ಕುಂಭ ಮೇಳದ ವೇಳೆ ನಕಲಿ ಕರೊನಾ ಪರೀಕ್ಷಾ ವರದಿ : ತನಿಖೆ ಆರಂಭ

ಹರಿದ್ವಾರ : ಉತ್ತರಾಖಂಡದ ಹರಿದ್ವಾರದಲ್ಲಿ ಕಳೆದ ಏಪ್ರಿಲ್​ನಲ್ಲಿ ನಡೆದ ಕುಂಭ ಮೇಳದ ಸಂದರ್ಭದಲ್ಲಿ ಖಾಸಗಿ ಲ್ಯಾಬ್​ಗಳು ಸುಮಾರು 1 ಲಕ್ಷಕ್ಕೂ ಹೆಚ್ಚು ನಕಲಿ ವರದಿಗಳನ್ನು ನೀಡಿರಬಹುದು ಎಂದು ರಾಜ್ಯ ಆರೋಗ್ಯ ಇಲಾಖೆ ಅನುಮಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಮೇಳದ ಸಮಯದಲ್ಲಿ ಕರೊನಾ ಪರೀಕ್ಷೆಗಳನ್ನು ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದ ಖಾಸಗಿ ಲ್ಯಾಬ್​ಗಳ ವಿರುದ್ಧ ಹರಿದ್ವಾರ ಜಿಲ್ಲಾಡಳಿತಕ್ಕೆ ಪ್ರಕರಣ ದಾಖಲಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ. ಕುಂಭ ಮೇಳದ ಸಮಯದಲ್ಲಿ ಪ್ರತಿದಿನ 50,000 ಕರೊನಾ ಟೆಸ್ಟ್​ಗಳನ್ನು ನಡೆಸಬೇಕೆಂದು ಹೈಕೋರ್ಟ್​ … Continue reading ಕುಂಭ ಮೇಳದ ವೇಳೆ ನಕಲಿ ಕರೊನಾ ಪರೀಕ್ಷಾ ವರದಿ : ತನಿಖೆ ಆರಂಭ