರಂಟೈನ್ ಆಗಲು ಹೇಳಲಾಗಿತ್ತು. ಕಂಪೆನಿ ಒದಗಿಸಿದ್ದ ಜಾಗದಲ್ಲಿ ವಾಸಿಸುತ್ತಿದ್ದು, ಊಟದ ವ್ಯವಸ್ಥೆ ಇಲ್ಲದ್ದರಿಂದ ಜೂನ್ 7 ರಂದು ಆಹಾರ ಖರೀದಿಸಲು ಹೊರಗೆ ಹೋಗಿದ್ದ. ಆ ಸಮಯದಲ್ಲಿ ಸ್ಥಳೀಯರೊಬ್ಬರು ಆತ​ ಎಲೆಕ್ಟ್ರಾನಿಕ್ ಟ್ರ್ಯಾಕರ್​ ವ್ರಿಸ್ಟ್​ಬ್ಯಾಂಡ್​ ಹಾಕಿಕೊಂಡು ಓಡಾಡುತ್ತಿದ್ದಾನೆಂದು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದರು. ತಕ್ಷಣ ಖಾಲಿದ್​ನನ್ನು ಬಂಧಿಸಲಾಯಿತು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

    ಬಂಧನದ ನಂತರ ಆತನ ಕೋವಿಡ್​ ಪರೀಕ್ಷೆ ಮಾಡಿದಾಗ ನೆಗೆಟೀವ್ ಬಂತು. ಆದಾಗ್ಯೂ ಅವನಿಗೆ 3 ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಯಿತು. ಕುಟುಂಬವು ಬಡತನದ ಕಾರಣದಿಂದಾಗಿ ಕಾನೂನು ಸಹಾಯ ಪಡೆಯಲು ಅಸಮರ್ಥವಾಗಿದ್ದು, ಭಾರತ ಸರ್ಕಾರ ಅವನ ಬಿಡುಗಡೆಗೆ ಸಹಾಯ ಮಾಡಬೇಕೆಂದು ಹುಸ್ಸೈನ್ ಅಹಮದ್​ ಮನವಿ ಮಾಡಿದ್ದಾರೆ. (ಏಜೆನ್ಸೀಸ್)

    ವಿದ್ಯುತ್​ ದರ ಹೆಚ್ಚಳ ಹಿಂಪಡೆಯಲು, ತೆರಿಗೆ ಇಳಿಸಲು ಎಫ್​ಕೆಸಿಸಿಐ ಆಗ್ರಹ

    VIDEO | ಕ್ರಿಕೆಟಿಗ ಯಜ್ವೇಂದ್ರ ಚಹಲ್​ ಡ್ಯಾನ್ಸ್​ ಸ್ಟೆಪ್ಸ್​ ನೋಡಿ!

    ಕುಂಭ ಮೇಳದ ವೇಳೆ ನಕಲಿ ಕರೊನಾ ಪರೀಕ್ಷಾ ವರದಿ : ತನಿಖೆ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts